ಶುಕ್ರವಾರ, ಜೂನ್ 5, 2020
27 °C

ಇಮ್‌ಟೆಕ್ಸ್‌ನಲ್ಲಿ ಯಂತ್ರಗಳ ಸದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಮ್‌ಟೆಕ್ಸ್‌ನಲ್ಲಿ ಯಂತ್ರಗಳ ಸದ್ದು

ವಾಹನದ ಬಿಡಿ ಭಾಗಗಳು, ವಿದ್ಯುತ್ ಮತ್ತು ಸೂಕ್ಷ್ಮ ಯಂತ್ರಗಳು, ಕೊರೆಯುವ (ಬೋರಿಂಗ್) ಹಾಗೂ ಕತ್ತರಿಸುವ ಸೇರಿದಂತೆ ಕೆಲ ಯಂತ್ರಗಳ ಬಿಡಿ ಭಾಗಗಳಿಗಾಗಿ ಹುಡುಕುವ ಜನರಿಗೆ ಇಲ್ಲೊಂದು ಅವಕಾಶ ಲಭಿಸಿದೆ.ತುಮಕೂರು ರಸ್ತೆ ನೈಸ್ ಕೂಡು ರಸ್ತೆ ಬಳಿಯ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ಭಾರತೀಯ ಯಂತ್ರೋಪಕರಣ ಉತ್ಪಾದಕರ ಸಂಘ (ಐಎಂಟಿಇಎಕ್ಸ್) ಆಯೋಜಿಸಿರುವ 15ನೇ ಅಂತರರಾಷ್ಟ್ರೀಯ ಲೋಹ ಕತ್ತರಿಸುವ ಯಂತ್ರೋಪಕರಣ ಪ್ರದರ್ಶನ ಮೇಳದಲ್ಲಿ ಈ ವೈವಿಧ್ಯದ, ನೂತನ ಯಂತ್ರಗಳನ್ನು ನೋಡಬಹುದು.ಇಲ್ಲಿ ಭಾರತ ಸೇರಿದಂತೆ 23 ದೇಶಗಳ ಕೈಗಾರಿಕೆಗಳ ಪ್ರದರ್ಶಕರು ಭಾಗವಹಿಸಿದ್ದಾರೆ. ಮುಖ್ಯವಾಗಿ ಆಸ್ಟ್ರೇಲಿಯ, ಚೀನ, ಡೆನ್ಮಾರ್ಕ್, ಜೆಕ್ ಗಣರಾಜ್ಯ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಕೊರಿಯಾ ಮುಂತಾದ ದೇಶಗಳ ಕೈಗಾರಿಕಾ ಉತ್ಪನ್ನಗಳು ಗಮನ ಸೆಳೆಯುತ್ತಿವೆ.

ಗ್ರೈಂಡಿಂಗ್, ಮಿಲ್ಲಿಂಗ್, ಕಂಟ್ರೋಲ್ ಸಿಸ್ಟಮ್‌ಗಳು ಮತ್ತು ಅಳತೆ ಹಾಗೂ ಸ್ವಯಂ ಚಾಲಿತ ಯಂತ್ರಗಳಿವೆ. ಅತಿ ಸೂಕ್ಷ್ಮ ಬಿಡಿ ಭಾಗಗಳಿಂದ ಮಧ್ಯಮ ಹಾಗೂ ಬೃಹತ್ ಯಂತ್ರಗಳ ಬಿಡಿ ಭಾಗಗಳನ್ನು ಕತ್ತರಿಸುವ ಯಂತ್ರಗಳು ಪ್ರದರ್ಶನದ ಹೈಲೈಟ್.ಪ್ರದರ್ಶನದ ಜೊತೆಗೆ ಎರಡು ದಿನಗಳ ವಿಚಾರ ಸಂಕಿರಣವನ್ನೂ ಹಮ್ಮಿಕೊಂಡಿದ್ದು, ಇದು ಯಂತ್ರೋಪಕರಣ ತಂತ್ರಜ್ಞಾನ ಕುರಿತದ್ದಾಗಿದೆ. ಇಲ್ಲಿ ಜರ್ಮನಿ, ಜಪಾನ್, ಇಟಲಿ ಮತ್ತು ಸ್ವಿಟ್ಜರ್ಲೆಂಡ್ ಸೇರಿದಂತೆ ಭಾರತದ ಅಂತರ ರಾಷ್ಟ್ರೀಯ ಮಟ್ಟದ ತಜ್ಞರು ಲೋಹ ಕತ್ತರಿಸುವ ಯಂತ್ರೋಪಕರಣಗಳ ಇತ್ತೀಚಿನ ಅಭಿವೃದ್ಧಿ ಮತ್ತು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.

ಇಂಟೆಕ್ಸ್ 2011ರ ಜೊತೆಗೆ ಟೂಲ್‌ಟೆಕ್ 2011 ಎಂಬ ಉಪಕರಣಗಳ ತಂತ್ರಜ್ಞಾನ ವ್ಯವಸ್ಥೆಯ 13ನೇ ಅಂತರರಾಷ್ಟ್ರೀಯ  ಪ್ರದರ್ಶನವೂ ನಡೆಯುತ್ತಿದೆ. ಪ್ರದರ್ಶನದಲ್ಲಿ ಎಂಜಿನಿಯರ್‌ಗಳು, ತಾಂತ್ರಿಕ ವಿದ್ಯಾರ್ಥಿಗಳು ಹಾಗೂ ತಂತ್ರಜ್ಞರಿಗೆ ಹೆಚ್ಚು ಪ್ರಯೋಜನಕಾರಿ. ಯಂತ್ರಗಳು ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುವ ಮಾದರಿಯ ಪ್ರಾತ್ಯಕ್ಷಿಕೆಯೂ ಇದೆ.ಜ. 26ರ ವರೆಗೆ ನಡೆಯುವ ಮೇಳಕ್ಕೆ ಪ್ರವೇಶ ಉಚಿತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.