ಕಾರವಾರ: ನಗರದ ಮಹಾತ್ಮಾಗಾಂಧಿ ರಸ್ತೆಯಲ್ಲಿರುವ ನಗರಸಭೆ ಈಜುಕೊಳದ ಪಾಲಿನ ಕಹಿದಿನಗಳ ಕಾರ್ಮೋಡಗಳು ಸರಿದಿವೆ. ಈಜು ಕಲಿಯಲು ಬರುವವರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿರುವ ನಗರಸಭೆ ಈಜುಕೊಳವನ್ನು ಪುನಃ ಆರಂಭಿಸಲು ಮುಂದಾಗಿದೆ.

ಎರಡು ವರ್ಷಗಳ ಹಿಂದೆ ನಡೆದ ದುರ್ಘಟನೆಯ ನಂತರ ಈಜುಕೊಳದ ಚಟುವಟಿಕೆ ಸಂಪೂರ್ಣ ನಿಂತು ಹೋಗಿತ್ತು. ಇನ್ನೇನು ಈಜುಕೊಳ ಶಾಶ್ವತವಾಗಿ ಮುಚ್ಚಲಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಸುರಕ್ಷತೆಗೆ ಹೆಚ್ಚಿನ ಗಮನ ನೀಡಿ ಈಜುಕೊಳ ಮತ್ತೆ ಆರಂಭಿಸಬೇಕು ಎನ್ನುವ ನಗರಸಭೆ ಸದಸ್ಯರ ಒತ್ತಾಸೆಯ ಫಲವಾಗಿ ಈಜುಕೊಳ ಈಜು ಕಲಿಸಲು ಸಿದ್ಧಗೊಂಡಿದೆ.

ಜನರ ಮನಸ್ಸಿನಲ್ಲಿರುವ ತಪ್ಪು ಅಭಿಪ್ರಾಯಗಳನ್ನು ಕಿತ್ತು ಹಾಕಲು ಈಜುಕೊಳದಲ್ಲಿ ಸಣ್ಣಪುಟ್ಟ ದುರಸ್ತಿ ಕಾರ್ಯ ಮುಗಿದ ನಂತರ ಧಾರ್ಮಿಕ ವಿಧಿ-ವಿಧಾನಗಳನ್ನು ಕೈಗೊಳ್ಳಲಾಗಿದೆ. ನಗರಸಭೆ ಅಧ್ಯಕ್ಷ ಗಣಪತಿ ಉಳ್ವೇಕರ್ ಸ್ವತಃ ಕೊಳದಲ್ಲಿ ಇಳಿದು ಸುರಕ್ಷತೆಯ ಕ್ರಮಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈಜುಕೊಳದಲ್ಲಿರುವ ನೀರು ಶುದ್ಧೀಕರಣ ಘಟಕದಲ್ಲಿ ತಾಂತ್ರಿಕ ನ್ಯೂನತೆಗಳಿದ್ದು ಅದನ್ನು ಸರಿಪಡಿಸಲಾಗಿದೆ. ಪ್ರತಿ 12 ಗಂಟೆಗಳಿಗೊಮ್ಮೆ ನೀರು ಶುದ್ಧಿಕರಿಸುವ ವ್ಯವಸ್ಥೆ ಮಾಡಲಾಗಿದೆ. ಹಿಂದೆ ನಿರ್ವಹಣೆ ಸಮಸ್ಯೆಯಿಂದಾಗಿ ಕೊಳದಲ್ಲಿರುತ್ತಿದ್ದ ನೀರಿನಲ್ಲಿ ಹೆಚ್ಚು ಶುದ್ಧತೆ ಇರುತ್ತಿರಲಿಲ್ಲ.

ಕ್ಲೋರಿನೇಶನ್ ಮತ್ತು ಶುದ್ಧಿಕರಣ ಘಟಕದ ದುರಸ್ತಿಯ ನಂತರ ನೀರನ್ನು ಶುದ್ಧೀಕರಿಸಿ ಈಜುಕೊಳದಲ್ಲಿ ತುಂಬಲಾಗಿದೆ. ಕೊಳದಲ್ಲಿ ಬಿದ್ದ ಗುಂಡು ಸೂಜಿಯೂ ಎದ್ದು ಕಾಣುವಷ್ಟು ಸ್ವಚ್ಛವಾಗಿದೆ ಕೊಳದ ನೀರು.

ಕೊಳದ ತಳದಲ್ಲಿ ಕುಳಿತ ರಾಡಿಯನ್ನು ಪ್ರತಿದಿನ ಸ್ವಚ್ಛಗೊಳಿಸುವ ಸಲುವಾಗಿ ಸೆಕ್ಷನ್ ಸ್ವೀಪರ್ ಯಂತ್ರವನ್ನೂ ತಂದಿಡಲಾಗಿದೆ. ಈಜು ತರಬೇತಿಯ ನೀಡಲು ಟೆಂಡರ್ ಕರೆಯಲಾಗಿದೆ. ತರಬೇತಿ ನೀಡುವ ಕ್ಲಬ್ಗಳಿಗೆ ಕನಿಷ್ಠ ಐದು ವರ್ಷಗಳ ಅನುಭವ ಮತ್ತು ಸುರಕ್ಷತೆಯ ಸಲಕರಣೆಗಳನ್ನು ಹೊಂದಿರಬೇಕು ಎನ್ನುವ ಶರತ್ತುಗಳನ್ನು ವಿಧಿಸಲಾಗಿದೆ. ರೋಗಗಳು ಇನ್ನೊಬ್ಬರಿಗೆ ಹರಡದಂತೆ ಎಚ್ಚರಿಕೆ ವಹಿಸುವ ದೃಷ್ಟಿಯಿಂದ ಈಜು ಕಲಿಯಲು ಬರುವ ಅಭ್ಯರ್ಥಿಗಳು ವೈದ್ಯಕೀಯ ಪ್ರಮಾಣಪತ್ರ ತರಬೇಕು ಎನ್ನುವುದನ್ನು ಕಡ್ಡಾಯ ಮಾಡಲಾಗಿದೆ.

~ಸುರಕ್ಷತೆಗೆ ಹೆಚ್ಚು ಒತ್ತು ನೀಡಿ ಕಳೆದ ಎರಡ ವರ್ಷಗಳಿಂದ ಸ್ಥಗಿತಗೊಂಡಿದ್ದ ಈಜುಕೊಳವನ್ನು ಪುನಃ ಆರಂಭಿಸಲಾಗಿದೆ. ನಗರಸಭೆ ಸಿಬ್ಬಂದಿಯನ್ನೇ ಬಳಸಿಕೊಂಡು ಸಣ್ಣಪುಟ್ಟ ದುರಸ್ತಿ ಮಾಡಲಾಗಿದೆ. ಲಾಭದ ಉದ್ದೇಶವಿಟ್ಟುಕೊಂಡು ಈಜುಕೊಳ ಮಾಡಿಲ್ಲ. ಜನರಿಗೆ ಉಪಯೋಗವಾಗಲಿ ಎನ್ನುವುದೇ ನಮ್ಮ ಉದ್ದೇಶ~ ಎನ್ನುತ್ತಾರೆ ಗಣಪತಿ ಉಳ್ವೇಕರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.