ಬೆಂಗಳೂರು: ನಗರದ ಈಜಿಪುರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ 1640 ಮನೆಗಳ ಬಹುಮಹಡಿ ಕಟ್ಟಡವನ್ನು ಪಾಲಿಕೆಯ ಜಂಟಿ ಸಹಭಾಗಿತ್ವದಲ್ಲಿ ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸುವ ಗುತ್ತಿಗೆಯನ್ನು ಬುಧವಾರ ಮೇವರಿಕ್ ಹೋಲ್ಡಿಂಗ್ಸ್ ಅಂಡ್ ಇನ್ವೆಸ್ಟ್ಮೆಂಟ್ ಸಂಸ್ಥೆಗೆ ವಹಿಸಲಾಗಿದೆ.

ವನ್ನಾರಪೇಟೆ (ನಂ. 115)ರ ವ್ಯಾಪ್ತಿಯ ಈಜಿಪುರದಲ್ಲಿ 1991-92ರಲ್ಲಿ ಸುರಿದ ಭಾರಿ ಮಳೆಯಿಂದ ಈ ಜಾಗದಲ್ಲಿ ಕಟ್ಟಡಗಳು ಶಿಥಿಲಗೊಂಡು ಭಾಗಶಃ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಸಂಪೂರ್ಣ ನೆಲಸಮ ಮಾಡಿ ಖಾಸಗಿ ಸಂಸ್ಥೆಯ ಜಂಟಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲು ಪಾಲಿಕೆ ನಿರ್ಧರಿಸಿತ್ತು.

ಅದರಂತೆ, ಪಾಲಿಕೆಯು ಮೇವರಿಕ್ ಹೋಲ್ಡಿಂಗ್ಸ್ ಅಂಡ್ ಇನ್ವೆಸ್ಟ್ಮೆಂಟ್ ಸಂಸ್ಥೆಗೆ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ನೀಡಿದೆ. ಒಪ್ಪಂದದನ್ವಯ, ಸಂಸ್ಥೆಯು ಈಜಿಪುರದ ಸುಮಾರು 15.64 ಎಕರೆ ವಿಸ್ತೀರ್ಣದ ಜಾಗದ ಪೈಕಿ 7.82 ಎಕರೆ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸುಮಾರು 320 ಚದರ ಅಡಿ ವಿಸ್ತೀರ್ಣದ 1640 ಮನೆಗಳನ್ನು ನಿರ್ಮಿಸಿಕೊಡಬೇಕಾಗುತ್ತದೆ. ಅಲ್ಲದೆ, ಬಹುಮಹಡಿ ಕಟ್ಟಡದ ಸುತ್ತಲಿನ ಜಾಗವನ್ನು 30 ವರ್ಷಗಳ ಕಾಲ ಸಂಸ್ಥೆಯೇ ನಿರ್ವಹಣೆ ಮಾಡಬೇಕಾಗುತ್ತದೆ.

ಉಳಿದ 7.82 ಎಕರೆ ಪ್ರದೇಶದಲ್ಲಿ ಸಂಸ್ಥೆಯು ಶೇ 50ರ ಅನುಪಾತದಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ ಪಾಲಿಕೆಗೆ ಹಸ್ತಾಂತರಿಸಬೇಕಾಗುತ್ತದೆ. ಈ ಎಲ್ಲ ವೆಚ್ಚವನ್ನೂ ಮೇವರಿಕ್ ಸಂಸ್ಥೆಯೇ ಭರಿಸಬೇಕಾಗುತ್ತದೆ.

ಪಾಲಿಕೆಗೆ ಹಸ್ತಾಂತರಿಸುವ ಕಟ್ಟಡವನ್ನು ಕೂಡ ಸಂಸ್ಥೆಯೇ 30 ವರ್ಷಗಳ ಕಾಲ ನಿರ್ವಹಣೆ ಮಾಡಬೇಕಾಗುತ್ತದೆ. ಇದರಿಂದ ಪಾಲಿಕೆಗೆ, ವಾರ್ಷಿಕ 6.90 ಕೋಟಿ ರೂಪಾಯಿ ಆದಾಯ ಬರಲಿದೆ. ಒಪ್ಪಂದದಂತೆ ಈ ದರವು ಐದು ವರ್ಷಗಳಿಗೊಮ್ಮೆ ಹೆಚ್ಚಾಗಲಿದೆ.

ಎರಡೂವರೆ ತಿಂಗಳಲ್ಲಿ ಕೆಲಸ ಆರಂಭ:
`ಸುಮಾರು ಎರಡು-ಎರಡೂವರೆ ತಿಂಗಳಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ~ ಎಂದು ಮೇವರಿಕ್ ಹೋಲ್ಡಿಂಗ್ಸ್ ಸಂಸ್ಥೆಯ ಮುಖ್ಯಸ್ಥ ಉದಯ ಗರುಡಾಚಾರ್ `ಪ್ರಜಾವಾಣಿ~ಗೆ ತಿಳಿಸಿದರು.

ಈ ಉದ್ದೇಶಕ್ಕಾಗಿ 120 ಕೋಟಿ ರೂಪಾಯಿ ಖರ್ಚಾಗುವ ಅಂದಾಜಿದೆ. ನೆಲ ಅಂತಸ್ತಿನ ಜತೆಗೆ, ಒಟ್ಟು ಒಂಬತ್ತು ಅಂತಸ್ತಿನ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿಕೊಡಲಾಗುತ್ತದೆ. ಎಲ್ಲ ಕಟ್ಟಡಗಳಿಗೆ ಲಿಫ್ಟ್ ಸೌಲಭ್ಯ ಕಲ್ಪಿಸಲಾಗುತ್ತದೆ. ಸರ್ಕಾರದಿಂದ ಪರಿಸರಕ್ಕೆ ಸಂಬಂಧಿಸಿದ ಒಪ್ಪಿಗೆ ದೊರೆತ ಕೂಡಲೇ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.

ಮೇಯರ್ ಪಿ. ಶಾರದಮ್ಮ, ಪಾಲಿಕೆ ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ, ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಅವರ ಸಮ್ಮುಖದಲ್ಲಿ ಪ್ರಧಾನ ಎಂಜಿನಿಯರ್ ಬಿ.ಟಿ. ರಮೇಶ್ ಹಾಗೂ ಮೇವರಿಕ್ ಸಂಸ್ಥೆಯ ಪರವಾಗಿ ಉದಯ ಗರುಡಾಚಾರ್ ಪರಸ್ಪರ ಕಡತಗಳನ್ನು ಹಸ್ತಾಂತರಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.