ಭಾನುವಾರ, ಜೂನ್ 13, 2021
24 °C

ಇರಾಕ್: ದೇಶಾದ್ಯಂತ ಸರಣಿ ಬಾಂಬ್ ಸ್ಫೋಟಕ್ಕೆ 44 ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗ್ದಾದ್ (ಎಪಿ/ಐಎಎನ್‌ಎಸ್): ಇರಾಕ್ ದೇಶಾದ್ಯಂತ ಮಂಗಳವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ 44 ಮಂದಿ ಸಾವಿಗೀಡಾಗಿದ್ದು, 200 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.



ರಾಷ್ಟ್ರೀಯ ಸ್ಥಿರತೆಗಾಗಿ ಅರಬ್ ಜಗತ್ತಿನ ಉನ್ನತ ನಾಯಕರು ಬಾಗ್ದಾದ್ ಸಭೆ ನಡೆಸಲು ತೀರ್ಮಾನಿಸಿರುವ ಬೆನ್ನಲ್ಲೇ ಶಿಯಾ ಪಂಗಡದ ಮುಸ್ಲಿಮರು ಹಾಗೂ ಪೊಲೀಸರನ್ನು ಗುರಿಯಾಗಿಸಿ ದೇಶಾದ್ಯಂತ ಹಲವು ಕಡೆ ಬಾಂಬ್ ಸ್ಫೋಟಗಳು ಸಂಭವಿಸಿವೆ.



ಇಲ್ಲಿಗೆ 250 ಕಿ.ಮೀ.ದೂರದ ಕಿರ್ಕುಕ್ ಪ್ರದೇಶದಲ್ಲೇ 3 ಸ್ಫೋಟಗಳು ಸಂಭವಿಸಿವೆ. ಅಲವಿ, ಹಿಲ್ಲಾ, ಕಾರಬಾಲ  , ಫಲುವಾ ಹಾಗೂ ರಮದಿ ಪ್ರದೇಶಗಳಲ್ಲಿ ಆತ್ಮಹತ್ಯಾ ದಾಳಿಗಳು ನಡೆದಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.