ಬೆಂಗಳೂರು: ಸರ್ಕಾರಿ ಕೋಟಾದ ಸ್ನಾತಕೋತ್ತರ ವೈದ್ಯಕೀಯ, ದಂತವೈದ್ಯಕೀಯ ಕೋರ್ಸ್ಗಳ ಪ್ರವೇ ಶಕ್ಕೆ ಈ ಬಾರಿ ಆನ್ಲೈನ್ ಕೌನ್ಸೆಲಿಂಗ್ ನಡೆಯಲಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದಕ್ಕಾಗಿ ಸಿದ್ಧತೆ ನಡೆಸಿದೆ. ಮಾರ್ಚ್ 2 ಅಥವಾ 3ನೇ ವಾರದಲ್ಲಿ ಕೌನ್ಸೆಲಿಂಗ್ ಶುರುವಾಗಲಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಪ್ರತಿ ವರ್ಷ ರಾಜೀವ್ಗಾಂಧಿ ಆರೋಗ್ಯ ವಿಜ್ಞಾನ ಗಳ ವಿಶ್ವವಿದ್ಯಾಲಯವೇ ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ಕೌನ್ಸೆಲಿಂಗ್ ನಡೆಸುತ್ತಿತ್ತು.

ಆದರೆ, ಈ ಬಾರಿ ರಾಷ್ಟ್ರೀಯ ಪರೀಕ್ಷಾ ಮಂಡಳಿಯೇ (ಎನ್ಬಿಇ) ಆನ್ಲೈನ್ ಮೂಲಕ ಪ್ರವೇಶ ಪರೀಕ್ಷೆ ನಡೆಸಿದ್ದು, ಅಭ್ಯರ್ಥಿಗಳು ಫಲಿತಾಂಶ ನಿರೀಕ್ಷೆಯಲ್ಲಿದ್ದಾರೆ. ಅದು ಹೊರ ಬಿದ್ದ ನಂತರ ಆನ್ಲೈನ್ ಕೌನ್ಸೆಲಿಂಗ್ ಅರಂಭಿಸುವ ಉದ್ದೇಶವಿದೆ.

ಕಳೆದ ವರ್ಷ ಸ್ನಾತಕೋತ್ತರ ವೈದ್ಯಕೀಯ ವಿಭಾಗದಲ್ಲಿ ಒಟ್ಟು 1807 ಸೀಟುಗಳು ಲಭ್ಯವಿದ್ದವು. ಈ ಪೈಕಿ 229 ಸೀಟುಗಳು ಅಖಿಲ ಭಾರತ ಕೋಟಾ ಮೂಲಕ ಹಂಚಿಕೆ ಆಗಿದ್ದವು. 590 ಸೀಟುಗಳು ರಾಜ್ಯ ಕೋಟಾ ಮೂಲಕ ಹಾಗೂ 988 ಸೀಟುಗಳು ಆಡಳಿತ ಮಂಡಳಿ ಕೋಟಾ ಮೂಲಕ ಹಂಚಿಕೆ ಆಗಿದ್ದವು.

ಈ ವರ್ಷ ಸೀಟುಗಳ ಸಂಖ್ಯೆಯಲ್ಲಿ ಹೆಚ್ಚಳವಾ ಗುವ ನಿರೀಕ್ಷೆ ಇದ್ದು, ಮಾರ್ಚ್ ಮೊದಲ ವಾರ ಸ್ಪಷ್ಟಚಿತ್ರಣ ಸಿಗಲಿದೆ ಎಂದು ವೈದ್ಯಕೀಯ ಇಲಾಖೆಯ ಮೂಲಗಳು ತಿಳಿಸಿವೆ.

ಸ್ನಾತಕೋತ್ತರ ವೈದ್ಯಕೀಯ ವಿಭಾಗದಲ್ಲಿ ಶೇ 33ರಷ್ಟು ಸೀಟುಗಳು ಸರ್ಕಾರಿ ಕೋಟಾದಡಿ ಲಭ್ಯವಾಗಲಿವೆ. ಉಳಿದ ಶೇ 67ರಷ್ಟು ಸೀಟುಗಳು ಕಾಮೆಡ್ – ಕೆ ಹಾಗೂ ಆಡಳಿತ ಮಂಡಳಿ ಕೋಟಾ ಮೂಲಕ ಭರ್ತಿ ಮಾಡಲಾಗುತ್ತದೆ.

ಅಖಿಲ ಭಾರತ ಕೋಟಾ ಸೀಟುಗಳ ಭರ್ತಿಗೆ ಮಾರ್ಚ್ ಮೊದಲ ವಾರ ಪ್ರಥಮ ಸುತ್ತಿನ ಕೌನ್ಸೆಲಿಂಗ್ ನಡೆಯ ಲಿದೆ. ಇದಾದ ನಂತರ ರಾಜ್ಯ ಕೋಟಾ ಸೀಟುಗಳ ಭರ್ತಿಗೆ ಪ್ರಾಧಿಕಾರವು ಕೌನ್ಸೆಲಿಂಗ್ ಆರಂಭಿಸಲಿದೆ.

ಎರಡು ಸುತ್ತಿನಲ್ಲಿ ಕೌನ್ಸೆಲಿಂಗ್ ನಡೆಯಲಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ಮೇ 31ರವರೆಗೂ ಪ್ರವೇಶಕ್ಕೆ ಅವಕಾಶ ಇದೆ.
ಮಾರ್ಚ್ ಎರಡನೇ ವಾರದಲ್ಲಿ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದ್ದು, ಆ ನಂತರ ಆನ್ಲೈನ್ ಕೌನ್ಸೆಲಿಂಗ್ ನಡೆಯಲಿದೆ.
ಅದಕ್ಕೂ ಮುಂಚೆ ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ನಡುವೆ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಒಪ್ಪಂದ ಮಾಡಿಕೊಳ್ಳ ಬೇಕಾಗುತ್ತದೆ.

ಏಳು ಅಲ್ಪಸಂಖ್ಯಾತ ಕಾಲೇಜುಗಳಿಗೆ ಕುತ್ತು ?
ಭಾಷಾ ಅಲ್ಪಸಂಖ್ಯಾತ ಕಾಲೇಜು ಗಳು ಶೇ 25ರಷ್ಟು ಸೀಟುಗಳನ್ನು ಮಾತ್ರ ಸರ್ಕಾರಕ್ಕೆ ನೀಡುತ್ತವೆ. ಇನ್ನುಳಿದ ಶೇ 75ರಷ್ಟು ಸೀಟುಗಳಲ್ಲಿ ಶೇ 66ರಷ್ಟು ಸೀಟುಗಳನ್ನು ಭಾಷಾ ಅಲ್ಪಸಂಖ್ಯಾತರಿಗೆ ನೀಡಬೇಕು.

ಆದರೆ, ಏಳು ಕಾಲೇಜುಗಳು ಇದನ್ನು ಪಾಲಿಸಿಲ್ಲ. ಉದಾಹರಣೆಗೆ ತುಳು ಭಾಷಾ ಅಲ್ಪಸಂಖ್ಯಾತ ಕಾಲೇಜು ಎಂದು ಮಾನ್ಯತೆ ಪಡೆದುಕೊಂಡಿದ್ದರೆ, ಆ ಸಮುದಾಯದವರಿಗೇ ಶೇ 66ರಷ್ಟು ಸೀಟುಗಳನ್ನು ನೀಡಬೇಕು. ಆಡಳಿತ ಮಂಡಳಿಯಲ್ಲೂ ಮೂರನೇ ಎರಡ ರಷ್ಟು ಸದಸ್ಯರು ತುಳು ಸಮುದಾಯ ದವರು ಇರಬೇಕು.

ಆ ಪ್ರಕಾರ ಪ್ರವೇಶ ನೀಡದ ಕಾರಣ ಮಂಗಳೂರಿನ ಎ.ಜೆ.ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಶ್ರೀನಿವಾಸ ವೈದ್ಯಕೀಯ ಕಾಲೇಜು, ರಾಯಚೂರಿನ ನವೋದಯ ವೈದ್ಯಕೀಯ ಕಾಲೇಜು, ಬೆಂಗಳೂರಿನ ಎಂವಿಜೆ ವೈದ್ಯಕೀಯ ಕಾಲೇಜು, ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು, ವೈದೇಹಿ ವೈದ್ಯಕೀಯ ಕಾಲೇಜು, ಸಪ್ತಗಿರಿ ವೈದ್ಯಕೀಯ ಕಾಲೇಜುಗಳಿಗೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ, ಸರಿಯಾದ ಉತ್ತರ ನೀಡಿಲ್ಲ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ತಿಳಿಸಿದೆ.

ಈ ಕಾಲೇಜುಗಳು ಭಾಷಾ ಅಲ್ಪಸಂಖ್ಯಾತ ಸಂಸ್ಥೆಗಳ ಪಟ್ಟಿಯಲ್ಲಿ ಬರುತ್ತವೆ. ನಿಯಮಾವಳಿ ಪ್ರಕಾರ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದ ಕಾರಣ ಏಳೂ ಕಾಲೇಜುಗಳಿಗೆ ಹಿಂದೆ ನೀಡಿದ್ದ ಅಲ್ಪಸಂಖ್ಯಾತ ಸ್ಥಾನಮಾನದ ಮಾನ್ಯತೆಯನ್ನು ಅಮಾನತಿನಲ್ಲಿ ಇಡಲಾಗಿದೆ. ಹೀಗಾಗಿ ಅಲ್ಪಸಂಖ್ಯಾತ ಕಾಲೇಜುಗಳ ಪಟ್ಟಿಯಲ್ಲಿ ಇವು ಬರುವುದಿಲ್ಲ. ಈ ವಿಷಯವನ್ನು ವಿದ್ಯಾರ್ಥಿಗಳ ಗಮನಕ್ಕೆ ತರಬೇಕು ಎಂದು ಎಲ್ಲ ಕಾಲೇಜುಗಳಿಗೆ ಸೂಚಿಸಲಾಗಿದೆ.

ಈ ಸಂಬಂಧ ಇದೇ 21ರಂದು ವೈದ್ಯಕೀಯ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಹಲವು ವರ್ಷಗಳಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನಿಗದಿತ ಪ್ರಮಾಣದಲ್ಲಿ ಸೀಟುಗಳನ್ನು ನೀಡಿಲ್ಲ. ಹೀಗಾಗಿ ಈ ವರ್ಷ ಆಡಳಿತ ಮಂಡಳಿ ಕೋಟಾ ಸೀಟುಗಳನ್ನೂ ಮುಟ್ಟು ಗೋಲು ಹಾಕಿಕೊಂಡು ಎಲ್ಲ ಸೀಟು ಗಳನ್ನು ಸರ್ಕಾರಿ ಕೋಟಾ ಮೂಲಕ ಏಕೆ ಹಂಚಬಾರದು ಎಂದು ಕಾಲೇಜುಗಳ ಆಡಳಿತ ಮಂಡಳಿಗಳನ್ನು ಪ್ರಶ್ನಿಸಲಾಗಿದೆ.

‘ಅಲ್ಪಸಂಖ್ಯಾತ’ ಸ್ಥಾನಮಾನ ರದ್ದಾದರೆ ಈ ಕಾಲೇಜುಗಳಲ್ಲಿ ಪದವಿ ವಿಭಾಗದಲ್ಲಿ ಶೇ 40ರಷ್ಟು ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಶೇ 33ರಷ್ಟು ಸೀಟುಗಳು ಸರ್ಕಾರಕ್ಕೆ ಲಭ್ಯವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.