ರೋಮ್ (ಎಎಫ್ಪಿ): ಕಿರಿ ವಯಸ್ಸಿನ ವೇಶ್ಯೆಯ ಸಂಗ ಮಾಡಿದ್ದ ಮತ್ತು ಮೋಜಿನ ಕೂಟಗಳನ್ನು ಏರ್ಪಡಿಸಿದ್ದ ಅಪರಾಧಕ್ಕಾಗಿ ಇಟಲಿಯ ನ್ಯಾಯಾಲಯವು ಮಾಜಿ ಪ್ರಧಾನಿ ಸಿಲ್ವಿಯೊ ಬರ್ಲುಸ್ಕೋನಿ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

76 ವರ್ಷದ ಬರ್ಲುಸ್ಕೋನಿ ಅವರಿಗೆ ಏಳು ವರ್ಷಗಳ ಶಿಕ್ಷೆ ಹೆಚ್ಚಾಯಿತು ಎಂದು ಸ್ವತಃ ಸರ್ಕಾರಿ ವಕೀಲರು ಹೇಳಿದರೂ ನ್ಯಾಯಾಧೀಶರು ಹೆಚ್ಚಿನ ಅವಧಿಯ ಶಿಕ್ಷೆ ನೀಡಿರುವುದು ಅತಾರ್ಕಿಕ ಎಂದು ಬರ್ಲುಸ್ಕೋನಿ ಪರ ವಕೀಲರು ತಿಳಿಸಿದ್ದಾರೆ.

2010ರಲ್ಲಿ ಬರ್ಲುಸ್ಕೋನಿ ಅವರು ಇಟಲಿಯ ಪ್ರಧಾನಿ ಆಗಿದ್ದಾಗ ಮೊರಾಕ್ಕೊ ಮೂಲದ 17 ವರ್ಷದ ಎಲ್ ಮಹ್ರೌಗ್ ಎಂಬ ವೇಶ್ಯೆಯ ಜತೆ ಸಂಬಂಧ ಹೊಂದಿದ್ದರು ಮತ್ತು ಆಕೆ ಕಳ್ಳತನ ಪ್ರಕರಣವೊಂದರಲ್ಲಿ ಬಂಧನಕ್ಕೆ ಒಳಗಾದ ಸಂದರ್ಭದಲ್ಲಿ ಪೊಲೀಸರ ಮೇಲೆ ಪ್ರಭಾವ ಬೀರಿ ಬಿಡಿಸಿದ್ದರು ಎಂಬ ಆಪಾದನೆ ಹೊರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.