ಸೋಮವಾರ, ಏಪ್ರಿಲ್ 19, 2021
23 °C

ಇನ್‌ಬಾಕ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಅಲೆಮಾರಿ ಅಮೋಘವರ್ಷ~ ಅವರ ಕುರಿತ ಲೇಖನ ಚೆನ್ನಾಗಿತ್ತು. ಕಲಿಕೆ, ವೃತ್ತಿ ಮತ್ತು ಪ್ರವೃತ್ತಿಗಳ ನಡುವಣ ಸಂಬಂಧ ಹೇಗೆಲ್ಲಾ ಭಿನ್ನವಾಗಿರಬಹುದು ಎಂಬುದಕ್ಕೆ ಉದಾಹರಣೆಯಾಗಬಹುದಾದ ಲೇಖನವಿದು. `ಕಾಮನಬಿಲ್ಲು~ ಪುರವಣಿ ಇಂಥ ಅನೇಕ ಲೇಖನಗಳನ್ನು ನೀಡಿದೆ. ಹೊಸ ಬಗೆಯ ಪ್ರತಿಭೆಗಳನ್ನು ಪರಿಚಯಿಸುವ ಈ ಪ್ರಯತ್ನ ಶ್ಲಾಘನಾರ್ಹ.

 -ಎಲ್.ಬಿ. ರಾಜೇಶ್‌ಕೃಷ್ಣ, ಬೆಂಗಳೂರು

ವಿವಿಧ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಳಸಿ ನೋಡಿ ತಮ್ಮ ಅಭಿಪ್ರಾಯಗಳನ್ನು ಬರೆಯುತ್ತಿರುವ ಪವನಜ ಅವರಿಗೆ ಧನ್ಯವಾದಗಳು. ಕನ್ನಡದಲ್ಲಿ ಇದೊಂದು ವಿನೂತನ ಪ್ರಯತ್ನ ಎನಿಸುತ್ತಿದೆ. ತಾಂತ್ರಿಕ ವಿವರಗಳನ್ನು ಸರಳ ಭಾಷೆಯಲ್ಲಿ ನೀಡಲು ಸಾಧ್ಯ ಎಂಬುದಕ್ಕೆ ಪವನಜ ಅವರ ಲೇಖನಗಳು ಸಾಕ್ಷಿಯಾಗಿವೆ.

 -ಎಸ್.ಆರ್. ಜ್ಞಾನೇಂದ್ರಕುಮಾರ್, ಮೈಸೂರು

ಗ್ಯಾಜೆಟ್‌ಲೋಕ ವಿಸ್ತರಿಸಿಕೊಳ್ಳುತ್ತಿರುವ ಪರಿ ಇಷ್ಟವಾಗುತ್ತಿದೆ. ಬಹಳ ಮೂಲಭೂತ ವಿಷಯಗಳೊಂದಿಗೆ ಆರಂಭಗೊಂಡ ಈ ಅಂಕಣ ಈಗ ವಿವಿಧ ಮೊಬೈಲ್ ಫೋನ್‌ಗಳನ್ನು ಅಂತರಜಾಲ ತಾಣಗಳಲ್ಲಿರುವ ತಜ್ಞರು ಬರೆಯುವ ಮಟ್ಟದಲ್ಲಿ ಪರಿಚಯಿಸುತ್ತಿದೆ. ಕನ್ನಡಕ್ಕೆ ಈ ಬಗೆಯ ಸಾಹಿತ್ಯ ಅತ್ಯಂತ ಅಗತ್ಯ. ಈ ನಿಟ್ಟಿನಲ್ಲಿ `ಪ್ರಜಾವಾಣಿ~ ಇಟ್ಟಿರುವ ಹೆಜ್ಜೆ ಬಹಳ ಮುಖ್ಯವಾದುದು. ವಾಹನ ಲೋಕಕ್ಕೆ ಸಂಬಂಧಿಸಿದ ಬರವಣಿಗೆಯಲ್ಲೂ ಒಂದು ನುಡಿಗಟ್ಟನ್ನು ಕಂಡುಕೊಳ್ಳುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ.

 -ಎಸ್.ಚಂದ್ರಶೇಖರ್, ಹುಬ್ಬಳ್ಳಿ

ಸ್ವಾಮಿ ವಿವೇಕಾನಂದರ ಕುರಿತು ಬಾಲಸುಬ್ರಹ್ಮಣ್ಯ ಅವರು ಬರೆಯುತ್ತಿರುವ ಲೇಖನಗಳನ್ನು ತಪ್ಪದೇ ಓದುತ್ತೇನೆ. ಅಧ್ಯಾತ್ಮವೆಂದರೆ ಜೀವ ವಿರೋಧಿಯಾಗಿರಬೇಕು ಎಂಬುದನ್ನು ಸಾಬೀತು ಪಡಿಸುವಂತೆ ದೃಶ್ಯ ಮಾಧ್ಯಮಗಳಲ್ಲಿ ವಿರಾಜಿಸುತ್ತಿರುವ ಅನೇಕ ತಥಾಕಥಿತ ಅಧ್ಯಾತ್ಮ ವಾದಿಗಳ ಮಧ್ಯೆ ಬಾಲಸುಬ್ರಹ್ಮಣ್ಯ ನಿಜಕ್ಕೂ ವಿಶಿಷ್ಟ.

 ತಾವು ಕಂಡುಕೊಂಡ ವಿವೇಕಾನಂದರನ್ನು ಅವರು ಮಂಡಿಸುತ್ತಿದ್ದಾರೆ. ಈ ಮೂಲಕ ನಾವೂ ಕೂಡಾ ವಿವೇಕಾನಂದರನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿದೆ.

 -ಜಿ. ಸುಬ್ಬರಾವ್, ಬೆಂಗಳೂರು

`ಕಾಮನಬಿಲ್ಲು~ ಪುರವಣಿ ಪ್ರತೀ ವಾರ ಒಳಪುಟಗಳಲ್ಲಿ ನೀಡುವ ಕುತೂಹಲಕಾರಿ ಮಾಹಿತಿಗಳು ಮತ್ತು ನಗೆ ಹನಿಗಳು ನನಗೆ ತುಂಬಾ ಇಷ್ಟ. ಕೊನೆಯ ಪುಟದಲ್ಲಿ ಬರುವ ಕಿರು ವ್ಯಕ್ತಿ ಚಿತ್ರಗಳು ಬಹಳ ಮಾಹಿತಿ ಪೂರ್ಣವಾಗಿರುತ್ತವೆ.

 -ಆರ್. ಸಂತೋಷ್ ಕುಮಾರ್, ಶಿವಮೊಗ್ಗ

ಕೊನೆಯ ಪುಟದಲ್ಲಿ ಬರುವ ಕಿರು ವ್ಯಕ್ತಿ ಚಿತ್ರಗಳು ಬಹಳ ಆಸಕ್ತಿಕರವಾಗಿರುತ್ತವೆ. ಇಂಥ ಮಾಹಿತಿಗಳು ಇನ್ನೂ ಹೆಚ್ಚಾಗಿ ಬರಲಿ.

 -ಎಲ್.ಟಿ.ಎಸ್, ಮಂಡ್ಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.