ಬುಧವಾರ, ಜೂನ್ 16, 2021
21 °C

ಈ ಅಭ್ಯರ್ಥಿ ಆಸ್ತಿ ಮೌಲ್ಯ ರೂ 750!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ (ಪಿಟಿಐ): ‌ಹಲವು ಕೋಟ್ಯಧಿಪತಿಗಳು ಸಂಸತ್‌ ಪ್ರವೇಶಿಸುವ ಕನಸು ಕಾಣುತ್ತಿರುವಾಗ ಕೇವಲ ₨750 ಮೌಲ್ಯದ ಆಸ್ತಿ ಹೊಂದಿರುವ ವ್ಯಕ್ತಿಯೊಬ್ಬರು ಕೇರಳದಲ್ಲಿ ಚುನಾವಣೆ ಅಖಾಡಕ್ಕಿಳಿದಿದ್ದಾರೆ.



ಏಪ್ರಿಲ್‌ 10ರಂದು ನಡೆಯಲಿರುವ ಚುನಾವಣೆಗೆ ಕೊಟ್ಟಾಯಂ ಕ್ಷೇತ್ರದಿಂದ  ಸೋಷಿಯಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌)  (ಎಸ್‌ಯುಸಿಐ) ಪಕ್ಷದಿಂದ ಸ್ಪರ್ಧಿಸಿ­ರುವ ಬಿಜು ಎಂಬವರು ತಮ್ಮ ಬಳಿ ₨500 ನಗದು ಮತ್ತು ಸ್ಥಳೀಯ ಸಹಕಾರ ಬ್ಯಾಂಕ್‌ ಖಾತೆಯಲ್ಲಿ ₨250 ಇದೆ ಎಂದು ಪ್ರಮಾಣ ಪತ್ರದಲ್ಲಿ ಹೇಳಿ­ಕೊಂಡಿದ್ದಾರೆ.



ತಮ್ಮ ಇಲ್ಲವೇ ಪತ್ನಿ ಬಳಿಯಲ್ಲಿ ಯಾವುದೇ ಸ್ಥಿರಾಸ್ತಿ, ವಾಹನ, ಆಭರಣಗಳು ಇಲ್ಲ ಎಂದೂ 46 ವರ್ಷದ ಬಿಜು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಇದೇ ಪಕ್ಷದ ತಿರುವನಂತಪುರ ಅಭ್ಯರ್ಥಿ ಷಾಜರ್‌ ಖಾನ್‌ ಅವರು, ತಮ್ಮ ಆಸ್ತಿ ಮೌಲ್ಯ ₨1,500 ಎಂದು ಘೋಷಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.