ಮಂಗಳವಾರ, ಮೇ 11, 2021
22 °C

ಈರುಳ್ಳಿ ಉತ್ಪಾದನೆ ಕುಸಿತ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರಸಕ್ತ ವರ್ಷ ಒಟ್ಟು 15.13 ದಶಲಕ್ಷ ಟನ್ ಈರುಳ್ಳಿ ಉತ್ಪಾದನೆಯ ಗುರಿ ಹೊಂದಲಾಗಿದ್ದು, ತಡವಾಗಿ ಲಭಿಸಿರುವ ಮುಂಗಾರು ಇಳುವರಿಯ  ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಗ್ರಾಹಕರಿಗೆ ಈ ವರ್ಷ  ಬೆಲೆ ಏರಿಕೆಯ ಬಿಸಿ ತಟ್ಟುವುದಿಲ್ಲ ಎಂದು ನಾಸಿಕ್ ಮೂಲದ ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ (ಎನ್‌ಎಚ್‌ಆರ್‌ಡಿಎಫ್) ಭರವಸೆ ನೀಡಿದೆ.ಚೀನಾದ ನಂತರ ಪ್ರಪಂಚದಲ್ಲಿಯೇ ಅತಿ ಹೆಚ್ಚು ಈರುಳ್ಳಿ ಉತ್ಪಾದಿಸುವ ಎರಡನೆಯ ದೇಶ ಭಾರತ. ಪ್ರಸಕ್ತ ವರ್ಷ ತಡವಾಗಿ ಲಭಿಸಿರುವ ಮುಂಗಾರಿನಿಂದ ಉತ್ಪಾದನೆ ಶೇ 15ರಿಂದ ಶೇ 20ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಉತ್ಪಾದನೆ ಕುಸಿಯುವುದಿಲ್ಲ ಎಂದು `ಎನ್‌ಎಚ್‌ಆರ್‌ಡಿಎಫ್~ ಸ್ಪಷ್ಟಪಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.