ಭಾನುವಾರ, ಜೂನ್ 20, 2021
26 °C

ಈ ಬಾರಿಯೂ ಅಪರಾಧ ಹಿನ್ನೆಲೆಯವರಿಗೇ ಮಣೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲೋಕಸಭಾ ಚುನಾವಣೆಗೆ ಕೆಲವು ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿವೆ.ಮಾರ್ಚ್‌ 2ನೇ ತಾರೀಖಿನವರೆಗೆ ವಿವಿಧ ಪಕ್ಷಗಳ 203 ಅಭ್ಯರ್ಥಿಗಳ ಹೆಸರು ಪ್ರಕಟಗೊಂಡಿದೆ. ಇವರಲ್ಲಿ 70 ಅಭ್ಯರ್ಥಿಗಳು ಈ ಹಿಂದೆ ಲೋಕಸಭೆ­/ರಾಜ್ಯಸಭೆ ಇಲ್ಲವೇ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದವರು.ಇವರು ಈ ಹಿಂದೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರ­, ಆಸ್ತಿವಿವರಗಳನ್ನು  ಪ್ರಜಾಪ್ರಭುತ್ವ ಸುಧಾರಣೆಗಳ ಸಂಸ್ಥೆ (ಎಡಿಆರ್‌) ಮತ್ತು ರಾಷ್ಟ್ರೀಯ  ಚುನಾವಣಾ ನಿಗಾ ಸಂಸ್ಥೆ (ಎನ್‌ಇಡಬ್ಲ್ಯು) ಒಟ್ಟಾಗಿ ವಿಶ್ಲೇಷಿಸಿವೆ.ಈ ಅಭ್ಯರ್ಥಿಗಳು ಈಗ ಹೊಂದಿರುವ ಆಸ್ತಿ ಹಾಗೂ ಎದುರಿಸುತ್ತಿರುವ ಅಪರಾಧ ಪ್ರಕರಣಗಳ ಕುರಿತ ಹೊಸ ಮಾಹಿತಿಗಳು ಅವರು 2014ರ ಚುನಾವಣೆಗಾಗಿ ಪ್ರಮಾಣಪತ್ರ ಸಲ್ಲಿಸಿದ ಬಳಿಕವಷ್ಟೇ ತಿಳಿಯಲಿದೆ.

ವಿಶ್ಲೇಷಣಾ ವರದಿ ವಿವರ

(ಈ ಹಿಂದೆ ಸಲ್ಲಿಸಿರುವ ಪ್ರಮಾಣಪತ್ರದ ಆಧಾರದಲ್ಲಿ)

*ಅಪರಾಧ ಪ್ರಕರಣ

70 ಅಭ್ಯರ್ಥಿಗಳಲ್ಲಿ  34 ಮಂದಿ (ಶೇ 49ರಷ್ಟು) 224 ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಶಿವಸೇನೆಯು ಕಣಕ್ಕಿಳಿಸಿರುವ 14 ಅಭ್ಯರ್ಥಿಗಳಲ್ಲಿ 12, ಬಿಜೆಪಿಯ 32 ಅಭ್ಯರ್ಥಿಗಳಲ್ಲಿ 13 ಮಂದಿ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿ­ದ್ದಾರೆ. ಎನ್‌ಸಿಪಿ ಪ್ರಕಟಿಸಿರುವ 13 ಸ್ಪರ್ಧಿಗಳಲ್ಲಿ 8 ಜನ ಇಂತಹ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದರು.

*ಗಂಭೀರ ಕ್ರಿಮಿನಲ್‌ ಪ್ರಕರಣ

70 ಅಭ್ಯರ್ಥಿಗಳಲ್ಲಿ  20 ಜನರು ಅತಿ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದರು.
*ಹತ್ಯೆ ಮತ್ತು ಅದಕ್ಕೆ ಸಂಬಂಧಿಸಿದ ಪ್ರಕರಣಗಳು

ತಮ್ಮ ವಿರುದ್ಧ ಕೊಲೆ, ಹತ್ಯೆ ಯತ್ನ ಪ್ರಕರಣ ದಾಖಲಾಗಿದೆ ಎಂದು ನಾಲ್ವರು ಅಭ್ಯರ್ಥಿ ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಿದ್ದರು.*ಆಸ್ತಿ ವಿವರ 

70 ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ ₨5.76 ಕೋಟಿ ಇತ್ತು.*ಕೋಟ್ಯಧಿಪತಿಗಳ ಸಂಖ್ಯೆ

70 ಅಭ್ಯರ್ಥಿಗಳಲ್ಲಿ 36 (ಶೇ 51ರಷ್ಟು) ಮಂದಿ ಕೋಟ್ಯಧಿಪತಿ­ಗಳಾಗಿದ್ದರು. ಪಕ್ಷವಾರು ಕೋಟ್ಯಧಿಪತಿಗಳು: ಶಿರೋಮಣಿ ಅಕಾಲಿದಳದಲ್ಲಿ 5, ಎನ್‌ಸಿಪಿಯಲ್ಲಿ 9, ಬಿಜೆಪಿಯಲ್ಲಿ 13, ಎಐಎಡಿಎಂಕೆಯಲ್ಲಿ ಒಬ್ಬರು ಕೋಟ್ಯಧಿಪತಿಗಳಿದ್ದರು.

*ಪುನರಾಯ್ಕೆ ಬಯಸಿದವರು: 70 ಅಭ್ಯರ್ಥಿಗಳಲ್ಲಿ 29 ಮಂದಿ ಪ್ರಸ್ತುತ ಲೋಕಸಭಾ ಸದಸ್ಯರಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.