ಹುಣಸೂರು: ಮತ್ತೊಂದು ವಿಶ್ವ ಅರಣ್ಯ ದಿನಾಚರಣೆಯನ್ನು ಬುಧವಾರ ಆಚರಿಸಲಾ ಗುತ್ತಿದೆ. ಆದರೆ ಅರಣ್ಯ ಇಲಾಖೆಯ ಸಿಬ್ಬಂದಿ ಕೊರತೆ ಮಾತ್ರ ಇಂದಿಗೂ ನೀಗಿಲ್ಲ!

ಇತ್ತೀಚೆಗೆ ಕಾಡ್ಗಿಚ್ಚಿಗೆ ನಲುಗಿದ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ರಾಜ್ಯ ಸರ್ಕಾರದ ನಿರ್ದೇಶನದ ಪ್ರಕಾರ 104 ಗಾರ್ಡ್ಗಳು ಇರಬೇಕು. ಆದರೆ ಇಲಾಖೆಯ ಮೂಲಗಳ ಪ್ರಕಾರ. ಈಗ ಇರುವುವರು 74 ಮಂದಿ ಮಾತ್ರ. ಇವರಲ್ಲಿ ಮೂರನೇ ಒಂದರಷ್ಟು ನೌಕರರು ತರಬೇತಿಗೆ ಹೋಗಿದ್ದಾರೆ. 33 ಸಿಬ್ಬಂದಿ ಫಾರೆಸ್ಟರ್ ಇರಬೇಕು. ಆದರೆ ಇರುವುದು 24 ಮಾತ್ರ. 35 ವಾಚರ್ಸ್ಗಳಲ್ಲಿ ಕೇವಲ 14 ವಾಚರ್ಸ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೀರನಹೊಸಹಳ್ಳಿ, ಆನೆಚೌಕೂರು, ಕಲ್ಲಹಳ್ಳ ವಿಭಾಗದಲ್ಲಿ ಆರ್.ಎಫ್.ಒ ಹುದ್ದೆ ಖಾಲಿ ಇವೆ. ಇಷ್ಟೆಲ್ಲಾ ನೌಕರರ ಕೊರತೆ ಹೊಂದಿರುವ ನಾಗರಹೊಳೆ ಪ್ರತಿ ವರ್ಷವೂ ಕಾಡಿನ ಬೆಂಕಿಗೆ ಬಲಿಯಾಗುತ್ತಿದೆ.

ಅರಣ್ಯ ಸಂಪತ್ತು ಸಂರಕ್ಷಣೆಗೆ ವಿಶ್ವ ಅರಣ್ಯ ದಿನಾಚರಣೆಯನ್ನು 1978ರ ಮಾ.21ರಂದು ಆರಂಭಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ವಿವಿಧ ಹಂತದಲ್ಲಿ ಸರ್ಕಾರೇತರ ಸಂಘಗಳು ಮತ್ತು ಸರ್ಕಾರ ನಡೆಸಿಕೊಂಡು ಬರುತ್ತಿದ್ದರೂ ನಾಗರಹೊಳೆ ಸೇರಿದಂತೆ ಇತರೆ ಅರಣ್ಯ ಪ್ರದೇಶ ಆಕಸ್ಮಿಕ ಬೆಂಕಿಗೆ ಬಲಿಯಾಗುವುದು ತಪ್ಪಿಸಲು ಆಗುತ್ತಿಲ್ಲ.

ರಾಜ್ಯದಲ್ಲಿ ಸುಮಾರು 38,720 ಚದರ ಕಿ.ಮೀ ವಿಸ್ತೀರ್ಣದಲ್ಲಿ ಅರಣ್ಯ ಸಂಪತ್ತು ಹರಡಿಕೊಂಡಿದೆ. ಪಶ್ಚಿಮ ಘಟ್ಟಗಳ ಸಾಲಿಗೆ ಸೇರಿದ ತಲಕಾವೇರಿ ಮತ್ತು ಕುದುರೆಮುಖವನ್ನು ಯುನೆಸ್ಕೊ ವಿಶ್ವ ಹೆರಿಟೇಜ್ಗೆ ಸೇರಿಸುವ ಮೂಲಕ ಅರಣ್ಯ ಸಂಪತ್ತು ರಕ್ಷಿಸುವ ಪ್ರಯತ್ನ ನಡೆಸಿದೆ. ಅಂತರರಾಷ್ಟ್ರೀಯಮಟ್ಟದಲ್ಲಿ ಹೆಸರು ಪಡೆದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಬಂಡೀಪುರ, ಕುದುರೇಮುಖ, ಬನ್ನೇರುಘಟ್ಟ ಮತ್ತು ಅಣಶಿ ರಾಷ್ಟ್ರೀಯ ಉದ್ಯಾನಗಳು ಇವೆ.

ಇದಲ್ಲದೆ ರಾಜ್ಯದ 11 ಸ್ಥಳಗಳಲ್ಲಿ ಪಕ್ಷಿಧಾಮಗಳಿದ್ದು, ವನ ಸಂಪತ್ತು ಹೇರಳವಾಗಿದ್ದರೂ ನಾಗರಹೊಳೆ ಅಭಯಾರಣ್ಯ ವರ್ಷದ ಬೇಸಿಗೆಯಲ್ಲಿ ಬೆಂಕಿಗೆ ಆಹುತಿ ಆಗುತ್ತಲೇ ಇರುವುದು ವಿಪರ್ಯಾಸ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸರಿ ಸುಮಾರು 642 ಚದರ.ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ನಾಗರಹೊಳೆ ಅರಣ್ಯವನ್ನು ಹುಲಿ ಸಂರಕ್ಷಿತ ಅರಣ್ಯ ಎಂದು ಘೋಷಣೆ ಮಾಡಿ ಸರ್ಕಾರ ವಿಶೇಷ ಮಾನ್ಯತೆ ನೀಡಿ ವಿವಿಧ ಯೋಜನೆಗಳಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದರೂ ಅರಣ್ಯ ರಕ್ಷಣೆಗೆ ಅಗತ್ಯ ಬೇಕಿರುವ ಸಿಬ್ಬಂದಿಗಳ ಕೊರತೆ ಅರಣ್ಯ ನಾಶಕ್ಕೆ ಕಾರಣವಾಗುತ್ತಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನದ ಸಿಬ್ಬಂದಿಗಳ ಸ್ಥಿತಿ ಸುಧಾರಣೆಯಲ್ಲಿ ನಾಗರಹೊಳೆ ಉದ್ಯಾನಕ್ಕಿಂತ ಯಾವುದೇ ವ್ಯತ್ಯಾಸವಿಲ್ಲದೆ 990 ಚದರ ಕಿ.ಮೀ ವ್ಯಾಪ್ತಿಯ ಅರಣ್ಯ ದಿನವೂ ಒಂದಲ್ಲಾ ಒಂದು ಕಾರಣಕ್ಕೆ ಬಲಿಯಾಗುತ್ತಲೇ ಸಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.