ನವದೆಹಲಿ: ‘ಮೊಹಮ್ಮದ್ ಘಜ್ನಿ ಮತ್ತು ಅಲ್ಲಾವುದ್ದೀನ್ ಖಿಲ್ಜಿ ಅವರು ಗುಜರಾತ್ನ ಸೋಮನಾಥ ದೇವಾಲಯವನ್ನು ಲೂಟಿ ಮಾಡಿದ್ದರು. ಆದರೆ, ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರು ದಾಳಿಕೋರರನ್ನು ದ್ವೇಷಿಸುವ ಬದಲು ಭಗವಾನ್ ಸೋಮನಾಥನನ್ನೇ ಹೆಚ್ಚು ದ್ವೇಷಿಸುತ್ತಿದ್ದರು’ ಎಂದು ಬಿಜೆಪಿ ಟೀಕಿಸಿದೆ.

‘ಜವಾಹರ್ಲಾಲ್ ನೆಹರೂ ಅವರು ಸ್ವಾತಂತ್ರ್ಯದ ನಂತರ ಸೋಮನಾಥ ದೇವಾಲಯದ ಪುನರ್ ನಿರ್ಮಾಣ ಬಯಸಲಿಲ್ಲ. ಏಕೆಂದರೆ, ಅವರು ಕುರುಡು ತುಷ್ಟೀಕರಣ ರಾಜಕೀಯವನ್ನು ಅನುಸರಿಸುತ್ತಿದ್ದರು. ಅದರ ಪರಿಣಾಮವಾಗಿ ಮೊಘಲ್ ಆಕ್ರಮಣಕಾರರನ್ನು ವೈಭವೀಕರಿಸುತ್ತಿದ್ದರು’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ದೂರಿದ್ದಾರೆ.

‘ನೆಹರೂ ಅವರು ಭಾರತದ ನಾಗರಿಕತೆಯನ್ನು ರಕ್ಷಿಸುವ ಬದಲು ಹಿಂದೂಗಳ ಐತಿಹಾಸಿಕ ಪರಂಪರೆಗೆ ಹಿನ್ನಡೆಯನ್ನುಂಟು ಮಾಡುವ ಮೂಲಕ ಮೂಲಕ ಆಂತರಿಕ ಆತ್ಮ ವಿಶ್ವಾಸಕ್ಕಿಂತ ಬಾಹ್ಯ ತುಷ್ಟೀಕರಣಕ್ಕೆ ಆದ್ಯತೆ ನೀಡಿದ್ದರು. ಜತೆಗೆ, ಪಾಕಿಸ್ತಾನವನ್ನು ಮೆಚ್ಚಿಸಲು ಆದ್ಯತೆ ನೀಡಿದ್ದರು’ ಎಂದೂ ತ್ರಿವೇದಿ ಕಿಡಿಕಾರಿದ್ದಾರೆ.

ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆ ಎಂದರೆ 1951ರ ಏಪ್ರಿಲ್ 21ರಂದು ನೆಹರೂ ಅವರು ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿ ಖಾನ್ ಅವರಿಗೆ ಪತ್ರ ಬರೆದಿದ್ದರು. ಖಾನ್ ಅವರನ್ನು ಪ್ರಿಯ ‘ನವಾಬ್ಜಾದಾ’ ಎಂದು ಸಂಬೋಧಿಸಿ, ಸೋಮನಾಥ ದ್ವಾರಗಳ ಕಥೆಯನ್ನು ಸಂಪೂರ್ಣವಾಗಿ ಸುಳ್ಳು ಎಂದು ಬಣ್ಣಿಸಿದ್ದರು ಎಂದೂ ಅವರು ಟೀಕಿಸಿದ್ದಾರೆ.

‘ಸೋಮನಾಥ ದೇವಾಲಯದ ಬಗ್ಗೆ ನೆಹರೂ ಅವರು ಲಿಯಾಖತ್ ಅಲಿ ಖಾನ್ ಅವರಿಗೆ ಪತ್ರ ಬರೆಯುವ ಅಗತ್ಯತೆ ಏನಿತ್ತು?, ನೆಹರೂ ಅವರು ಖಾನ್ಗೆ ಭಯಪಟ್ಟಿದ್ದರೇ?... ಇದು ಕುರುಡು ಓಲೈಕೆ ರಾಜಕೀಯ ಮತ್ತು ಮೊಘಲ್ ಆಕ್ರಮಣಕಾರರ ವೈಭವೀಕರಣವಲ್ಲದಿದ್ದರೆ ಮತ್ತೇನು’ ಎಂದು ತ್ರಿವೇದಿ ಪ್ರಶ್ನಿಸಿದ್ದಾರೆ.

ನೆಹರೂ ಅವರು ಸೋಮನಾಥ ದೇವಾಲಯದ ಪುನರ್ನಿರ್ಮಾಣದ ಬಗ್ಗೆ ಉತ್ಸಾಹ ತೋರಲಿಲ್ಲ. ಇದು ಭಾರತದ ಪ್ರತಿಷ್ಠೆಗೆ ಹಾನಿಕಾರಕ ಎಂದು ಕರೆದಿದ್ದರು. ಆದರೆ, ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ದೃಢವಾಗಿ ನಿಂತು ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಎಂದೂ ಅವರು ಉಲ್ಲೇಖಿಸಿದ್ದಾರೆ.

ಸೋಮನಾಥ ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮ: ಸೋಮನಾಥ ದೇವಾಲಯದಲ್ಲಿ ಜನವರಿ 8ರಿಂದ 11ರವರೆಗೆ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಪ್ರಧಾನಿ ಮೋದಿ ಜನವರಿ 11ರಂದು ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.
.ಸೋಮನಾಥ ದೇಗುಲ ಭಾರತೀಯ ನಂಬಿಕೆ, ನಾಗರಿಕತೆಯ ಶಾಶ್ವತ ಸಂಕೇತವಾಗಿದೆ: ಮೋದಿ.ಸೋಮನಾಥ ದೇಗುಲ ದಾಳಿಗೆ ಸಾವಿರ ವರ್ಷ; ಪಟೇಲರು ಮರುನಿರ್ಮಿಸಿದ ದೇವಾಲಯದ ಇತಿಹಾಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.