ಹೆಲ್ಮೆಟ್ ಹಾಕಿಕೊಂಡು, ಕೈಯಲ್ಲಿ ಬ್ಯಾಟ್ ಹಿಡಿದು ಹೊರಡಲು ರೆಡಿಯಾಗುತ್ತಿದ್ದಳು ಹೆಂಡತಿ.

‘ಎಲ್ಲಿಗೆ ಹೊರಟಿದ್ದೀಯಾ? ಇದೇನು ನಿನ್ನ ಅವತಾರ?’ ಕುತೂಹಲದಿಂದ ಕೇಳಿದೆ.

‘ಇದು ನವೆಂಬರ್ ಕ್ರಾಂತಿ’ ಎಂದಳು ಒಗಟಾಗಿ.

‘ನವೆಂಬರ್ ಕ್ರಾಂತಿ ಪೋಸ್ಟ್ಪೋನ್ ಆಗಿ, ಡಿಸೆಂಬರ್–ಜನವರಿಗೆ ಹೋಗಿದೆ. ಈಗ ಬ್ಯಾಟ್ ಹಿಡ್ಕೊಂಡು ನೀನೇನ್ ಕ್ರಾಂತಿ ಮಾಡ್ತೀಯ’ ಎಂದೆ.

‘ನಮ್ ದೇಶದ ಹೆಣ್ಮಕ್ಕಳು ಕ್ರಿಕೆಟ್ ವಿಶ್ವಕಪ್ ಗೆದ್ದಿರೋದೇ ನಿಜವಾದ ನವೆಂಬರ್ ಕ್ರಾಂತಿ. ಮುಂದೆ ನಾನೂ ಕ್ರಿಕೆಟರ್ ಆಗಿ ದೇಶಕ್ಕೆ ಕಪ್ ತಂದುಕೊಡ್ತೀನಿ’ ಎನ್ನುತ್ತಾ ಗ್ಲೌಸ್ ಹಾಕಿಕೊಳ್ಳತೊಡಗಿದಳು.

‘ಕ್ರಿಕೆಟ್ ಆಟಗಾರ್ತಿಯರಿಗೆ ಈಗ ಸಿಗ್ತಿರೋ ಕೀರ್ತಿ, ದುಡ್ಡು ನೋಡಿ ಕ್ರಿಕೆಟ್ಗೆ ಧುಮುಕೋದಲ್ಲ. ಅಲ್ಲದೆ, ನಿನ್ನ ಕಾಲ ಮುಗೀತು... ಬೇಕಾದರೆ ಮಗಳನ್ನ ಕ್ರಿಕೆಟರ್ ಮಾಡೋಣ ಬಿಡು. ನಿನ್ನ ವಯಸ್ಸಿಗೆ ಪಾಲಿಟಿಕ್ಸ್ ಬೆಸ್ಟ್. ಏಕೆಂದರೆ, 50 ವರ್ಷಗಳಾದರೂ ರಾಜಕೀಯದಲ್ಲಿ ಯಂಗ್ ಲೀಡರ್ ಅಂತಾರೆ’ ಎಂದೆ ವ್ಯಂಗ್ಯವಾಗಿ.

‘ಹೆಣ್ಮಕ್ಕಳಿಗೆ ರಾಜಕೀಯದಲ್ಲಿ ಬೆಳೆಯೋಕೆ ಎಲ್ರೀ ಬಿಡ್ತೀರಿ. ಈಗ ನೋಡಿ, ಕರ್ನಾಟಕದ ಸಿಎಂ ಸ್ಥಾನಕ್ಕೆ ಒಬ್ಬರದಾದರೂ ಹೆಣ್ಮಕ್ಕಳ ಹೆಸರು ಕೇಳಿ ಬರ್ತಿದೆಯಾ?’

‘ರಾಜಕೀಯಕ್ಕೆ ಹೋಗಿ ಕರ್ನಾಟಕದ ಮೊದಲ ಮಹಿಳಾ ಮುಖ್ಯಮಂತ್ರಿ ನೀನೇ ಆಗು’ ಎಂದೆ ನಗುತ್ತಾ.

‘ಡೆಪ್ಯುಟಿ ಆದವರೇ ಒಂದೇ ಒಂದು ಮೆಟ್ಟಿಲು ಮೇಲೆ ಹತ್ತೋಕೆ ಹರಸಾಹಸ ಮಾಡ್ತಿದ್ದಾರೆ, ಇನ್ನು ನನ್ನನ್ನ ಸಿಎಂ ಮಾಡಿಬಿಡ್ತಾರಾ’ ಎಂದಳು.

‘ಎಮ್ಮೆಲ್ಲೆ ಆದವರು ಮಿನಿಸ್ಟರ್ ಆಗೋಕೆ ಹಲವು ಕಲೆಗಳು ಗೊತ್ತಿರಬೇಕು. ಇನ್ನು, ಸಿಎಂ ಆಗೋದು ಸುಲಭವೇನಲ್ಲ ಬಿಡು’.

‘ಯಾವ ಕಲೆ ಗೊತ್ತಿರಬೇಕು?’

‘ಮೊದಲು ದುಡ್ಡು ಚೆಲ್ಲಿ, ಜಾತಿ ಮುಂದು ಮಾಡಿ ಗೆಲ್ಲಬೇಕು, ಹೈಕಮಾಂಡ್ ಒಲಿಸಿಕೊಳ್ಳಬೇಕು, ಶಾಸಕರನ್ನ ಖರೀದಿಸಬೇಕು, ಎದುರಾಳಿಯನ್ನ ಕುಗ್ಗಿಸಬೇಕು… ಇನ್ನೂ ಅನೇಕ ಕೌಶಲಗಳಿರಬೇಕು’.

‘ಹಾಗಾದರೆ, ನನ್ನನ್ನ ಏನು ಮಾಡ್ತೀರಿ?’

‘ನನ್ನ ಎದೆಯ ರಾಜ್ಯದಲ್ಲಿ ನೀನು ರಾಣಿಯಾಗುವೆ… ಪುಟ್ಟ ಗುಡಿಸಲಲ್ಲಿ ನಿನ್ನ ಪಟ್ಟದರಸಿ ಮಾಡುವೆ…’ ಎಂದು ಹಾಡತೊಡಗಿದೆ. ಗ್ಲೌಸ್ ಮುಖಕ್ಕೆಸೆದು ಒಳಹೋದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.