ಜೈಪುರ (ಪಿಟಿಐ): ರಾಜಸ್ತಾನ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಲು ಮುತ್ತಯ್ಯ ಮುರಳೀಧರನ್ ನೀಡಿದ ಮಾರ್ಗದರ್ಶನ ಕಾರಣ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಡಗೈ ಸ್ಪಿನ್ನರ್ ಕೆ.ಪಿ.ಅಪ್ಪಣ್ಣ ನುಡಿದರು.

ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಅಪ್ಪಣ್ಣ ನಾಲ್ಕು ವಿಕೆಟ್ ಪಡೆದು ಮಿಂಚಿದ್ದರು. ಅವರು ನೀಡಿದ್ದು ಕೇವಲ 19 ರನ್. ಇದು ರಾಯಲ್ ಚಾಲೆಂಜರ್ಸ್ 46 ರನ್ಗಳ ಗೆಲುವು ಸಾಧಿಸಲು ಕಾರಣವಾಗಿತ್ತು. `ಮುರಳೀಧರನ್ ಶ್ರೇಷ್ಠ ಬೌಲರ್.

ಆದರೆ ಈ ಪಂದ್ಯಕ್ಕೆ ಅವರನ್ನು ಕೈಬಿಡಲಾಗಿತ್ತು. ಇದಕ್ಕೆ ಕಾರಣ ತಂಡದ ಸಂಯೋಜನೆ. ವಿದೇಶದ ನಾಲ್ಕು ಮಂದಿ ಆಟಗಾರರನ್ನು ಮಾತ್ರ ಕಣಕ್ಕಿಳಿಸಲು ಅವಕಾಶವಿದೆ. ಆದರೆ ಅವರ ಮಾರ್ಗದರ್ಶನ ನಿರಂತರ. ಈ ಪಿಚ್ನಲ್ಲಿ ಯಾವ ರೀತಿ ಬೌಲಿಂಗ್ ಮಾಡಬೇಕು ಎಂಬುದರ ಬಗ್ಗೆ ಅವರು ನನಗೆ ಸಲಹೆ ನೀಡಿದ್ದರು~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.