ಶನಿವಾರ, ಜನವರಿ 18, 2020
20 °C

ಇನ್ ಬಾಕ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಮೈಂಡ್ ಯುವರ್ ಲಾಂಗ್ವೇಜ್~ ಬರೆಹದ ವ್ಯಂಗ್ಯ ಅರ್ಥವಾಗುವಂಥದ್ದೇ. ಆದರೆ ಇಲ್ಲೊಂದು ಸಮಸ್ಯೆಯಿದೆ. ಇದು ಇಂಗ್ಲಿಷ್ ಕಲಿಯದೇ ಇರುವುದಕ್ಕೆ ಅಥವಾ ಇಂಗ್ಲಿಷನ್ನು ಸರಿಯಾಗಿ ಬಳಸದೇ ಇರುವುದಕ್ಕೆ ಒಂದು ಸಮರ್ಥನೆಯಂಥಾದರೆ ಅಪಾಯವಿದೆ. ಯಾರು ಏನೇ ಹೇಳಿದರೂ ಇಂಗ್ಲಿಷ್ ಈಗ ವಿಶ್ವಭಾಷೆಯಾಗಿಬಿಟ್ಟಿದೆ. ಅದನ್ನು ನಿರಾಕರಿಸಲು ಸಾಧ್ಯವಿಲ್ಲ.

- ಕೆ.ಪಿ. ಚಂದ್ರಶೇಖರ, ಮೈಸೂರು`ಮೈಂಡ್ ಯುವರ್ ಲಾಂಗ್ವೇಜ್~ ಇಷ್ಟವಾಯಿತು. ಕನ್ನಡದಲ್ಲಿ ಈ ಬಗೆಯ ಬರೆಹಗಳು ಬರುವುದೇ ಇಲ್ಲ. ಕಾಮನಬಿಲ್ಲು ಆ ಕೊರತೆಯನ್ನು ತುಂಬಿಕೊಟ್ಟಿದೆ. ಇಂಥ ಇನ್ನಷ್ಟು ಲೇಖನಗಳು `ಕಾಮನಬಿಲ್ಲು~ ಪುರವಣಿ ನೀಡಲಿ.

- ಕೆ. ಎಸ್. ರಾಜೇಶ್, ಮೈಸೂರುಲಕ್ಷ್ಮೀ ಮನಮೋಹನ್ ಅವರ ಕಥೆ ಹೊಸ ಗಾಯಕಿಯರಿಗೆ ಸ್ಫೂರ್ತಿದಾಯಕವಾಗಿದೆ. ತಮಗೆ ದೊರೆತ ಅವಕಾಶಗಳಿಗಾಗಿ ಅವರು ಅಹಂಕಾರ ಪಡದೆ ಉಳಿದವರಿಗೆ ದಾರಿ ದೀಪವಾಗುವಂತೆ ತಮ್ಮ ಸಾಧನೆಯ ಹಾದಿಯನ್ನು ವಿವರಿಸಿದ್ದಾರೆ. ಅವರ ಕಲಾ ಬದುಕು ಯಶಸ್ವಿಯಾಗಲಿ.

- ಡಾ.ಕೆ.ವಿ. ಸಂತೋಷ್ ಹೊಳಲ್ಕೆರೆ, ಚಿತ್ರದುರ್ಗಎಂ.ಜಿ. ಬಾಲಕೃಷ್ಣ ಅವರ ಕಂಬಳ ಕ್ರೀಡೆಯ ಕುರಿತ ಲೇಖನ ಮಾಹಿತಿ ಪೂರ್ಣವಾಗಿತ್ತು. ಜೊತೆಗೆ ಕಂಬಳ ವೀರರ ನೋವಿನ ಕತೆಯನ್ನೂ ಅದು ಹೇಳಿತು. ಇಂಥ ಮಾಹಿತಿ ಪೂರ್ಣ ಲೇಖನಗಳನ್ನು ಇನ್ನಷ್ಟು ಪ್ರಕಟಿಸುವಂತೆ ನಾನು ಕೋರುತ್ತಿದ್ದೇನೆ. 

- ಎಚ್. ಆನಂದ್ ಕುಮಾರ್, ಚಿತ್ರದುರ್ಗಹೊಸ ವರ್ಷಕ್ಕೆ ಹೊಸ ಪುರವಣಿಯನ್ನು ಕೊಟ್ಟಿರುವ ಪ್ರಜಾವಾಣಿಗೆ ಧನ್ಯವಾದಗಳು. ಕಂಬಳದ ಕುರಿತ ಲೇಖನ ತೋರಿಸಿಕೊಟ್ಟ ಸತ್ಯ ಮತ್ತೊಂದು. ಗದ್ದೆ ತೋಟಗಳಲ್ಲಿ ಮೈಮುರಿದು ದುಡಿಯುವವರು ಫಿಟ್‌ನೆಸ್ ಕಾಪಾಡಿಕೊಳ್ಳಲು ಯಾವ ಸರ್ಕಸ್ ಕೂಡ ಮಾಡಬೇಕಾಗಿಲ್ಲ ಎಂಬ ಸತ್ಯವನ್ನು ನಾವೆಲ್ಲಾ ಅರಿತುಕೊಳ್ಳಬೇಕಾಗಿದೆ. ಹೊಸ ಕಾಲದ ವೃತ್ತಿಗಳೆಲ್ಲವೂ ನಮ್ಮ ದೇಹವನ್ನು ಸೋಮಾರಿಯಾಗಿಸುತ್ತಿವೆ.

- ಬಾರಿಕೇರ ಕರಿಯಪ್ಪ, ದಾವಣಗೆರೆಕಂಬಳವನ್ನು ಮುಖ್ಯವಾಹಿನಿಯ ಕ್ರೀಡೆಯಂತೆ ಪರಿಗಣಿಸಿ ಅದಕ್ಕೆ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ. ವಿವಿಧ ಕ್ರೀಡಾ ಪ್ರಶಸ್ತಿಗಳನ್ನು ಘೋಷಿಸುವಾಗಲೇ ಜಾನಪದ ಕ್ರೀಡಾ ಪ್ರತಿಭೆಗಳನ್ನು ಪರಿಗಣಿಸಬೇಕು. ಕಂಬಳದ ಕುರಿತಂತೆ ಅಪೂರ್ವ ಮಾಹಿತಿಗಳನ್ನು ನೀಡಿದ `ಕಾಮನಬಿಲ್ಲು~ ಪುರವಣಿಗೆ ಧನ್ಯವಾದಗಳು.

- ಕೆ.ಪಿ. ರಾಮಕೃಷ್ಣ, ಬೆಂಗಳೂರು

ಪ್ರತಿಕ್ರಿಯಿಸಿ (+)