ಬುಧವಾರ, ಜೂನ್ 3, 2020
27 °C

ಉತ್ತರ ಪ್ರದೇಶದ ಶಾಸಕನ ಸಹವರ್ತಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ನೊ, (ಪಿಟಿಐ):ಪಿಟಿಐ): ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿಯ ಮೇಲಿನ ಅತ್ಯಾಚಾರ  ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬಂಡ್ ಜಿಲ್ಲೆಯ ಬಿಎಸ್ ಪಿ ಶಾಸಕ ಪುರುಷೋತ್ತಮ ನರೇಶ್ ದ್ವಿವೇದಿ ಅವರ ಇಬ್ಬರು ಸಹವರ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಶಾಸಕರೂ ಸೇರಿದಂತೆ ಅವರ ನಾಲ್ವರು ಸಹಚರರ ಮೇಲೆ ಈ ಅತ್ಯಾಚಾರ ಪ್ರಕರಣವನ್ನು ದಾಖಲಿಸಿ ತನಿಖೆ ಆರಂಭಿಸಲಾಗಿದೆ, ಶಾಸಕರ ಇಬ್ಬರು ಸಹಚರರರಾದ ರಾಜೇಂದ್ರ ಶುಕ್ಲಾ ಮತ್ತು ಸುರೇಂದ್ರ ನೇತಾ ಎಂಬುವರನ್ನು ಬುಧವಾರ ಬಂಧಿಸಲಾಗಿದೆ. 

ಶಾಸಕ ಮತ್ತು ಇನ್ನೊಬ್ಬ ಆರೋಪಿ  ರಾವಣ ಗರ್ಗ ಅವರು ತಲೆಮರೆಸಿಕೊ0ಡಿದ್ದು ಅವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. 

ರಾಜ್ಯ ಸಿಐಡಿ ಪೊಲೀಸರು ಪ್ರಕರಣದ ತನಿಖೆ ನಡೆಸಿ ಪ್ರಾಥಮಿಕ ವರದಿ ಸಲ್ಲಿಸಿದ ನಂತರ ಮುಖ್ಯಮಂತ್ರಿ ಮಾಯಾವತಿ  ಅವರು, ಅತ್ಯಾಚಾರ ಪ್ರಕರಣದಲ್ಲಿ ಆಪಾದಿತರಾದ ಶಾಸಕ ಮತ್ತು ಅವರ ಮೂವರು ಸಹಚರರ ವಿರುದ್ಧ ಪ್ರಕರಣ ದಾಖಲಿಸಿ  ಬಂಧಿಸುವಂತೆ ಸೂಚಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.