ಮೀರ್ಪುರ (ಪಿಟಿಐ): ಬಾಂಗ್ಲಾದೇಶ ವಿರುದ್ಧ ಗೆಲುವು ಪಡೆದು ಐತಿಹಾಸಿಕ ಸಾಧನೆ ಮಾಡಿರುವ ಆಫ್ಘಾನಿಸ್ತಾನ ತಂಡದವರು ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸೋಮವಾರ ಶ್ರೀಲಂಕಾದ ಸವಾಲನ್ನು ಎದುರಿಸಲಿದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ಆಫ್ಘನ್ ತಂಡ ಆತಿಥೇಯ ತಂಡವನ್ನು ಮಣಿಸಿತ್ತು. ಈ ಮೂಲಕ ಟೆಸ್ಟ್ ಆಡುವ ತಂಡವೊಂದರ ವಿರುದ್ಧ ಚೊಚ್ಚಲ ಜಯ ಸಾಧಿಸಿತ್ತು. ಇದೀಗ ಲಂಕಾ ತಂಡಕ್ಕೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.

ಆದರೆ ಏಂಜೆಲೊ ಮ್ಯಾಥ್ಯೂಸ್ ಬಳಗದ ವಿರುದ್ಧ ಆಫ್ಘನ್ಗೆ ಗೆಲುವು ಪಡೆಯುವುದು ಅಷ್ಟು ಸುಲಭವಲ್ಲ. ಏಕೆಂದರೆ ಪಾಕಿಸ್ತಾನ ಮತ್ತು ಭಾರತದ ವಿರುದ್ಧ ಗೆಲುವು ಪಡೆದಿರುವ ಲಂಕಾ ತಂಡ ಈಗಾಗಲೇ ಹೆಚ್ಚುಕಡಿಮೆ ಫೈನಲ್ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ.

ಮೊಹಮ್ಮದ್ ನಬಿ ನೇತೃತ್ವದ ಆಫ್ಘಾನಿಸ್ತಾನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಿದ್ದರೂ ಸಾಕಷ್ಟು ಪ್ರತಿರೋಧ ಒಡ್ಡಿತ್ತು. 117 ರನ್ಗಳಿಗೆ ಪಾಕ್ ತಂಡದ ಆರು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿತ್ತು.

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಆಫ್ಘನ್ ಎಲ್ಲ ವಿಭಾಗಗಳಲ್ಲೂ ಚೇತರಿಕೆಯ ಪ್ರದರ್ಶನ ನೀಡಿತ್ತು. ಲಂಕಾ ತಂಡವನ್ನು ಮಣಿಸಿ ಕ್ರಿಕೆಟ್ ಜಗತ್ತನ್ನು ನಿಬ್ಬೆರಗಾಗಿ ಸುವ ಕನಸಿನಲ್ಲಿ ಈ ತಂಡ ಇದೆ.

ಮ್ಯಾಥ್ಯೂಸ್ ಬಳಗ ಭಾರತ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಅಮೋಘ ಆಟ ತೋರಿದೆ. ಕುಮಾರ ಸಂಗಕ್ಕಾರ ಮತ್ತು ಲಾಹಿರು ತಿರಿಮಾನೆ ಬ್ಯಾಟಿಂಗ್ ವಿಭಾಗದ ಬಲ ಎನಿಸಿಕೊಂಡಿದ್ದಾರೆ. ಇವರಿಬ್ಬರು ಕ್ರಮವಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ವಿರುದ್ಧ ಶತಕ ಗಳಿಸಿದ್ದರು.

ಪಂದ್ಯದ ಆರಂಭ: ಮಧ್ಯಾಹ್ನ 1.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋಟ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.