ಬೆಂಗಳೂರು: ರನ್ ಗಳಿಸುವುದು ಕಷ್ಟವೇ ಆಗುವುದಿಲ್ಲ; ಬ್ಯಾಟ್ಸ್ಮನ್ಗಳು ಅಬ್ಬರವೇ ಈ ಬಾರಿಯ ವಿಶ್ವಕಪ್ ವಿಶೇಷವೆಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೀರ್ ಹುಸೇನ್ ಹೇಳಿದ್ದು ಅತಿಶಯೋಕ್ತಿಯೇನು ಅಲ್ಲ.ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಹತ್ತನೇ ವಿಶ್ವಕಪ್ನಲ್ಲಿ ಎಲ್ಲರ ಚಿತ್ತ ಕೇಂದ್ರಿತವಾಗಿರುವುದು ಬ್ಯಾಟ್ಸ್ಮನ್ಗಳತ್ತ. ಬೌಲರ್ಗಳು ಕಷ್ಟಕರವಾದ ಪರಿಸ್ಥಿತಿಯಲ್ಲಿಯೂ ಸತ್ವಯುತ ದಾಳಿ ನಡೆಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಎದ್ದು ಕಾಣಿಸುತ್ತಿರುವುದು ಮಾತ್ರ ಬ್ಯಾಟ್ಸ್ಮನ್ಗಳು. ಇದು ಅಚ್ಚರಿಯೇನು ಅಲ್ಲ. ಉಪಖಂಡದಲ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ಬೌಲರ್ಗಳಿಗೆ ‘ಹೀರೊ’ಗಳಾಗಿ ಮೆರೆಯುವ ಅವಕಾಶ ಸಿಗುತ್ತಿರುವುದೇ ಕಡಿಮೆ.

ಅದರಲ್ಲಿಯೂ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿರುವ ಕ್ರಿಕೆಟ್ ಪಂದ್ಯಗಳೆನ್ನುವ ‘ನಾಟಕ’ಗಳಲ್ಲಿ ಬೌಲರ್ಗಳ ಪಾತ್ರ ದೊಡ್ಡದು ಎನಿಸಿರುವುದೇ ಕಡಿಮೆ. ಅದಕ್ಕೆ ಕಾರಣವೂ ಇದೆ. ಸಾಮಾನ್ಯವಾಗಿ ಈ ಅಂಗಳದಲ್ಲಿ ರನ್ಗಳು ಸುಲಭವಾಗಿ ಹರಿದು ಬರುತ್ತವೆ. ಬೌಲರ್ಗಳು ರಟ್ಟೆ ಬೀಳುವ ಹಾಗೆ ಚೆಂಡನ್ನು ಎಸೆದರೂ ಎದುರಾಳಿ ಬ್ಯಾಟ್ಸ್ಮನ್ಗಳು ವಿಕೆಟ್ ಬಿಟ್ಟುಕೊಡುವುದಿಲ್ಲ. ಆದ್ದರಿಂದ ಇಂಥ ಪರಿಸ್ಥಿತಿಯಲ್ಲಿ ದಾಳಿ ನಡೆಸಿ, ರನ್ ಗತಿಗೆ ಕಡಿವಾಣ ಹಾಕುವುದು ಹಾಗೂ ವಿಕೆಟ್ ಕಬಳಿಸಿ ಸಂಭ್ರಮಿಸುವುದು ಅಷ್ಟೇನು ಸುಲಭವಲ್ಲ.

ಚೆಂಡು ಸುಲಭವಾಗಿ ಬ್ಯಾಟ್ಗೆ ಬರುವಂಥ ಗುಣದ ಪಿಚ್ನಲ್ಲಿ ರನ್ ಗಳಿಸುವುದು ಕಷ್ಟವೇ ಅಲ್ಲ. ಆದ್ದರಿಂದ ಉದ್ಯಾನನಗರಿಯಲ್ಲಿನ ಪಂದ್ಯಗಳಲ್ಲಿ ನೆನಪಿನಲ್ಲಿ ಉಳಿದಿದ್ದು ಹಾಗೂ ಮಿಂಚಿದ್ದು ಬ್ಯಾಟ್ಸ್ಮನ್ಗಳು. ಇದು ಅಚ್ಚರಿಯ ವಿಷಯವೇನಲ್ಲ. ಮೊದಲ ಎರಡು ಪಂದ್ಯಗಳಲ್ಲಿಯೇ 1332 ರನ್ಗಳು ಹರಿದವು. ಬ್ಯಾಟ್ಸ್ಮನ್ಗಳನ್ನು ಅಪ್ಪಿ ಮುದ್ದಾಡುವಂಥ ಅಚ್ಚುಮೆಚ್ಚಿನ ಅಂಗಳ ಇದೆಂದು ಹೇಳುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ನೀಡುವ ಅಗತ್ಯವೇ ಇಲ್ಲ. ಅಂದರೆ ಬೌಲರ್ಗಳ ಸ್ಥಿತಿ ಏನಾಗಿರಬಹುದೆಂದು ಸುಲಭವಾಗಿ ಊಹಿಸಿಕೊಳ್ಳಬಹುದು.

ಆದರೆ ಬ್ಯಾಟ್ಸ್ಮನ್ಗಳನ್ನು ಪುಟ್ಟ ಕಂದಮ್ಮನಂತೆ ಎತ್ತಿ ಮುದ್ದಾಡುವ ಅಂಗಳದಲ್ಲಿ ಜಹೀರ್ ಖಾನ್ ಅವರಂಥ ಬೌಲರ್ ತಮ್ಮ ಕರಾರುವ ಕ್ಕಾದ ದಾಳಿಯಿಂದ ಗಮನ ಸೆಳೆದಿದ್ದು ವಿಶೇಷ. 32 ವರ್ಷ ವಯಸ್ಸಿನ ಎಡಗೈ ವೇಗಿಯು ಐರ್ಲೆಂಡ್ಗೆ ತಮ್ಮ ಮೊದಲ ಎರಡು ಓವರುಗಳಲ್ಲಿಯೇ ದೊಡ್ಡ ಪೆಟ್ಟು ನೀಡುವ ಸಾಹಸ ಮಾಡಿ, ಯಶಸ್ವಿಯೂ ಆದರು.

ಭಾನುವಾರ ನಡೆದ ವಿಶ್ವಕಪ್ ಕ್ರಿಕೆಟ್ ‘ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ವಿಲಿಯಮ್ ಪೋರ್ಟರ್ಫೀಲ್ಡ್ ನಾಯಕತ್ವದ ಪಡೆಯು ಮೊದಲ ಮೂರು ಓವರುಗಳಲ್ಲಿಯೇ ಎರಡು ಮಹತ್ವದ ವಿಕೆಟ್ ಕಳೆದುಕೊಂಡು ಸಂಕಷ್ಟದ ಸುಳಿಯಲ್ಲಿ ಸಿಲುಕುವಂತೆ ಮಾಡಿದ್ದೇ ಖಾನ್. ವೇಗವೊಂದೇ ಮುಖ್ಯವಲ್ಲ ಉತ್ತಮ ನಿಯಂತ್ರಣದೊಂದಿಗೆ ಕರಾರುವಕ್ಕಾಗಿ ಚೆಂಡನ್ನು ಎಸೆಯುವುದು ಅಗತ್ಯವೆಂದು ಸ್ಪಷ್ಟವಾಗಿ ಅರಿತು ದಾಳಿ ನಡೆಸಿದರು. ಹೆಚ್ಚು ರನ್ಗಳನ್ನು ನೀಡುವಂಥ ಕೆಟ್ಟ ಬೌಲಿಂಗ್ ಅವರದ್ದಾಗಿರಲಿಲ್ಲ. ಅದೇ ಗಮನ ಸೆಳೆಯುವ ಅಂಶ.

ತಮ್ಮ ಕೋಟಾದ ಮೊದಲ ಐದು ಓವರುಗಳಲ್ಲಿ ಒಂದನ್ನು ಮೇಡಿನ್ ಮಾಡಿದ ಅವರು ಕೇವಲ ಹದಿನೈದು ರನ್ ನೀಡಿದರು. ಇದೇ ಸ್ಪೆಲ್ನಲ್ಲಿ ಪಾಲ್ ಸ್ಟಿರ್ಲಿಂಗ್ ಹಾಗೂ ಎಡ್ ಜಾಯ್ಸಿ ವಿಕೆಟ್ ಕಬಳಿಸಿದರು. ಇನಿಂಗ್ಸ್ನ ಮೊದಲ ಓವರ್ನಲ್ಲಿಯೇ ಇನ್ನೊಂದು ವಿಕೆಟ್ ಕೆಡವಲು ಅವಕಾಶವಿತ್ತು. ಆದರೆ ಜಹೀರ್ ಮೂರನೇ ಎಸೆತದಲ್ಲಿ ಪೋರ್ಟರ್ಫೀಲ್ಡ್ ಬ್ಯಾಟ್ಗೆ ಮುತ್ತಿಟ್ಟು ಸರಸವಾಡಿದ್ದ ಚೆಂಡನ್ನು ಎರಡನೇ ಸ್ಲಿಪ್ನಲ್ಲಿದ್ದ ಯೂಸುಫ್ ಪಠಾಣ್ ಕೈಚೆಲ್ಲಿದರು. ಇಲ್ಲದಿದ್ದರೆ ಮೊದಲ ಓವರ್ನಲ್ಲಿಯೇ ಐರ್ಲೆಂಡ್ನ ಆರಂಭಿಕ ಆಟಗಾರರಿಬ್ಬರೂ ನಿರ್ಗಮಿಸುತ್ತಿದ್ದರು.

ಜಹೀರ್ ಮತ್ತೆ ಕೋಟಾ ಪೂರ್ಣಗೊಳಿಸಲು ಬಂದಾಗಲೂ ಭಾರಿ ನಿರಾಸೆಯೇನು ಆಗಲಿಲ್ಲ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 40 ರನ್ ನೀಡಿ 2 ವಿಕೆಟ್ ಕಿತ್ತಿದ್ದ ಅವರು ಇಂಗ್ಲೆಂಡ್ ಎದುರು ಬಿಗುವಿನ ದಾಳಿ ನಡೆಸಲು ಪ್ರಯತ್ನ ಮಾಡಿದ್ದರು. ಆ್ಯಂಡ್ರ್ಯೂ ಸ್ಟ್ರಾಸ್ ನೇತೃತ್ವದ ತಂಡದ ಎದುರು ಹತ್ತು ಓವರುಗಳ ಕೋಟಾ ಮುಗಿಸಿದ ಭಾರತದ ಬೌಲರ್ಗಳಲ್ಲಿ ಹೆಚ್ಚು ಯಶಸ್ವಿ ಎನಿಸಿದ್ದೇ ಖಾನ್. ಆಫ್ಸ್ಪಿನ್ನರ್ ಹರಭಜನ್ಗಿಂತ ಆರು ರನ್ ಹೆಚ್ಚು ನೀಡಿದ್ದರಾದರೂ ಮೂರು ವಿಕೆಟ್ ಪಡೆದಿದ್ದರು ಎನ್ನುವುದನ್ನು ಮರೆಯುವಂತಿಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.