ಬುಧವಾರ, ಏಪ್ರಿಲ್ 21, 2021
30 °C

ಈ ಊರಲ್ಲಿ ಅವಕಾಶ ಕಡಿಮೆ

ಸಂದರ್ಶನ: ಪವಿತ್ರಾ ಶೆಟ್ಟಿ Updated:

ಅಕ್ಷರ ಗಾತ್ರ : | |

ಫ್ಯಾಷನ್‌ಗೆ ಬರಲು ಕಾರಣ?

ಹತ್ತನೇ ಕ್ಲಾಸ್‌ನಲ್ಲಿ ಇರುವಾಗಲೇ ನನಗೆ ಫ್ಯಾಷನ್ ಕಡೆಗೆ ಆಸಕ್ತಿ ಬೆಳೆದಿತ್ತು. ದೊಡ್ಡ ಮಾಡೆಲ್‌ಗಳು ಮಾಡುತ್ತಿದ್ದ ಶೋ ನೋಡುತ್ತಿದ್ದೆ. ಕೊನೆಗೆ ಪ್ರಸಾದ್ ಬಿದಪ್ಪ ಅವರ ಬಳಿ ಬಂದಾಗ ವರ್ಕ್‌ಔಟ್ ಮಾಡಿ ಎರಡು ವರ್ಷದ ನಂತರ ಬರಲು ಹೇಳಿದರು. ಗೆಳೆಯರ ಹತ್ತಿರ ಟಿಪ್ಸ್ ತೆಗೆದುಕೊಂಡೆ. ನನ್ನೆಲ್ಲಾ ಕನಸುಗಳನ್ನು ನನಸು ಮಾಡಿಕೊಳ್ಳಲು ಇದೇ ಸಹಕಾರಿಯಾಯಿತು.ಯಾವ ರೀತಿ ವರ್ಕ್‌ಔಟ್ ಮಾಡುತ್ತೀರಿ?

ವಾರದಲ್ಲಿ ನಾಲ್ಕು ಬಾರಿ ಜಿಮ್‌ಗೆ ಹೋಗುತ್ತೇನೆ. ಅರ್ಧಗಂಟೆ ಪ್ರಾಣಯಾಮ ಮಾಡುತ್ತೇನೆ. ಇದರಿಂದ ದೇಹಾರೋಗ್ಯ ಸರಿಯಾಗಿ ಇರುವುದಲ್ಲದೆ ಮನಸ್ಸು ಶಾಂತವಾಗಿರುತ್ತದೆ.ಡಯಟಿಂಗ್?

ಯಾವುದೇ ರೀತಿ ಡಯಟಿಂಗ್ ಮಾಡುವುದಿಲ್ಲ. ಎಣ್ಣೆ ಪದಾರ್ಥ, ಕೊಬ್ಬಿನ ಅಂಶ ಇರುವ ಆಹಾರವನ್ನು ತಿನ್ನುವುದಿಲ್ಲ ಅಷ್ಟೆ. ಆಹಾರ ಹಿತಮಿತವಿದ್ದರೆ ಯಾವುದೇ ಡಯಟಿಂಗ್‌ನ ಆಗತ್ಯವಿಲ್ಲ.ಮನೆಯಲ್ಲಿ ಬೆಂಬಲ ಹೇಗಿತ್ತು?

ನನ್ನೂರು ಮಂಗಳೂರು. ಸಹಜವಾಗಿಯೇ ಮನೆಯ್ಲ್ಲಲಿ ವಿರೋಧ ವ್ಯಕ್ತವಾಗಿತ್ತು. ಎಲ್ಲಾ ಅಪ್ಪ-ಅಮ್ಮಂದಿರಿಗೆ ಮಗ ಡಾಕ್ಟರ್, ಎಂಜಿನಿಯರ್ ಆಗಬೇಕು ಎಂಬ ಆಸೆ ಇರುತ್ತದೆ. ಆದರೆ ನನಗೆ ಇದೇ ಕ್ಷೇತ್ರದಲ್ಲಿ ಆಸಕ್ತಿ ಇರುವುದರಿಂದ ಅವರು ಸುಮ್ಮನಾದರು. ಜತೆಗೆ ನನ್ನ ಹಟಕ್ಕೆ ಮಣಿದು ಬೆಂಬಲ ಕೂಡ ನೀಡಿದರು.ಈ ಕ್ಷೇತ್ರದಲ್ಲಿ ಮೊದಲ ಅನುಭವ ಹೇಗಿತ್ತು?

ನನ್ನ ಮೊದಲ ಶೋ ಅಶೋಕ್ ಹೊಟೇಲ್‌ನಲ್ಲಿ. ಸ್ವಲ್ಪ ಮಟ್ಟಿಗೆ ಭಯವಿತ್ತು. ಯಾಕೆಂದರೆ ಅದು ನಾನು ಫ್ಯಾಷನ್ ಲೋಕಕ್ಕಿಡುತ್ತಿದ್ದ ಮೊದಲ ಹೆಜ್ಜೆಯಾಗಿತ್ತು. ನಂತರದ ಶೋಗಳಲ್ಲಿ ಆ ಭಯ ಕಡಿಮೆಯಾಯಿತು. ಅಭ್ಯಾಸ, ಅನುಭವದಿಂದ ನಾನು ಕಲಿತೆ. ಎಲ್ಲಕ್ಕಿಂತ ಹೆಚ್ಚಾಗಿ ಆತ್ಮವಿಶ್ವಾಸ ಇರಬೇಕು. ಆಗ ಮಾತ್ರ ಹೆಜ್ಜೆ ಎತ್ತಿಡಲು ಸಾಧ್ಯ.ಹುಡುಗರ ಬೇಸಿಕ್ ಸ್ಟೈಲ್ ಯಾವುದು?

ಹುಡುಗಿಯರು ಕ್ಯಾಟ್‌ವಾಕ್ ಮಾಡಬೇಕು. ಆದರೆ ಹುಡುಗರ ಸ್ಟೈಲ್ ಬೇರೆ ರೀತಿ. ಕೈ ಆಡಿಸಬಾರದು. ರ‌್ಯಾಂಪ್ ಮೇಲೆ ಹೇಗೆ ನಡೆಯಬೇಕು ಎಂಬುದನ್ನು ತಿಳಿದುಕೊಂಡಿರಬೇಕು. ಫಿಟ್ ಬಾಡಿ ಇರಬೇಕು. ಕೆಲವರಿಗೆ ಅವರದೇ ಆಗಿರುವ ಶೈಲಿ ಇರುತ್ತದೆ. ಅದರಿಂದಲೇ ಪ್ರಸಿದ್ಧಿಗೆ ಬರುತ್ತಾರೆ.ನಗರದಲ್ಲಿ ಅವಕಾಶ ಹೇಗಿದೆ?

ಬೆಂಗಳೂರಿನಲ್ಲಿ ಮಾಡೆಲ್‌ಗಳಿಗೆ ಅವಕಾಶ ಕಡಿಮೆ ಇದೆ. ಅವಕಾಶ ಬೇಕೆಂದರೆ ಮುಂಬೈಗೆ ಹೋಗಬೇಕು. ಚೆನ್ನೈ, ಹೈದರಾಬಾದ್‌ನಲ್ಲೂ ಅವಕಾಶವಿದೆ.ನಿಮ್ಮ ಇಷ್ಟದ ಮಾಡೆಲ್ ಯಾರು?

ರಾಹುಲ್ ದೇವ್

ಈ ಕ್ಷೇತ್ರದಲ್ಲಿ ಹುಡುಗಿಯರಿಗೆ ಜಾಸ್ತಿ ಅವಕಾಶ ಇದೆ ಅಲ್ಲವೇ?

ಅದು ನಿಜ. ಹುಡುಗಿಯರು ಗ್ಲಾಮರಸ್ ಆಗಿರುತ್ತಾರೆ, ಕೆಲವೊಂದು ಪ್ರಾಡಕ್ಟ್ಸ್ ಹುಡುಗಿಯರಿಗೆ ಮಾತ್ರ ಇರುತ್ತದೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಶೇ 10ರಷ್ಟು ಹುಡುಗರು ಇರಬಹುದು, ಅಷ್ಟೆ.ಫ್ಯಾಷನ್ ಬಿಟ್ಟು ಏನಿಷ್ಟ?

`ಗಾಳ~ ಎಂಬ ಸಿನಿಮಾದಲ್ಲಿ ನಟಿಸಿದ್ದೇನೆ. ಸದ್ಯದಲ್ಲಿಯೇ ಅದು ಬಿಡುಗಡೆಯಾಗಲಿದೆ. ವ್ಯಾಪಾರಿ ಆಗಬೇಕು ಎಂಬ ಉದ್ದೇಶವಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.