ಶುಕ್ರವಾರ, ಜನವರಿ 24, 2020
20 °C

ಈ ಅನ್ಯಾಯಕ್ಕೆ ಹೊಣೆ ಯಾರು?

–ವಸಂತ ಬಿ,ಈಶ್ವರಗೆರೆ,ಹಿರಿಯೂರು ತಾ. Updated:

ಅಕ್ಷರ ಗಾತ್ರ : | |

ಸರ್ಕಾರ ತನ್ನ  ಕೆಲಸದ ಅಗತ್ಯಕ್ಕಾಗಿ ಕೆಲವು ಸಂಸ್ಥೆ­ಗಳಿಂದ ಹೊರಗುತ್ತಿಗೆ ನೌಕರರನ್ನು  ತೆಗೆದು­ಕೊಂಡು, ಆಡಳಿತ ನಿರ್ವಹಿಸುತ್ತಿದೆ. ಆದರೆ ಆ ಸಂಸ್ಥೆಗಳು ಕೆಲಸಗಾರರನ್ನು ಶೋಷಿಸಿ ಮಾನಸಿಕ­ವಾಗಿ, ಆರ್ಥಿಕ­ವಾಗಿ, ಉದ್ಯೋಗ ಭದ್ರತೆಯೂ ಇರದಂತೆ ತೊಳಲಾಡಿಸುತ್ತಿವೆ.ಕಿಯೊನಿಕ್ಸ್ ಎಂಬ ಸಂಸ್ಥೆಯಲ್ಲಿ ಕಾರ್ಯ­ನಿರ್ವ­ಹಿಸುತ್ತಿರುವ ಸಾವಿರಾರು ನೌಕರರು ಸಂಕಷ್ಟದಲ್ಲಿದ್ದಾರೆ. ಈ ಸಂಸ್ಥೆ  ತನ್ನಲ್ಲಿ ಹೊರ­ಗುತ್ತಿಗೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ  ಹೊರಗುತ್ತಿಗೆ ಅವಧಿ ಮುಗಿಯುತ್ತಾ ಬಂದರೂ ಕಾರ್ಮಿಕ ಭವಿಷ್ಯ ನಿಧಿ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಜೊತೆಗೆ ಆರೋಗ್ಯ ಸಮಸ್ಯೆ ಬಂದಾಗ ಪಡೆದುಕೊಳ್ಳುವ ಉಚಿತ ಆರೋಗ್ಯ ವಿಮಾ ಸೌಲಭ್ಯವನ್ನೂ ನೀಡುತ್ತಿಲ್ಲ. ಹಾಗೆಯೇ  ತಿಂಗಳ ಭತ್ಯೆಯನ್ನೂ ಸರಿಯಾಗಿ ನೀಡುತ್ತಿಲ್ಲ. ಈ ಬಗ್ಗೆ ಸಂಸ್ಥೆಯ ಆಡಳಿತ ಮುಖ್ಯಸ್ಥರನ್ನು  ಪ್ರಶ್ನಿಸಿದರೆ ಸಮಂಜಸ ಉತ್ತರವೇ ಇಲ್ಲ. ಇದಕ್ಕೆಲ್ಲ ಯಾರು ಹೊಣೆ?

 

ಪ್ರತಿಕ್ರಿಯಿಸಿ (+)