ಉಡುಪಿ/ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಭಾನುವಾರ ನಡೆದ ಉಪ ಚುನಾವಣೆ ಅವಳಿ ಜಿಲ್ಲೆಯ ಎಲ್ಲೆಡೆ ಶಾಂತಿಯುತವಾಗಿ ನಡೆದಿದ್ದು, ಒಟ್ಟಾರೆ ಶೇ. 68.14 ರಷ್ಟು ಮತದಾನವಾಗಿದೆ. ಉಪ ಚುನಾವಣೆ ಮತದಾನಕ್ಕೆ ಮತದಾರರಿಂದ ಅಷ್ಟೇನೂ ಉತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಉಡುಪಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮತದಾರರು ನಿರುತ್ಸಾಹ ತೋರಿದ್ದಾರೆ. ಉಡುಪಿ, ಕಾಪು, ಕಾರ್ಕಳ ಹಾಗೂ ಕುಂದಾಪುರ ಕ್ಷೇತ್ರಗಳಲ್ಲಿನ 731 ಮತಗಟ್ಟೆಗಳಲ್ಲಿ ಬೆಳಿಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ನಡೆದ ಮತದಾನದಲ್ಲಿ 14 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆದಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಬಿಎಸ್ಎಫ್ ಯೋಧರ ಬಿಗಿ ಭದ್ರತೆಯಲ್ಲಿ ಮತದಾನ ನಡೆಯಿತು.

ಉಡುಪಿಯ ಕೊಡವೂರು, ಮೂಡಬೆಟ್ಟು ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ದೋಷ ಕಂಡು ಬಂದಿದ್ದರಿಂದ ಮತದಾನ ಪ್ರಕ್ರಿಯೆ ಅರ್ಧ ಗಂಟೆ ವಿಳಂಬವಾಗಿ ಆರಂಭವಾಯಿತು. ಅಲೆವೂರಿನಲ್ಲಿ ಹಲವು ವರ್ಷಗಳಿಂದ ವಾಸವಿರುವ ನೂರಾರು ಕೂಲಿ ಕಾರ್ಮಿಕರು ತಮಗೂ ಮತದಾನದ ಹಕ್ಕುಬೇಕು ಎಂದು ಆಗ್ರಹಿಸಿ ಪ್ರಗತಿ ನಗರದ ನೆಹರೂ ಪ್ರೌಢಶಾಲೆ ಮತಗಟ್ಟೆ ಸಮೀಪ ಮೌನ ಪ್ರತಿಭಟನೆ ನಡೆಸಿದರು.

ಚಕಮಕಿ: ಉಡುಪಿ ಪಡುತೋನ್ಸೆ ಬೇಂಗ್ರೆಯಲ್ಲಿ ಕೈ- ಕಮಲ ಪಾಳಯದಲ್ಲಿ ಮತಗಟ್ಟೆ ಸಮೀಪವೇ ವಾಗ್ವಾದ, ಕೈಕೈ ಮಿಲಾಯಿಸಿದ ಘಟನೆಯೂ ನಡೆಯಿತು. ತಕ್ಷಣ ಪೋಲಿಸ್ ತುಕಡಿ ನಿಯೋಜಿಸಿ ಪಥಸಂಚಲನ ನಡೆಸುತ್ತಿದ್ದಂತೆ ಪರಿಸ್ಥಿತಿ ತಿಳಿಗೊಂಡಿತು.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 63ರಷ್ಟು ಮತದಾನವಾಗಿದೆ. ಚಿಕ್ಕಮಗಳೂರು, ಮೂಡಿಗೆರೆ, ತರೀಕೆರೆ ಕ್ಷೇತ್ರಗಳಲ್ಲಿ ಶೇ. 53ರಿಂದ ಶೇ. 55ರಷ್ಟು ಮತದಾನ ನಡೆದಿದೆ. ಶೃಂಗೇರಿ, ಮೂಡಿಗೆರೆ ಕ್ಷೇತ್ರಗಳ ನಕ್ಸಲ್ ಪೀಡಿತ ಮತಗಟ್ಟೆ, ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಅರೆಸೈನಿಕ ಪಡೆ ಹಾಗೂ ಶಸ್ತ್ರಸಜ್ಜಿತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ನಕ್ಸಲ್ ಪೀಡಿತ ಪ್ರದೇಶಗಳ ಮತಗಟ್ಟೆಗಳಲ್ಲಿ ಮತದಾರರು ನಿರ್ಭೀತಿಯಿಂದ ಮತದಾನ ಮಾಡಿದ್ದ ಕಂಡುಬಂತು. ಮೂಡಿಗೆರೆ ಕ್ಷೇತ್ರದ ಹಾರ್ಲಗದ್ದೆ, ತರೀಕೆರೆ ಕ್ಷೇತ್ರದ ಯಲುಗೆರೆ ತಾಂಡ್ಯದಲ್ಲಿ ಮತದಾನ ಬಹಿಷ್ಕಾರ ಹೊರತುಪಡಿಸಿ ಉಳಿದೆಡೆ ಮತದಾನ ಶಾಂತಿಯುತವಾಗಿತ್ತು.

ಶತಾಯುಷಿ ಮೀನಾ ಶೆಟ್ಟಿ ಮತದಾನ
ಕಾರ್ಕಳ ತಾಲ್ಲೂಕಿನ ಇನ್ನಾದಲ್ಲಿ 107 ವರ್ಷದ ಹಿರಿಯಜ್ಜಿ ಮೀನಾ ಶೆಟ್ಟಿ ಅವರು ಉತ್ಸಾಹದಿಂದಲೇ ಮತದಾನ ಮಾಡಿದರು. ಅವರು ಸ್ನೇಹಿತೆಯಾದ 98 ವರ್ಷದ ಸೆಲಿಸ್ಟಿನ್ ಡಿಸೋಜ ಹಾಗೂ ಮನೆಯವರೊಂದಿಗೆ ಮತದಾನ ಮಾಡಲು ಆಗಮಿಸಿದ್ದರು.

ಅಭ್ಯರ್ಥಿ ಮತ ಚಲಾವಣೆ
ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹುಟ್ಟೂರಾದ ಕುಂದಾಪುರ ತಾಲ್ಲೂಕಿನ ಕೊರ್ಗಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್, ಪತ್ನಿ ಪ್ರಿಯಾಂಕ ಕಾರ್ಕಳದ ಪೆರ್ವಾಜೆ ಶಾಲೆಯ ಮತಗಟ್ಟೆಯಲ್ಲಿ ಮತ ಹಾಕಿದರು. ಜೆಡಿಎಸ್ ಅಭ್ಯರ್ಥಿ ಬೋಜೇಗೌಡ ಚಿಕ್ಕಮಗಳೂರಿನ ಹೊಸಮನೆ ಬಡಾವಣೆಯ ವಿಶ್ವವಿದ್ಯಾಲಯ ಶಾಲೆ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.