ಬುಧವಾರ, 5 ನವೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಕುಟುಂಬದ ಅಭಿವೃದ್ಧಿಯಲ್ಲಿ ಅವಿರತ ಪ್ರಯತ್ನ ಫಲಕಾರಿ
Published 5 ನವೆಂಬರ್ 2025, 0:58 IST
​ಪ್ರಜಾವಾಣಿ ವಾರ್ತೆ
author
ಮೇಷ
ಎಲ್ಲರೊಂದಿಗೆ ಸಹಕಾರ ಮನೋಭಾವನೆಯಿಂದ ಮತ್ತು ಸರಳತೆಯಿಂದ ಮುಂದುವರಿದಲ್ಲಿ ಯಶಸ್ಸು ಕಂಡುಬರುತ್ತದೆ. ಮಗನ ಯೋಜನೆಗಳು ಕಾರ್ಯಗತಗೊಳ್ಳಲು ಪ್ರಯತ್ನ ಬೇಕು.
ವೃಷಭ
ಗಾರ್ಮೆಂಟ್ಸ್ ಕೆಲಸಗಾರರಿಗೆ ಬಹಳ ದಿನಗಳ ಬಳಿಕ ವೇತನ ಹೆಚ್ಚುವುದರಿಂದ ಸಂತಸ. ಉದ್ಯೋಗ ಬದಲಿಸುವ ವಿಚಾರದಲ್ಲಿ ಯೋಚಿಸಿ. ತುರ್ತುಕಾರ್ಯ ನಿರ್ವಹಣೆ ಮಾಡಬೇಕಾಗಬಹುದು.
ಮಿಥುನ
ರಬ್ಬರ್, ಪ್ಲಾಸ್ಟಿಕ್ ವಸ್ತುಗಳ ತಯಾರಿಕೆಯ ವ್ಯವಹಾರದಲ್ಲಿರುವವರು ಏಳಿಗೆ ಕಾಣುವರು. ಬೆನ್ನು ನೋವು ಹೋಗಲಾಡಿಸಿಕೊಳ್ಳುವ ಸಲುವಾಗಿ ಯೋಗದಲ್ಲಿ ಆಸಕ್ತಿ ಮೂಡಲಿದೆ.
ಕರ್ಕಾಟಕ
ಸರಕು ಸಾಗಾಣೆದಾರರಿಗೆ ಆದಾಯದಲ್ಲಿ ಲಾಭ ಕಂಡುಬಂದರೂ ಕಾರ್ಯ ಒತ್ತಡದಿಂದ ವೃತ್ತಿಯಲ್ಲಿ ನಿರಾಶೆಯಾಗುವುದು. ಲೇವಾದೇವಿ ವ್ಯವಹಾರದಲ್ಲಿ ಭಾಗಶಃ ಅನುಕೂಲವಿದೆ.
ಸಿಂಹ
ಮಿತ್ರರಲ್ಲಿ ಸ್ನೇಹವೂ ಬಂಧುಗಳಲ್ಲಿ ಸಂಬಂಧವೂ ಉಳಿಸಿಕೊಂಡು ಹೋಗುವುದು ಇಹಕ್ಕೂ ಪರಕ್ಕೂಒಳಿತು ಉಂಟುಮಾಡುತ್ತದೆ. ಮಹಿಳೆಯರಿಗೆ ಋಣಾತ್ಮಕ ಚಿಂತನೆ ಆರೋಗ್ಯವನ್ನು ಹಾಳು ಮಾಡುತ್ತದೆ.
ಕನ್ಯಾ
ಪಿತ್ರಾರ್ಜಿತ ಕೃಷಿ ಪ್ರದೇಶ ಅಥವಾ ಗೃಹ ಮಾರಾಟವು ಹಿರಿಯರ ಮನಸ್ಸನ್ನು ನೋಯಿಸಲಿದೆ. ಯೋಗ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡುವುದರಿಂದ ಚೇತರಿಕೆ ಕಾಣಬಹುದು.
ತುಲಾ
ಮನೆಯಲ್ಲಿ ನಡೆಯಬೇಕಾದ ಮಂಗಳ ಕಾರ್ಯದ ಕುರಿತು ಹಿರಿಯರೊಂದಿಗೆ ಸಮಾಲೋಚನೆ ನಡೆಸುವಿರಿ. ಕುಟುಂಬದ ಅಭಿವೃದ್ಧಿಯಲ್ಲಿ ಅವಿರತ ಪ್ರಯತ್ನ ಫಲಕಾರಿ. ಉದ್ಯೋಗದಲ್ಲಿ ಬದಲಾವಣೆ ಇರಲಿದೆ.
ವೃಶ್ಚಿಕ
ಮೇಲಧಿಕಾರಿಗಳಿಂದ ಅಪೇಕ್ಷಿಸುವ ಸಹಕಾರಗಳು ದೊರೆತಂತೆ ಕಂಡರೂ ಸಂತೃಪ್ತಕರ ರೀತಿಯಲ್ಲಿ ಇರುವುದಿಲ್ಲ. ಮನೆಯಲ್ಲಿ ಸಾಕಿರುವ ದನ ಕರುಗಳ ಆರೋಗ್ಯ ತಪಾಸಣೆ ಮಾಡಿಸಿ.
ಧನು
ಔಷಧಿ, ರಸಗೊಬ್ಬರ ಮತ್ತು ಕೀಟನಾಶಕಗಳಂಥ ರಾಸಾಯನಿಕ ವಸ್ತುಗಳನ್ನು ತಯಾರು ಮಾಡುವವರಿಗೆ ಹೊಸ ಪ್ರಯೋಗ ಉತ್ತಮ ಫಲಿತಾಂಶ ನೀಡಲಿದೆ. ಸಂಸಾರದಲ್ಲಿ ನೆಮ್ಮದಿ ಇರಲಿದೆ.
ಮಕರ
ಸಂದರ್ಶಿಸಲು ಆಗಮಿಸುವ ವ್ಯಕ್ತಿಯ ಬಳಿ ದರ್ಪದಿಂದ ನಡೆದುಕೊಳ್ಳುವುದು ಸರಿಯಾದ ವರ್ತನೆಯಲ್ಲ. ಆರೋಗ್ಯಕ್ಕೆ ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯಿರಿ. ಗೋ ಉತ್ಪನ್ನಗಳ ಮಾರಾಟ ಲಾಭದಾಯಕ.
ಕುಂಭ
ಕೃಷಿಗೆ ಸಂಬಂಧಿಸಿದಂತೆ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಸರಿಯಾಗಿ ಮುಂದುವರಿಯುವುದು. ಮಾಧ್ಯಮ ಸಂಸ್ಥೆಯವರಿಗೆ ಉತ್ತಮ ದಿನವಾಗಿ ಪರಿಣಮಿಸಲಿದೆ. ವ್ಯಾಪಾರದಲ್ಲಿ ಅನಿರೀಕ್ಷಿತ ಬದಲಾವಣೆ ಇರಲಿದೆ.
ಮೀನ
ಹೂವು-ಹಣ್ಣುಗಳ ಮಾರಾಟಗಾರರಿಗೆ ತಾವು ನಿರೀಕ್ಷಿಸಿದ್ದಕ್ಕಿಂತ ಲಾಭವನ್ನು ವ್ಯಾಪಾರದಲ್ಲಿ ಸಿಗುವುದರಿಂದ ಸಂತೋಷ ಇರುವುದು. ತಾಯಿಯವರ ಆರೋಗ್ಯ ಸುಧಾರಿಸಲಿದೆ.
ADVERTISEMENT
ADVERTISEMENT