ಉಗ್ರಾಣ ನಿರ್ಮಾಣಕ್ಕೆ ಒಪ್ಪಂದ

7

ಉಗ್ರಾಣ ನಿರ್ಮಾಣಕ್ಕೆ ಒಪ್ಪಂದ

Published:
Updated:

ಬೆಂಗಳೂರು: ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ 1.88 ಲಕ್ಷ ಮೆಟ್ರಿನ್ ಟನ್ ದಾಸ್ತಾನು ಸಾಮರ್ಥ್ಯದ ಉಗ್ರಾಣಗಳನ್ನು ನಿರ್ಮಿಸಲು ನಬಾರ್ಡ್ ರೂ 49.55 ಕೋಟಿ ಸಾಲ ನೀಡುತ್ತಿದ್ದು, ಈ ಸಂಬಂಧ ರಾಜ್ಯ ಉಗ್ರಾಣ ನಿಗಮ ಮತ್ತು ನಬಾರ್ಡ್ ನಡುವೆ ಗುರುವಾರ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.

ಸಾಲವನ್ನು ನಬಾರ್ಡ್ ನೇರವಾಗಿ ನಿಗಮವೊಂದಕ್ಕೆ ಇದೇ ಮೊದಲು ನೀಡುತ್ತಿದ್ದು, ಈ ಉಗ್ರಾಣಗಳನ್ನು ಪಡಿತರ ಪದಾರ್ಥಗಳನ್ನು ಶೇಖರಿಸಲು ಬಳಸಲಾಗುವುದು.ಭಾರತೀಯ ಆಹಾರ ನಿಗಮ ಕನಿಷ್ಠ 9 ವರ್ಷಗಳ ಕಾಲ ಬಳಸುವ ಭರವಸೆ ಕೂಡ ನೀಡಿದೆ. ಸಹಕಾರ ಸಚಿವ ಲಕ್ಷ್ಮಣ ಸವದಿ, ಉಗ್ರಾಣ ನಿಗಮದ ಅಧ್ಯಕ್ಷ ಎಂ.ನಾರಾಯಣಸ್ವಾಮಿ ಅವರ ಸಮ್ಮುಖದಲ್ಲಿ ನಬಾರ್ಡ್‌ನ ಮುಖ್ಯ ವ್ಯವಸ್ಥಾಪಕ ವೆಂಕಟೇಶ್ ತಗತ್ ಮತ್ತು ಉಗ್ರಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಸವರಾಜು ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು. ಮೈಸೂರು, ಮಂಡ್ಯ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಬಾಗಲಕೋಟೆ, ರಾಯಚೂರು, ಬೆಳಗಾವಿ ಮತ್ತು ಹಾಸನ ಜಿಲ್ಲೆಗಳಲ್ಲಿ ಈ ಉಗ್ರಾಣಗಳನ್ನು ನಿರ್ಮಿಸಲಾಗುವುದು ಎಂದು ಸವದಿ ತಿಳಿಸಿದರು.

ಹೋಬಳಿ ಮಟ್ಟದಲ್ಲಿಯೂ ಉಗ್ರಾಣಗಳನ್ನು ನಿರ್ಮಿಸುವ ಉದ್ದೇಶ ಇದ್ದು, ಈ ಬಗ್ಗೆ ಬಜೆಟ್‌ನಲ್ಲಿ  ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry