ಭಾನುವಾರ, ಮೇ 22, 2022
24 °C

ಇಂದು ದರ್ಶನ್, ಕಟ್ಟಾ ಭವಿಷ್ಯ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:ಕೆಐಎಡಿಬಿ ಭೂ ಹಗರಣದಲ್ಲಿ ಸಿಲುಕಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಪತ್ನಿಯ ಮೇಲೆ ಗಂಭೀರ ಹಲ್ಲೆ ನಡೆಸಿರುವ ಆರೋಪ ಹೊತ್ತ ಚಿತ್ರನಟ ದರ್ಶನ್ ಅವರ `ಜೈಲುವಾಸದ ಭವಿಷ್ಯ~ ಮಂಗಳವಾರ ನಿರ್ಧಾರ ಆಗಲಿದೆ.ನಾಯ್ಡು ಅವರಿಗೆ ಜಾಮೀನು ನೀಡಿಕೆ ಕುರಿತಾದ ಆದೇಶವನ್ನು ಲೋಕಾಯುಕ್ತ ವಿಶೇಷ ಕೋರ್ಟ್ ಪ್ರಕಟಿಸಲಿದ್ದರೆ, ದರ್ಶನ್ ಪ್ರಕರಣದ ವಿಚಾರಣೆಯು ಹೈಕೋರ್ಟ್ ಮುಂದೆ ಬರಲಿದೆ.ಕ್ಯಾನ್ಸರ್‌ಗೆ ತುರ್ತಾಗಿ ಚಿಕಿತ್ಸೆ ಪಡೆಯಬೇಕಿರುವ ಹಿನ್ನೆಲೆಯಲ್ಲಿ ತಮಗೆ ಜಾಮೀನು ಮಂಜೂರು ಮಾಡುವಂತೆ ಕೋರಿ ಕಟ್ಟಾ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ಕೋರ್ಟ್ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಆದೇಶ ಪ್ರಕಟಿಸಲಿದ್ದಾರೆ. ಇವರು ಆಗಸ್ಟ್ 7ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.ಇನ್ನೊಂದೆಡೆ, ಸೆಪ್ಟೆಂಬರ್ 9ರಿಂದ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್, ಜಾಮೀನು ಕೋರಿ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ರಜಾಕಾಲದ ನ್ಯಾಯಮೂರ್ತಿ ಬಿ.ವಿ.ಪಿಂಟೊ ನಡೆಸಲಿದ್ದಾರೆ. ಇವರ ಮೇಲಿರುವ ಆಪಾದನೆ ಗಂಭೀರ ಸ್ವರೂಪದ್ದಾಗಿದ್ದು ಜಾಮೀನು ನೀಡಿಕೆ ಸಾಧ್ಯವಿಲ್ಲ ಎಂಬ ಸೆಷನ್ಸ್ ಕೋರ್ಟ್ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಕಳೆದ ಬಾರಿ ವಿಚಾರಣೆ ವೇಳೆ ಜಾಮೀನು ನೀಡಲು ನಿರಾಕರಿಸಿದ್ದ ಕೋರ್ಟ್, ವಿಚಾರಣೆಯನ್ನು 2 ವಾರಗಳ ಕಾಲ ಮುಂದೂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.