ಶನಿವಾರ, ಜೂನ್ 19, 2021
27 °C

ಇನ್ನೆಷ್ಟು ದಿನ ಸರ್ಕಾರಿ ಬೇಸಿಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ ಸರ್ಕಾರಿ ಕಚೇರಿಗಳು ಮಧ್ಯಾಹ್ನ 1.30ರ ನಂತರ ಕಾರ್ಯ ನಿರ್ವಹಿಸುವುದಿಲ್ಲ. ಈ ಅವಧಿಯಲ್ಲಿ ಬಿಸಿಲು ಮತ್ತು ಸೆಖೆ ಜಾಸ್ತಿ ಎಂಬ ಕಾರಣದಿಂದ ರಾಜ್ಯ ಸರ್ಕಾರ ತನ್ನ ನೌಕರರಿಗೆ ವಿಶೇಷ ವಿನಾಯಿತಿ ನೀಡಿದೆ. ಆದರೆ ಈ ಸೌಲಭ್ಯ ಕೇಂದ್ರ ಸರ್ಕಾರಿ ಕಚೇರಿಗಳು, ಉದ್ದಿಮೆಗಳು, ರಾಷ್ಟ್ರೀಕೃತ, ಗ್ರಾಮೀಣ ಬ್ಯಾಂಕ್‌ಗಳ ಉದ್ಯೋಗಿಗಳಿಗೆ ಇಲ್ಲ! ಅವರು ಮನುಷ್ಯರಲ್ಲವೇ?ಬೆಳಗಿನ ಅವಧಿಯಲ್ಲಿ ಬಹಳಷ್ಟು ನೌಕರರು ಸರಿಯಾಗಿ ಸೇವೆ ಸಲ್ಲಿಸುವುದಿಲ್ಲ. ಅನೇಕರು ರೂಢಿಯಂತೆ 10-30ಕ್ಕೆ ಕಚೇರಿಗೆ ಬಂದು 1.30 ಕ್ಕೆ ಮನೆಗೆ ಹೋಗುತ್ತಾರೆ. ಕಚೇರಿ ಕೆಲಸಗಳಿಗಾಗಿ ದೂರದ ಹಳ್ಳಿಗಳಿಂದ ಜನ ಬರುಷ್ಟರಲ್ಲಿ ಅವು ಬಾಗಿಲು ಮುಚ್ಚಿರುತ್ತವೆ.ದುರದೃಷ್ಟದ ಸಂಗತಿ ಎಂದರೆ ಬಿಸಿಲು,ಮಳೆ ಲೆಕ್ಕಿಸದೆ ಹೊಲಗದ್ದೆಗಳಲ್ಲಿ ರೈತರು , ಕಾರ್ಮಿಕರು ದುಡಿಯುತ್ತಾರೆ. ಕಚೇರಿಗಳಲ್ಲಿ ಫ್ಯಾನ್ ಕೆಳಗೆ ಕೆಲಸ ಮಾಡುವ ನೌಕರಿಗೆ ಮಾತ್ರ ಬಿಸಿಲಿನ ತಾಪವೇ? ಇದೆಂಥ ತಾರತಮ್ಯ? ಸರ್ಕಾರಿ ನೌಕರರನ್ನು ಜೋಲಿಯಲ್ಲಿ ಹಾಕಿ ಲಾಲಿ ಹಾಡುವ ಇಂತಹ ವಿನಾಯಿತಿಗಳು ಇನ್ನೆಷ್ಟು ದಿನ ಮುಂದುವರೆಯಬೇಕು?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.