ಬೆಂಗಳೂರು: ಮಿಹಿಕಾ ಉಡುಪ ಅವರು ಇಲ್ಲಿ ನಡೆಯುತ್ತಿರುವ ‘ರಾಜ್ಯ ಮಿನಿ ಗೇಮ್ಸ್’ನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.

ಸ್ಥಳೀಯ ಪ್ರತಿಭೆ ಮಿಹಿಕಾ, ಬುಧವಾರ ನಡೆದ ಫೈನಲ್ ಹಣಾಹಣಿಯಲ್ಲಿ ಮಂಡ್ಯದ ರಚಿತಾ ಎಸ್. ಅವರನ್ನು 3–1 (8–11, 11–5, 11–7, 11–9)ರಿಂದ ಮಣಿಸಿದರು. ಬಾಲಕರ ಸಿಂಗಲ್ಸ್ನಲ್ಲಿ ಶ್ರೀರಾಮ್ ಕಿರಣ್ ಅವರು 11–5, 11–5, 11–7ರಿಂದ ಶರ್ವಿಲ್ ಕರಂಬೇಲ್ಕರ್ ವಿರುದ್ಧ ನೇರ ಸೆಟ್ಗಳಲ್ಲಿ ಗೆಲುವು ಸಾಧಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಬಾಲಕಿಯರ 80 ಮೀ. ಹರ್ಡಲ್ಸ್ನಲ್ಲಿಯೂ ಬೆಂಗಳೂರು ನಗರ ಜಿಲ್ಲೆಯ ಅಥ್ಲೀಟ್ಗಳು ಮೂರೂ ಸ್ಥಾನಗಳನ್ನು ಗೆದ್ದು ಪಾರಮ್ಯ ಮೆರೆದರು. ಶಾಶ್ವತಿ ಸುರೇಶ್ 13.3 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, ಸ್ವರ್ಣರೇಖಾ ಹಾಗೂ ಪಾಲಾಕ್ ಎಡ್ವರ್ಡ್ಸ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು. ಬಾಲಕರ ವಿಭಾಗದಲ್ಲಿ ಚಿತ್ರದುರ್ಗದ ಸುಭಾಷ್ ಆರ್. (12.07 ಸೆ.) ಸ್ವರ್ಣಕ್ಕೆ ಕೊರಳೊಡ್ಡಿದರು. ಶಿವಮೊಗ್ಗದ ಪ್ರಥಮ್ ಸಿ.ಆರ್. ಮತ್ತು ಬೆಂಗಳೂರಿನ ಧ್ರುವನ್ ಎಸ್.ಆರ್. ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಬಾಲಕಿಯರ ಲಾಂಗ್ಜಂಪ್ ಸ್ಪರ್ಧೆಯಲ್ಲಿ ಮೈಸೂರಿನ ಮಾನಿಕಾ ಎ. ಅವರು 5.07 ಮೀಟರ್ ಜಿಗಿಯುವುದರೊಂದಿಗೆ ಸ್ವರ್ಣ ಜಯಿಸಿದರು. ಬೆಂಗಳೂರಿನ ಸಾನ್ಸಿಯಾ ಎಂ. ಮತ್ತು ಜಾಯ್ಸ್ ಎ. (ಇಬ್ಬರೂ 4.56 ಮೀ.) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.

ರಾಜ್ಯ ಒಲಿಂಪಿಕ್ಸ್ ಸಂಸ್ಥೆಯು (ಕೆಒಎ) ಈ ಕೂಟವನ್ನು ಆಯೋಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.