ಬುಧವಾರ, ಮೇ 12, 2021
18 °C

ಇನ್ಫೋಸಿಸ್ ಕನೆಕ್ಟಿಂಗ್ ಪ್ರಯೋಗಾಲಯ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇವಪುರ:  `ಇಂದಿನ ಐಟಿ ಉದ್ಯಮ ಯುವ ಪೀಳಿಗೆಯ ಮೇಲೆ ನಿಂತಿದೆ. ಅವರ ಸತತ ಪರಿಶ್ರಮ, ಪ್ರಯತ್ನದಿಂದಾಗಿ ಐಟಿ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಎತ್ತರಕ್ಕೆ ಬೆಳೆಯುತ್ತಿದೆ~ ಎಂದು ಎಂ.ಜಿ. ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎಸ್.ಎಂ. ವೆಂಕಟಪತಿ ಅಭಿಪ್ರಾಯಪಟ್ಟರು.ಕ್ಷೇತ್ರದ ಬಿದರಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಈಸ್ಟ್ ಪಾಯಿಂಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇನ್ಫೋಸಿಸ್ ಕನೆಕ್ಟಿಂಗ್ ಪ್ರಯೋಗಾಲಯ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಇನ್ಫೋಸಿಸ್ ಕನೆಕ್ಟಿಂಗ್ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಇನ್ಫೋಸಿಸ್ ಕುರಿತಾದ ಎಲ್ಲ ಮಾಹಿತಿಗಳನ್ನು ಇಲ್ಲಿಂದಲೇ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು.ಅಲ್ಲದೆ, ನೇರವಾಗಿ ಇನ್ಫೋಸಿಸ್‌ನೊಂದಿಗೆ ಇಲ್ಲಿಂದಲೇ ಸಂಪರ್ಕ ಹೊಂದಬಹುದು. ಹೀಗೆ ಹತ್ತಾರು ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಕಾಲೇಜು ಆವರಣದಿಂದಲೇ ಕಲ್ಪಿಸಿಕೊಡುವಂತಹ ಪ್ರಯತ್ನ ಇದಾಗಿದೆ ಎಂದು ಅವರು ತಿಳಿಸಿದರು.ಇನ್ಫೋಸಿಸ್‌ನ ರಿತೇಶ ಕುಂಬ್ಳೆ, ಎಂ.ಜಿ. ಚಾರಿಟೇಬಲ್ ಟ್ರಸ್ಟ್‌ನ ನಿರ್ದೇಶಕರಾದ ಬಿ.ಐ.ರಮಾದೇವಿ, ಎಸ್.ವಿ. ಪ್ರಮೋದ, ಎಸ್.ವಿ.ರಾಜೀವ, ಪ್ರಾಂಶುಪಾಲರಾದ ಡಾ.ಗಿರಿಧರರೆಡ್ಡಿ, ಡಾ.ಬಿ.ಎಂ.ಸತೀಶ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.