ಗುರುವಾರ , ಜನವರಿ 30, 2020
22 °C

ಇರೋಮ್‌ ಶರ್ಮಿಳಾಗೆ ವಾರಂಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಜ.30ರಂದು ನ್ಯಾಯಾ­ಲಯಕ್ಕೆ ಹಾಜರಾಗುವಂತೆ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್‌ ಶರ್ಮಿಳಾ ಅವರಿಗೆ ದೆಹಲಿ ಕೋರ್ಟ್‌ ಶುಕ್ರವಾರ ವಾರಂಟ್‌ ಹೊರಡಿಸಿದೆ. 2006ರಲ್ಲಿ ಆಮರಣಾಂತ ಉಪ­ವಾಸದ ವೇಳೆ ಆತ್ಮಹತ್ಯೆಗೆ ಯತ್ನಿಸಿದ ಆರೋಪದ ಮೇಲೆ  ಶರ್ಮಿಳಾ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ  ಅಕ್ಟೋಬರ್‌ 30ರಂದು  ಕೋರ್ಟ್‌ಗೆ ಹಾಜರಾ­ಗು­ವಂತೆ ಅವ­ರಿಗೆ ಸೂಚಿಲಾಗಿತ್ತು. ಆದರೆ ಶರ್ಮಿಳಾ ಕೋರ್ಟ್‌ಗೆ ಬಂದಿರಲಿಲ್ಲ.ಮಣಿಪುರದಲ್ಲಿ ಜಾರಿಯಲ್ಲಿರುವ ವಿವಾದಿತ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ರದ್ದುಮಾಡಬೇಕೆಂದು ಆಗ್ರಹಿಸಿ ಕಳೆದ  12ಕ್ಕೂ ಹೆಚ್ಚು ವರ್ಷಗಳಿಂದ ಶರ್ಮಿಳಾ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)