ಚನ್ನಗಿರಿ: ತಾಲ್ಲೂಕು ನೇಕಾರರ ಒಕ್ಕೂಟದ ಆಶ್ರಯದಲ್ಲಿ ನ. 9ರಂದು ಶುಕ್ರವಾರ ಪಟ್ಟಣದ ಸರ್ಕಾರಿ ಬಾಲಿಕಾ ಪ್ರೌಢಶಾಲಾ ಆವರಣದಲ್ಲಿ ಹಾಕಿರುವ `ದೇವರ ದಾಸಿಮಯ್ಯ ವೇದಿಕೆ~ಯಲ್ಲಿ ಬೆಳಿಗ್ಗೆ 11ಕ್ಕೆ ತಾಲ್ಲೂಕು ನೇಕಾರ ಸಂಘದ ಉದ್ಘಾಟನೆ ಮತ್ತು ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಸಮಾವೇಶದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ, ರಾಜ್ಯ ನೇಕಾರರ ಒಕ್ಕೂಟದ ಅಧ್ಯಕ್ಷ, ಕೈಮಗ್ಗ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ್ ನೆರವೇರಿಸಲಿದ್ದು, ಹಂಪಿಯ ದಯಾನಂದಪುರಿ ಸ್ವಾಮೀಜಿ, ದೊಡ್ಡಬಳ್ಳಾಪುರದ ದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ, ಗುಳೇದಗುಡ್ಡದ ಬಸವರಾಜ ಪಟ್ಟಾದಾರ್ಯ ಸ್ವಾಮೀಜಿ, ಬೆಟಗೆರೆಯ ಶಂಕರ ಶಿವಾಚಾರ್ಯ ಸ್ವಾಮೀಜಿ, ಹರಿಹರದ ಪ್ರಭುಲಿಂಗ ಸ್ವಾಮೀಜಿ ಹಾಗೂ ಚನ್ನಗಿರಿಯ ಜಯದೇವ ಸ್ವಾಮೀಜಿ ಅವರು ನೇತೃತ್ವ ವಹಿಸಲಿದ್ದಾರೆ ಎಂದು ತಾಲ್ಲೂಕು ನೇಕಾರರ ಸಂಘದ ಅಧ್ಯಕ್ಷ ಟಿ.ಆರ್. ಉಮಾಪತಿ ತಿಳಿಸಿದರು.

ಸಮಾರಂಭದಲ್ಲಿ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಎಂ. ಬಸವರಾಜ ನಾಯ್ಕ, ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಮಹಿಮ ಪಟೇಲ್, ಹೊದಿಗೆರೆ ರಮೇಶ್, ಡಾ. ಜಿ. ರಮೇಶ್, ಎನ್. ಶ್ರೀನಿವಾಸ್, ಕುರುಹಿನ ಶೆಟ್ಟಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಬಿ. ಈಶ್ವರಪ್ಪ, ಎ.ಎಸ್. ಬಸವರಾಜ್, ಪ್ರೇಮಾ ಸಿದ್ದೇಶ್, ಪುಷ್ಪಲತಾ ಜಗದೀಶ್, ಟಿ.ಆರ್. ಭೋಜರಾಜ್, ಅಮಾನುಲ್ಲಾ, ಮಹೇಶ್ವರಪ್ಪ, ಜಿ.ಟಿ.

ಕುಮಾರ್, ಎಂ. ಲಕ್ಷ್ಮೀನಾರಾಯಣ್, ಪ್ರೊ.ಎಲ್. ಸತ್ಯನಾರಾಯಣ್, ಗೋವಿಂದಪ್ಪ, ಎಸ್.ಎಂ. ವಾಸಣ್ಣ, ಎ.ಎಸ್. ಮುರುಳಿಧರ್, ಎಂ.ಎಚ್. ಪುಟ್ಟರಾಮಪ್ಪ ಚಲನಚಿತ್ರ ನಟಿಯರಾದ ಉಮಾಶ್ರೀ, ಪ್ರೇಮ್, ಹಂಸಲೇಖ, ಎನ್. ನಾಗೇಂದ್ರಪ್ರಸಾದ್, ಎಸ್. ವಿಶ್ವಾಸ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ತಾಲ್ಲೂಕಿನಲ್ಲಿ ಇದೇ ಪ್ರಥಮ ಬಾರಿಗೆ ಸಮಾವೇಶವನ್ನು ನಡೆಸಲಾಗುತ್ತಿದೆ. ತಾಲ್ಲೂಕಿನಲ್ಲಿ ಈ ಜನಾಂಗದ ಸಂಖ್ಯೆ 9 ಸಾವಿರ ಇದೆ.

ಕುಲಕಸುಬು ಇಲ್ಲದೇ ಕೂಲಿ, ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಜನಾಂಗದವರಿಗೆ ರಾಜಕೀಯವಾಗಿ ಪ್ರಾತಿನಿಧ್ಯ ದೊರಕಿಲ್ಲ. ನೇಕಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಒಂದು ಜವಳಿ ಪಾರ್ಕ್ನ್ನು ಆರಂಭಿಸಿ ಆರ್ಥಿಕವಾಗಿ ಹಿಂದುಳಿದ ಈ ಜನಾಂಗದವರಿಗೆ ಪ್ರೋತ್ಸಾಹ ನೀಡುವ ಅಗತ್ಯ ಇದೆ.

ಇದೇ ಸಂದರ್ಭದಲ್ಲಿ ಈ ಜನಾಂಗದ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜನಾಂಗದ ಗಣ್ಯರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9ಕ್ಕೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೇಕಾರ ನೇತಾರರ ಬೃಹತ್ ಮೆರವಣಿಗೆ ಕಾರ್ಯಕ್ರಮ ಇದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಈ ಸಮಾವೇಶದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶ್ವಸಿ ಗೊಳಿಸಬೇಕು ಎಂದು ಉಮಾಪತಿ ಮನವಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.