ಶುಕ್ರವಾರ, ಮೇ 20, 2022
21 °C

ಇನ್ನರ್‌ವೀಲ್ ಆನಂದ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಇನ್ನರ್‌ವೀಲ್ ಕ್ಲಬ್, ಇದೇ ಭಾನುವಾರ ಸಂಗೀತ ಮತ್ತು ನೃತ್ಯ ಹಾಗೂ ಆರೋಗ್ಯವಂತ ಶಿಶು ಸ್ಪರ್ಧೆ ಏರ್ಪಡಿಸಿದೆ.ಬೆಳಿಗ್ಗೆ 10ರಿಂದ 12ರವರೆಗೆ ನಡೆಯಲಿರುವ ಆರೋಗ್ಯವಂತ ಶಿಶು ಸ್ಪರ್ಧೆಯಲ್ಲಿ ಎರಡು ವರ್ಷದವರೆಗಿನ ಮಕ್ಕಳು ಮತ್ತು ನಾಲ್ಕು ವರ್ಷದವರೆಗಿನ ಮಕ್ಕಳಿಗೆ ಪ್ರತ್ಯೇಕ ವಿಭಾಗವಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 4ರ ವರೆಗೆ ನಡೆಯುವ ಸಂಗೀತ ಮತ್ತು ನೃತ್ಯ ಸ್ಪರ್ಧೆಯಲ್ಲಿ ಶಾಸ್ತ್ರೀಯ, ಜಾನಪದ ಮತ್ತು ಫಿಲಂ ಡಾನ್ಸ್ ವಿಭಾಗ ಇದೆ.ವಿವಿಧ ನೃತ್ಯ, ಸಂಗೀತ ಶಾಲೆಯ ವಿದ್ಯಾರ್ಥಿಗಳು, ಮಹಿಳಾ ಸಂಘಗಳ ಸದಸ್ಯೆಯರು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಇದಕ್ಕೆ ವಯೋಮಿತಿ ನಿರ್ಬಂಧವಿಲ್ಲ. ಇದರ ಹೊರತಾಗಿ ಮಾರಾಟ ಮೇಳವೂ ನಡೆಯಲಿದೆ. ಡ್ರೆಸ್ ಮತ್ತು ಸೀರೆ ಮಳಿಗೆ, ಆಭರಣ ಮಳಿಗೆ, ಗೃಹೋಪಯೋಗಿ ಸಾಮಗ್ರಿ, ಬ್ಯೂಟಿಕೇರ್, ಹೆಲ್ತ್‌ಕೇರ್ ಉತ್ಪನ್ನಗಳ ಮಳಿಗೆಗಳು ಮೇಳದಲ್ಲಿ ಇರುತ್ತವೆ. ಕಾರ್ಯಕ್ರಮಕ್ಕೆ ಬಂದವರ ಬಾಯಿರುಚಿ ತಣಿಸಲು ಆಹಾರ ಮಳಿಗೆ, ಮಜರಂಜನೆಗೆ ಗೇಮ್ ಸ್ಟಾಲ್‌ಗಳು ಇರುತ್ತವೆ.

ಸ್ಥಳ: ರೋಟರಿ ಸಿಲ್ವರ್ ಜ್ಯೂಬಿಲಿ ಹಾಲ್, ಸರ್ಕಾರಿ ಬಾಲಕಿಯರ ಶಾಲೆ, 13ನೇ ಅಡ್ಡ ರಸ್ತೆ ಮಲ್ಲೇಶ್ವರ. ಪ್ರವೇಶ ಉಚಿತ.  ಮಾಹಿತಿಗೆ: 98867 95632


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.