ಬೀಜಿಂಗ್ ವರದಿ (ಐಎಎನ್ಎಸ್): ಇರಾನ್ನೊಂದಿಗೆ ಸಮರ ಸಾರುವ ಅಮೆರಿಕ ಯತ್ನದ ಬಗ್ಗೆ ಚೀನಾ ಮತ್ತು ರಷ್ಯ ತೀವ್ರ ಆತಂಕ ವ್ಯಕ್ತಪಡಿಸಿವೆ ಎಂದು ಚೀನಾದ ಪ್ರಮುಖ ಪತ್ರಿಕೆಯೊಂದು ಸೋಮವಾರ ಹೇಳಿದೆ.

ಇರಾಕ್ ಮತ್ತು ಆಫ್ಘಾನಿಸ್ತಾನದ ಬಳಿಕ ಅಮೆರಿಕವು `ಇರಾನ್ನೊಂದಿಗೆ ಸಂಘರ್ಷಕ್ಕೆ ಸಿದ್ಧತೆ ನಡೆಸಿದೆ ಅಲ್ಲದೆ ಮತ್ತೊಂದು ವಾಯು ದಾಳಿಯು ಸಫಲವಾಗುವ ವಿಶ್ವಾಸ ಹೊಂದಿರುವಂತೆ ತೋರುತ್ತದೆ~ ಎಂದು `ಗ್ಲೋಬಲ್ ಟೈಮ್ಸ~ ಪತ್ರಿಕೆ ಹೇಳಿದೆ.

ಚೀನಾ ನಾಯಕತ್ವದ ಆಲೋಚನೆ ಬಿಂಬಿಸಿರುವ ಈ ಪತ್ರಿಕೆಯು, ಅಮೆರಿಕ ಈ ಮೂಲಕ ವಾಸ್ತವವಾಗಿ ತನ್ನ ಹಿತಾಸಕ್ತಿಯನ್ನೇ ಕಡೆಗಣಿಸಿದೆ ಎಂದಿದೆ.

`ಇರಾನ್ ಜತೆ ಅಮೆರಿಕ ಸಮರಕ್ಕಿಳಿದರೆ, ಅದರಿಂದಾಗುವ ಹಾನಿಯು ಇರಾನ್ನ ಪರಮಾಣು ಶಕ್ತಿಯ ಪ್ರಬಲ ಬೆದರಿಕೆಗಿಂತಲೂ ಕಡಿಮೆ ಏನೂ ಆಗಿರುವುದಿಲ್ಲ~ ಎಂದೂ ತಿಳಿಸಿದೆ. `ಇಂತಹ ಮನೋಭಾವವು ಅತಿ ಶೀಘ್ರದಲ್ಲಿ ಅಥವಾ ನಂತರದಲ್ಲಿ ಅಮೆರಿಕವು ರಷ್ಯ ಮತ್ತು ಚೀನಾದೊಂದಿಗೆ ಘರ್ಷಣೆಗೆ ಇಳಿಯುವುದಕ್ಕೆ ದಾರಿಯಾಗುತ್ತದೆ ಎಂದು ಅನೇಕರು ಚಿಂತಿತರಾಗಿದ್ದಾರೆ~ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.