ಕೈರೊ (ಪಿಟಿಐ): ಈಜಿಪ್ಟ್ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆಯಲ್ಲಿ ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಪೊಲೀಸರತ್ತು ಕಲ್ಲುಗಳನ್ನು ತೂರಿದರು. ಉದ್ರಿಕ್ತ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು.

ಅಧ್ಯಕ್ಷ ಹೋಸ್ನಿ ಮುಬಾರಕ್ ಅವರನ್ನು ಪದಚ್ಯುತಗೊಳಿಸಲು ನಡೆದ ದಂಗೆ ವೇಳೆ ಮೃತಪಟ್ಟ ಕುಟುಂಬದವರು ಸೇರಿದಂತೆ ನೂರಾರು ಮಂದಿ ಮಂಗಳವಾರ ರಾತ್ರಿ ತಹರೀರ್ ವೃತ್ತದಲ್ಲಿ ಜಮಾಯಿಸಿ, ಸಾವಿಗೆ ಕಾರಣರಾದ ಭದ್ರತಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆಪಾದಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ಈ ಘಟನೆ ನಡೆಯಿತು.

ಫೆ.11 ರಂದು ಮುಬಾರಕ್ ಪದಚ್ಯುತಿಗೊಂಡ ನಂತರ ದೇಶವನ್ನು ಮುನ್ನಡೆಸುತ್ತಿರುವ ಈಜಿಪ್ಟ್ನ ಸಶಸ್ತ್ರ ಪಡೆಯ ಮುಖಂಡತ್ವ ಹೊಂದಿದ್ದ ಜ. ಮೊಹಮದ್ ಹುಸೈನ್ ತಂತಾವಿ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.