ಶನಿವಾರ, ಜನವರಿ 18, 2020
26 °C

ಉಚಿತ ಚಿಕಿತ್ಸಾ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದಯಭಾನು ಕಲಾಸಂಘದ ಸಭಾಂಗಣದಲ್ಲಿ ಇದೇ 22ರಂದು ಬೆಳಿಗ್ಗೆ 10ಕ್ಕೆ ಉಚಿತ ಕಣ್ಣು ಪರೀಕ್ಷೆ, ಪೊರೆ ಶಸ್ತ್ರ ಚಿಕಿತ್ಸೆ ಹಾಗೂ ದಂತ ಪರೀಕ್ಷಾ ಶಿಬಿರ ನಡೆಯಲಿದೆ.ಡಾ.ಎಲ್.ಬಿಂದು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಶಿಬಿರವನ್ನು ಉದಯಭಾನು ಕಲಾಸಂಘವು ರಾಜಾಜಿನಗರದ ನಾರಾಯಣ ನೇತ್ರಾಲಯದ ಸಹಕಾರದಿಂದ ಪ್ರತಿ ತಿಂಗಳ 2 ಮತ್ತು 4ನೆಯ ಭಾನುವಾರ ನಿರಂತರವಾಗಿ ನಡೆಸುತ್ತಿದ್ದು, ಇದು 44ನೇ ಶಿಬಿರವಾಗಿದೆ.ಆಸಕ್ತರು ಮುಂಚಿತವಾಗಿಯೇ ಸಂಘದ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾಹಿತಿಗಾಗಿ ಸಂಪರ್ಕಿಸಿ: ಉದಯಭಾನು ಕಲಾಸಂಘ, ಗವಿಪುರ ಸಾಲು ಛತ್ರಗಳ ಎದುರು, ರಾಮಕೃಷ್ಣ ಮಠ ಬಡಾವಣೆ, ಕೆಂಪೇಗೌಡನಗರ, ದೂ: 26601831

ಪ್ರತಿಕ್ರಿಯಿಸಿ (+)