ಗುರುವಾರ , ಏಪ್ರಿಲ್ 22, 2021
30 °C

ಇಶಾ ಭರತ್ ಕಹಾನಿ

ಸಂದರ್ಶನ: ರಶ್ಮಿ ಎಸ್. Updated:

ಅಕ್ಷರ ಗಾತ್ರ : | |

ಪ್ರೀತಿ ಅಂದರೆ..?

ನಮ್ಮ ವಿಷಯದಲ್ಲಿ ಸುದೀರ್ಘವಾದುದು. ಸ್ವೀಕಾರ್ಹವಾದುದು. ಇಶಾಳ ತಪ್ಪುಗಳು ನನಗೆ ಮುದ್ದು ಮಗುವೊಂದು ತಪ್ಪು ಹೆಜ್ಜೆ ಇಟ್ಟಷ್ಟೇ ಇಷ್ಟವಾಗುವುದು. ಭರತ್‌ನ ತಪ್ಪುಗಳನ್ನು ಕ್ಷಮಿಸಿ ಎನ್ನುವುದು ದೊಡ್ಡ ಶಬ್ದವಾಗುತ್ತದೆ, ಅದನ್ನು ಸ್ವೀಕರಿಸಿಯೂ ಭರತ್‌ನೊಂದಿಗೆ ನಿಲ್ಲುತ್ತೇನಲ್ಲ; ಅದೇ ಪ್ರೀತಿ.ನಿಮ್ಮ ಪ್ರೀತಿ ಆರಂಭವಾಗಿದ್ದು ಯಾವಾಗ?

ಹೇಳುವುದು ಕಷ್ಟ. ಶಾಲಾ ದಿನಗಳಿಂದಲೇ ಜೊತೆಗಿದ್ದೆವು. ಈ ಒಡನಾಟದಲ್ಲಿ ಪ್ರೀತಿ ಆಕಸ್ಮಿಕವೋ ಅನಿವಾರ್ಯವೋ ಎಂಬುದು ಅರಿವಾಗುವ ಮುನ್ನವೇ ಮದುವೆಯ ನಿರ್ಧಾರ ತೆಗೆದುಕೊಂಡಿದ್ದೆವು.ಇಬ್ಬರಲ್ಲಿ ಯಾರು ಜೋರಾಗಿದ್ದೀರಿ?


ಪರಸ್ಪರರ ಪ್ರಶ್ನೆ ಬಂದಾಗ ಇಬ್ಬರೂ ಜೋರಾಗಿದ್ದೇವೆ. ಆದರೆ ಇಬ್ಬರೂ ಪರಸ್ಪರ ಅಧಿಪತ್ಯ ಸಾಧಿಸಲು ಪ್ರಯತ್ನಿಸುವುದಿಲ್ಲ.ಇಬ್ಬರಲ್ಲಿ ಯಾರು ಉತ್ತಮ ಕೇಳುಗರು?


ವಾದ-ವಿವಾದಗಳ ಪ್ರಶ್ನೆ ಬಂದರೆ ಭರತ್ ಉತ್ತಮ ಕೇಳುಗ. ಸಮತೋಲಿತ ಸ್ವಭಾವ ಆತನದು. ನಾನು ಕೆಲವೊಮ್ಮೆ ಹಟ ಮಾಡುತ್ತೇನೆ. ಆದರೆ ಭರತ್‌ಗೆ ಗೆಲ್ಲಲೇಬೇಕೆಂಬ ಛಲವೇ ಇಲ್ಲ. ಅದೇ ನಾನು ಅವರ ಮುಂದೆ ಸೋಲುವಂತೆ ಮಾಡಿದೆ.

ಈ ಸೋಲು ಸಿಹಿಯಾಗಿದೆ. (ಭರತ್ ಅಭಿಮಾನದಿಂದ ಇಶಾಳತ್ತ ನೋಡುತ್ತಿದ್ದರು)ಇಶಾ ಎಂದರೆ ಏನು ನೆನಪಾಗುತ್ತದೆ?


ಅವಳ ಸುಂದರ ನಗು, ಅರಳು ಕಂಗಳು. ಮಗುವಿನ ಮಗ್ಧತೆ ಮತ್ತು ಸರಳ ಸ್ವಭಾವ.ಭರತ್ ಎಂದರೆ..?

ನನಗಾತ ಇಡಿಯಾಗಿ ನೆನಪಾಗುತ್ತಾನೆ. ಭರತ್‌ನಂತೆ ಒಂದೆರಡು ಅಂಶಗಳ ಬಗ್ಗೆ ಹೇಳಲಾರೆ. ಭರತ್ ನನ್ನ ಜೀವನದ ಅತಿ ಉತ್ತಮ ಪ್ಯಾಕೇಜ್ ಕೊಡುಗೆ!ಬೆಂಗಳೂರಿಗೆ ಇದು ಮೊದಲ ಭೇಟಿಯೇ?ನಾವಿಬ್ಬರೂ ಜೊತೆಯಾಗಿ ಬಂದಿರುವುದು ಇದೇ ಮೊದಲು. ಇಶಾ ದಕ್ಷಿಣ ಭಾರತವನ್ನು ತೋರಿಸುವ ಉತ್ಸಾಹದಲ್ಲಿದ್ದಾರೆ. ಬೆಂಗಳೂರಿನ ಹವಾಮಾನ ಇಷ್ಟವಾಯಿತು. ಉಲ್ಲಾಸಕರವಾಗಿದೆ.ಮುಂದಿನ ಪ್ರಾಜೆಕ್ಟ್‌ಗಳು..?


ಇನ್ನೂ ಯೋಚಿಸಿಲ್ಲ. ಸದ್ಯಕ್ಕೆ ಸಾಕೆನಿಸುವಷ್ಟು ಸಾಂಗತ್ಯ ಬೇಕೆನಿಸಿದೆ. ನಂತರ ನೋಡುವ...

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.