ಶುಕ್ರವಾರ, ಮೇ 27, 2022
30 °C

ಇಸ್ರೇಲ್ ವಸಾಹತು ವಿರೋಧಿ ಠರಾವು ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಡಿಪಿಎ): ಮಧ್ಯಪ್ರಾಚ್ಯದಲ್ಲಿರುವ ಇಸ್ರೇಲ್ ವಸಾಹತನ್ನು ‘ಕಾನೂನು ಬಾಹಿರ’ ಎಂದು ಘೋಷಿಸಬೇಕು ಎಂದು ಅರಬ್ ಹಾಗೂ ಇತರ ಮುಸ್ಲಿಂ ದೇಶಗಳು ವಿಶ್ವಸಂಸ್ಥೆ ಭದ್ರತಾ ಸಮಿತಿಯ ಮುಂದಿಟ್ಟಿದ್ದ ಬೇಡಿಕೆಯನ್ನು ಅಮೆರಿಕ ತನ್ನ ವಿಶೇಷ ‘ವೀಟೊ’ ಅಧಿಕಾರ ಬಳಸಿ ಅನೂರ್ಜಿತಗೊಳಿಸಿದೆ.ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಕಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ, ರಷ್ಯ, ಫ್ರಾನ್ಸ್, ಬ್ರಿಟನ್ ಹಾಗೂ ಚೀನಾಗಳಿಗೆ ಇಂತಹ ಯಾವುದೇ ಪ್ರಸ್ತಾವವನ್ನು ತಿರಸ್ಕರಿಸುವ ವಿಶೇಷ ‘ವೀಟೊ’ ಮತ ಚಲಾಯಿಸುವ ಹಕ್ಕಿದೆ. ಅರಬ್- ಮುಸ್ಲಿಂ ದೇಶಗಳು ಮುಂದಿಟ್ಟಿದ್ದ ಈ ಮಹತ್ವದ ಬೇಡಿಕೆಯ ಠರಾವಿನ ವಿರುದ್ಧ ಅಮೆರಿಕದ ರಾಯಭಾರಿ ಸುಸಾನ್ ರೈಸ್ ಅವರು ಕೈ ಎತ್ತುವ ಮೂಲಕ ವೀಟೊ ಚಲಾಯಿಸಿದ್ದರು.ಆದರೆ ಈ ಕ್ರಮದಿಂದ ಅಮೆರಿಕವು ‘ಇಸ್ರೇಲ್ ವಸಾಹತುಗಳ ಪರ’ ಎಂದು ಭಾವಿಸಬೇಕಿಲ್ಲ ಎಂದು ರೈಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಇಸ್ರೇಲ್ ವಸಾಹತು ವಿರೋಧಿ ಠರಾವನ್ನು ಬೆಂಬಲಿಸಿ ಯೂರೋಪ್ ರಾಷ್ಟ್ರಗಳು ಸೇರಿದಂತೆ 130 ದೇಶಗಳು ಸಹಿ ಹಾಕಿದ್ದವು. ಪೂರ್ವ ಜೆರುಸಲೇಂ ಒಳಗೊಂಡು ಪ್ಯಾಲೆಸ್ಟೀನ್ ವ್ಯಾಪ್ತಿಯಲ್ಲಿ ಇಸ್ರೇಲ್ ವಸಾಹತು 1967ರಿಂದ ಸಕ್ರಿಯವಾಗಿದೆ.ಈ ವಸಾಹತು ಕಾನೂನು ಬಾಹಿರವಾಗಿದ್ದು, ಶಾಂತಿ ಸ್ಥಾಪನೆಗೆ ಅಡ್ಡಿಯಾಗಿದೆ. ಹಾಗಾಗಿ ಇದನ್ನು ಕಾನೂನು ಬಾಹಿರ ಎಂದು ಪರಿಗಣಿಸಿ ಸೇನಾ ಕ್ರಮಕ್ಕೆ ಗುರಿಪಡಿಸಬೇಕು ಎಂದು ಈ ದೇಶಗಳು ಒತ್ತಾಯಿಸಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.