ಮಂಗಳೂರು ಮೂಲದ ಪನಾಮಾ ಮೈನಿಂಗ್ ಇಂಡಸ್ಟ್ರೀಸ್ ಕಾರ್ಪೊರೇಷನ್ಗೆ ಜಿಂಬಾಬ್ವೆ ಸರ್ಕಾರ, ತನ್ನ ನೆಲದಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸಲು ಮೊನ್ನೆಯಷ್ಟೇ ಅನುಮತಿ ನೀಡಿದೆ. ಹೆಚ್ಚು ಸುದ್ದಿಯಾಗದ ಇದರಲ್ಲಿ ಅಂತಹ ವಿಶೇಷತೆ ಏನಿದೆ ಎನ್ನುವ ಅನುಮಾನ ಮೂಡುವುದು ಸಹಜ.

ರಾಜ್ಯದ ಗಣಿಗಾರಿಕೆ ಸಂಸ್ಥೆಯೊಂದು ಜಿಂಬಾಬ್ವೆಯಲ್ಲಿ ಗುತ್ತಿಗೆ ಪಡೆದ ಮೊದಲ ಘಟನೆ ಇದಾಗಿದೆ. ಪನಾಮಾ ಸಂಸ್ಥೆಯ ಮುಖ್ಯಸ್ಥ ವಿವೇಕ್ ರಾಜ್ ಹಣ ಗಳಿಕೆ, ಉದ್ದಿಮೆ ವಹಿವಾಟಿನ ಗುಟ್ಟುಗಳನ್ನೆಲ್ಲ ಕರಗತ ಮಾಡಿಕೊಂಡು ಅತ್ಯಂತ ವೇಗವಾಗಿ ಸಂಸ್ಥೆ ಕಟ್ಟಿ ಬೆಳೆಸಿದ ರೋಚಕ ಕತೆಯ ವಿವರಗಳನ್ನು ಒಂದೊಂದಾಗಿ ತಿಳಿಯುತ್ತ ಹೋದಂತೆ ಅಚ್ಚರಿಯಾಗುತ್ತದೆ.

ಲಾರಿಗೆ ಮಣ್ಣು ಹೊತ್ತು ಮೊದಲ ಬಾರಿಗೆ ಹಣ ಸಂಪಾದಿಸಿದ್ದ ತರುಣನೊಬ್ಬ, ಜಾಗತಿಕ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್)- ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ಉದ್ದಿಮೆ ಸಂಸ್ಥೆಯೊಂದರ ಅತ್ಯಂತ ಕಿರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಎಂದು ಮನ್ನಣೆಗೆ ಪಾತ್ರವಾಗಿ, ಜಿಂಬಾಬ್ವೆ ಸರ್ಕಾರದ ಗಣಿಗಾರಿಕೆ ಗುತ್ತಿಗೆ ಪಡೆಯುವವರೆಗೆ ಸಾಗಿ ಬಂದಿರುವ ಸಾಧನೆಯ ಹಾದಿ ಬೆರಗು ಮೂಡಿಸುತ್ತದೆ. ಇದಕ್ಕೆಲ್ಲ ಮೂವತ್ತರ ಹರೆಯದ ವಿವೇಕ್ ರಾಜ್ ಅವರ ಉದ್ಯಮಶೀಲತೆ, ವ್ಯವಹಾರ ಕುಶಲತೆಗಳೆಲ್ಲ ನೆರವಾಗಿವೆ.

ಲಾರಿಗೆ ಮಣ್ಣು ತುಂಬಿ ರೂ. 20 ಗಳಿಸಿದ, ಬೆಂಗಳೂರಿನಿಂದ ವಿದ್ಯುತ್ ತಂತಿ ಖರೀದಿಸಿ ತಂದು ಮಾರಾಟ ಮಾಡಿದಾಗೊಮ್ಮೆ ರೂ. 100 ಲಾಭ ಮಾಡಿದ, ಗೋವಾದಲ್ಲಿ ಅಗ್ಗದ ದರದಲ್ಲಿ ದೊರೆಯುತ್ತಿದ್ದ ವಿಸ್ಕಿ ಬಾಟಲಿಗಳನ್ನು ಖರೀದಿಸಿ ತಂದು ಮಂಗಳೂರಿನಲ್ಲಿ ಮಾರಾಟ ಮಾಡಿ ಕೈತುಂಬ ಲಾಭ ಗಳಿಸಿದ, ನ್ಯೂಜಿಲೆಂಡ್ಗೆ ತೆರಳಿ ಉನ್ನತ ವ್ಯಾಸಂಗ ಪೂರ್ಣಗೊಳಿಸಿ ಸರಕುಗಳ ವ್ಯಾಪಾರದ (ಟ್ರೇಡಿಂಗ್) ಗುಟ್ಟುಗಳನ್ನೆಲ್ಲ ಕರಗತ ಮಾಡಿಕೊಂಡಿರುವ ವಿವೇಕ್ ರಾಜ್, ಕಟ್ಟಿ ಬೆಳೆಸಿದ ಪನಾಮಾ ಕಾರ್ಪೊರೇಷನ್ ಅಲ್ಪಾವಧಿಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ.

ದೃಶ್ಯ 1: ಅಮ್ಮ, ತಂಗಿ ಜತೆ ಮಂಗಳೂರಿನ ಹಂಪನಕಟ್ಟೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ತಂಗಿ ತನ್ನ ಕಣ್ಣಿಗೆ ಬಿದ್ದ ಫ್ರಾಕ್ ಬೇಕು ಎಂದು ಹಟ ಹಿಡಿಯುತ್ತಾಳೆ. ದುಬಾರಿ ಫ್ರಾಕ್ ಖರೀದಿಸಲು ಬಳಿಯಲ್ಲಿ ಅಷ್ಟು ಹಣ ಇರದ ತಾಯಿ ಮಗಳ ಆಸೆಗೆ ತಣ್ಣೀರೆರಚುತ್ತಾಳೆ.

ತಂಗಿ ಕೇಳಿದ ಆ ಬಟ್ಟೆ ಕೊಡಿಸಲೇಬೇಕು ಎನ್ನುವ ತುಡಿತದಿಂದ ವಿವೇಕ್, ಮಾಲೀಕನಿಗೆ ಆ ಬಟ್ಟೆ ತೆಗೆದು ಇರಿಸಲು ಹೇಳಿ ಲಾರಿಗೆ ಮಣ್ಣು ಹೊತ್ತು ಪ್ರತಿ ಬಾರಿ ರೂ. 20ರಂತೆ ಗಳಿಸಿ ಒಟ್ಟುಗೂಡಿಸಿ ತಂಗಿಗೆ ಅದೇ ಅಂಗಡಿಯ ಚೆಂದದ ಬಟ್ಟೆ ಖರೀದಿಸುತ್ತಾನೆ.

ಬೀದಿ ವಿದ್ಯುತ್ ದೀಪದ ಕಂಬಗಳಿಗೆ ಬಳಸುವ ತಂತಿ ಬೆಂಗಳೂರಿನಲ್ಲಿ ಅಗ್ಗದ ದರಕ್ಕೆ ಸಿಗುತ್ತದೆ ಎನ್ನುವುದನ್ನು ಅರಿತುಕೊಂಡು ಬೆಂಗಳೂರು - ಮಂಗಳೂರು ಮಧ್ಯೆ ಎಡತಾಕುತ್ತಲೇ ತಂತಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಾನೆ.

ಒಂದು ದಿನ ಅಪ್ಪನಿಗಾಗಿ ವಿಸ್ಕಿ ತರಲು ಮದ್ಯದ ಅಂಗಡಿಗೆ ಹೋದಾಗ, ಅಲ್ಲಿ ಗೋವಾದಲ್ಲಿ ವಿಸ್ಕಿ ಅಗ್ಗದ ದರಕ್ಕೆ ಸಿಗುತ್ತದೆ ಎನ್ನುವ ಮಾತುಗಳು ಕಿವಿಗೆ ಬಿದ್ದಿದ್ದೆ ಇವರಲ್ಲಿನ ವ್ಯವಹಾರ ಕುಶಲತೆ ಇನ್ನಷ್ಟು ಚುರುಕಾಗುತ್ತದೆ.

ಮೂರು ಚೀಲಗಳನ್ನು ಹಿಡಿದುಕೊಂಡು ಗೋವಾದ ರೈಲು ಹತ್ತುತ್ತಾನೆ. ಯಾರೊಬ್ಬರ ಪರಿಚಯವೇ ಇಲ್ಲದ ಊರಿನಲ್ಲಿ ಬೈಕ್ ಬಾಡಿಗೆದಾರರಿಗೆ ವೈನ್ ಶಾಪ್ಗೆ ಕರೆದೊಯ್ಯಲು ಮನವಿ ಮಾಡಿಕೊಳ್ಳುತ್ತಾನೆ. ಮದ್ಯದ ಅಂಗಡಿ ಮಾಲೀಕನ ಹತ್ತಿರ ತಾನು ಹಣ ಸಂಪಾದನೆ ಮಾಡುವ ಉದ್ದೇಶ ತಿಳಿಸುತ್ತಾನೆ.

`ನೋಡಪ್ಪ ಮಾಲು ತೆಗೆದುಕೊಂಡು ಹೋಗು. ಆದರೆ, ಪೊಲೀಸರು ನಿನಗೆ ಬಿಡಬೇಕಲ್ಲ~ ಎಂದು ವಾಸ್ತವ ಮನದಟ್ಟು ಮಾಡುತ್ತಾರೆ. ಅದಕ್ಕೆ ವಿವೇಕ್, `ನಾನು ಆ ಸಮಸ್ಯೆ ನಿವಾರಿಸಿಕೊಳ್ಳುವೆ~ ಎಂದು ಆತ್ಮವಿಶ್ವಾಸದಿಂದ ಹೇಳಿ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯದ ಮೇಲಿದ್ದ ಗೋವಾ ಪೊಲೀಸರ ಹತ್ತಿರ ಸಾಗುತ್ತಾನೆ.

`ನನ್ನ ಬ್ಯಾಗ್ನಲ್ಲಿ ವಿಸ್ಕಿ ಬಾಟಲಿಗಳಿವೆ. ನಾನು ಇವುಗಳನ್ನು ಮಂಗಳೂರಿಗೆ ಒಯ್ದು ಹಣ ಗಳಿಸಲು ಉದ್ದೇಶಿಸಿದ್ದೇನೆ~ ಎಂದು ಹೇಳಿಕೊಳ್ಳುತ್ತಾನೆ. ಯುವಕನ ನೇರ, ಬಿಚ್ಚು ಮನಸ್ಸಿನ ಪ್ರಾಮಾಣಿಕ ಮಾತುಗಳನ್ನು ಕೇಳಿ ಬೆಚ್ಚಿ ಬೀಳುವ ಪೊಲೀಸರು, `ಆಯ್ತಪ್ಪ ವ್ಯಾಪಾರ ಮಾಡು ಹಣ ಗಳಿಸು~ ಎಂದು ಹೇಳಿ ಉದ್ದಕ್ಕೂ ಅಗತ್ಯ ಸಹಕಾರವನ್ನೂ ನೀಡುತ್ತಾರೆ.

ಈ ವಹಿವಾಟಿನಲ್ಲಿ ಹಣ ಗಳಿಕೆಗೆ ಇರುವ ಅಪಾರ ಅವಕಾಶದಿಂದ ಪ್ರೇರಣೆ ಪಡೆದ ವಿವೇಕ್, ವಾರದಲ್ಲಿ ಮೂರು ಬಾರಿ ಗೋವಾ - ಮಂಗಳೂರು ಮಧ್ಯೆ ರೈಲಿನಲ್ಲಿಯೇ ಸಂಚರಿಸಿ ವಿಸ್ಕಿ ತಂದು ಮಾರಾಟ ಮಾಡಿ ಹಣ ಸಂಗ್ರಹಿಸುತ್ತಾನೆ. ಇದು ಎರಡು ವರ್ಷಗಳವರೆಗೆ ನಿರಂತರವಾಗಿ ನಡೆಯುತ್ತದೆ.

ಈ ಓಡಾಟ ಸಾಕು ಮಾಡಿ ಒಮ್ಮೇಲೆ ಒಂದು ಲಾರಿಯಷ್ಟು ಲೋಡ್ ತಂದರೆ ಹೇಗೆ ಎನ್ನುವ ಆಲೋಚನೆ ವಿವೇಕ್ಗೆ ಬರುತ್ತದೆ. ಅದನ್ನು ಕಾರ್ಯರೂಪಕ್ಕೆ ತರಲು ಗೋವಾದಲ್ಲಿನ ಮದ್ಯದಂಗಡಿ ಮಾಲೀಕನ ಹತ್ತಿರ ತಮ್ಮ ಚಿಂತನೆ ಹಂಚಿಕೊಳ್ಳುತ್ತಾರೆ.

ಅವರೂ ಅಷ್ಟು ಮೊತ್ತದ ಮಾಲು ಕೊಡಲು ತಥಾಸ್ತು ಎನ್ನುತ್ತಾರೆ. ಲಾರಿ ತುಂಬ ಸರಕನ್ನು ಸುರಕ್ಷಿತವಾಗಿ ಗೋವಾ ಗಡಿ ದಾಟಿಸಿ ಮಂಗಳೂರಿಗೆ ಸಾಗಿಸಲು ಚುರುಕಾದ ಲಾರಿ ಚಾಲಕನನ್ನು ಹುಬ್ಬಳ್ಳಿಯಲ್ಲಿ ಶೋಧಿಸುವ ವಿವೇಕ್, ಪೊಲೀಸರ ಸಹಕಾರ ಬಯಸಿ ಕಾರವಾರದ ಹಿರಿಯ ಅಧಿಕಾರಿಯ ಬಳಿ ತೆರಳುತ್ತಾರೆ.

ಇವರ ಪ್ರವರ ಕೇಳುವ ಅಧಿಕಾರಿ `ಜೀಪ್ ಹತ್ತು~ ಎಂದಷ್ಟೇ ಹೇಳುತ್ತಾರೆ. `ಓಹ್ ಇವರು ನನಗೆ ಜೈಲಿಗೆ ಕಳಿಸುತ್ತಾರೆ~ ಎಂದು ನಿರ್ಧರಿಸಿ ಜೀಪ್ ಹತ್ತಿದರೆ, ಆ ಅಧಿಕಾರಿ ಇವರನ್ನು ಗೆಸ್ಟ್ಹೌಸ್ಗೆ ಕರೆದುಕೊಂಡು ಹೋಗಿ `ಆಯ್ತು ಸಹಕರಿಸುವೆ. ನೀನೇನು ನನಗೆ ಹಣ ಕೊಡುವುದು ಬೇಡ. ಲಾರಿ ಸಾಗಿಸುವ ಎರಡು ದಿನ ಮೊದಲೇ ಆ ಬಗ್ಗೆ ಮುನ್ಸೂಚನೆ ಕೊಡು~ ಎಂದು ಹೇಳುತ್ತಾರೆ.

ಹೀಗೆ ಸಾಗಿಸಿದ ಲಾರಿಯಷ್ಟು ಸರಕನ್ನು ಮಂಗಳೂರಿನ ಮಾರುಕಟ್ಟೆಯಲ್ಲಿ ಕರಗಿಸಲು ಅಂದಾಜು ಒಂದು ವರ್ಷವೇ ಕಳೆಯುತ್ತದೆ. ಅಷ್ಟರೊಳಗೆ ್ಙ 1 ಕೋಟಿಗಳಷ್ಟು ವಹಿವಾಟು ನಡೆದಿರುತ್ತದೆ.

ಈ ಬಗೆಯ ವ್ಯಾಪಾರ ವಹಿವಾಟಿನ ಮಧ್ಯೆಯೂ ವಿವೇಕ್ ತಮ್ಮ ವಿದ್ಯಾಭ್ಯಾಸವನ್ನೇನೂ ಮರೆತಿರಲಿಲ್ಲ. ಎಸ್ಎಸ್ಎಲ್ಸಿ ಪೂರ್ಣಗೊಳಿಸಿ, ಹೋಟೆಲ್ ಆಂಡ್ ಬಿಸಿನೆಸ್ ಮ್ಯಾನೇಜ್ಮೆಂಟ್ ಡಿಪ್ಲೊಮಾ, `ಎಂಬಿಎ~ಗಳನ್ನೆಲ್ಲ ಅಂಚೆ ತೆರಪಿನ ಶಿಕ್ಷಣ, ಆನ್ಲೈನ್ ಕಲಿಕೆ ಮೂಲಕ ಪೂರ್ಣಗೊಳಿಸಿರುತ್ತಾರೆ.

ಇಷ್ಟೊತ್ತಿಗೆ ಅಂತರರಾಷ್ಟ್ರೀಯ ವಾಣಿಜ್ಯ ವಹಿವಾಟು ಕಲಿಯಲು ನ್ಯೂಜಿಲೆಂಡ್ಗೆ ಹೋಗಬೇಕು ಎನ್ನುವ ಆಸೆ ಅವರಲ್ಲಿ ಅಂಕುರಿಸುತ್ತದೆ. 1999ರಲ್ಲಿ ದೆಹಲಿಗೆ ತೆರಳಿ ನ್ಯೂಜಿಲೆಂಡ್ನ ರಾಯಭಾರಿ ಕಚೇರಿಯ ಬಾಗಿಲು ಬಡಿದಾಗ, ಇವರ ವಿದ್ಯಾ ಅರ್ಹತೆಗೆ ಶಿಕ್ಷಣ ವೀಸಾ ದೊರೆಯುವ ಸಾಧ್ಯತೆಗಳೇ ಇರುವುದಿಲ್ಲ. ಆಗ ವಿವೇಕ್, ತಮ್ಮ ಅಲ್ಲಿವರೆಗಿನ ದುಸ್ಸಾಹಗಳ ಪ್ರವರಗಳನ್ನು ಹೇಳಿಕೊಂಡು, ಅಂತರರಾಷ್ಟ್ರೀಯ ವ್ಯಾಪಾರ ಕರಗತ ಮಾಡಿಕೊಳ್ಳುವ ತಮ್ಮ ಇರಾದೆ ತಿಳಿಸುತ್ತಾರೆ.

ಇದು ವೀಸಾ ನೀಡುವ ಮಹಿಳಾ ಅಧಿಕಾರಿಯ ಮನ ಗೆಲ್ಲುತ್ತದೆ. ಅಂಚೆ ಮೂಲಕವೇ ಕಳಿಸಬೇಕಾಗಿದ್ದ ವೀಸಾವನ್ನು ಮರು ದಿನ ಸಂಜೆ ಖುದ್ದಾಗಿ ಪಡೆಯಲು ಆಕೆ ಸೂಚಿಸುತ್ತಾಳೆ. `ನಿನ್ನಂತವರು ನಮ್ಮ ದೇಶಕ್ಕೆ ಬೇಕಾಗಿದೆ~ ಎಂದೂ ಆಹ್ವಾನಿಸುತ್ತಾಳೆ.

ಉನ್ನತ ವಿದ್ಯಾಭ್ಯಾಸಕ್ಕೆ ನ್ಯೂಜಿಲೆಂಡ್ಗೆ ತೆರಳುವ ವಿವೇಕ್, ಅಲ್ಲಿ ಕೆಲಸ ಮಾಡುತ್ತ, ಕಲಿಯುತ್ತಲೇ ಟ್ರೇಡಿಂಗ್ ವ್ಯಾಪಾರದ ಗುಟ್ಟುಗಳನ್ನು ತಿಳಿದುಕೊಳ್ಳಲು ಆರಂಭಿಸುತ್ತಾರೆ. 50 ಕೆಜಿಗಳಷ್ಟು ಕೊಬ್ಬುರಹಿತ ಬೆಣ್ಣೆಯನ್ನು ಮೊದಲ ಬಾರಿಗೆ ಶ್ರೀಲಂಕಾಕ್ಕೆ ಕಳಿಸಿದ ವಿವೇಕ್ ತಮ್ಮ ಟ್ರೇಡಿಂಗ್ ವಹಿವಾಟಿಗೆ ಶ್ರೀಕಾರ ಹಾಕುತ್ತಾರೆ.

ಇದರ ಬೆನ್ನ ಹಿಂದೆಯೇ 3 ಟನ್ಗಳಷ್ಟು ಬೆಣ್ಣೆ ಕಳಿಸುವ ಬೇಡಿಕೆಯೂ ಬರುತ್ತದೆ. ಹೀಗೆ ಜಾಗತಿಕ ಮಟ್ಟದಲ್ಲಿ ಸರಕುಗಳನ್ನು ಪೂರೈಸುವ ವಹಿವಾಟು ಹಂತ ಹಂತವಾಗಿ ಬೆಳೆಯುತ್ತಲೇ ಸಾಗುತ್ತದೆ.

2000ರಲ್ಲಿ ಪನಾಮಾ ಮೈನಿಂಗ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್ ಸ್ಥಾಪಿಸುವ ವಿವೇಕ್ ಟ್ರೇಡಿಂಗ್ ವಹಿವಾಟು ವಿಸ್ತರಿಸುತ್ತಾರೆ. 2004ರಲ್ಲಿ ವಿಎಸ್ಎನ್ಎಲ್ ಕಬ್ಬಿಣ ಅದಿರಿನ ಹರಾಜಿನ ಟೆಂಡರ್ನಲ್ಲಿ ಭಾಗವಹಿಸಿದ ವಿವೇಕ್, ಗರಿಷ್ಠ ಮೊತ್ತಕ್ಕೆ ಬಿಡ್ ಮಾಡಿದ್ದರು. ಪ್ರತಿ ಟನ್ಗೆ ರೂ. 930ರಂತೆ ಬಿಡ್ ಮಂಡಿಸಿದ್ದ ವಿವೇಕ್ ಕಬ್ಬಿಣ ಅದಿರನ್ನು ಪ್ರತಿ ಟನ್ಗೆ ರೂ. 2,500ರ ಬೆಲೆಯಲ್ಲಿ ಮಾರಾಟ ಮಾಡಿ ಕೈತುಂಬ ಹಣ ಸಂಪಾದಿಸುತ್ತಾರೆ.

ಅಲ್ಲಿಂದಾಚೆಗೆ ಅವರು ತಮ್ಮ ಉದ್ಯಮ ವಹಿವಾಟಿನಲ್ಲಿ ಹಿಂತಿರುಗಿ ನೋಡಿಲ್ಲ. ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ವಿವೇಕ್ ರಾಜ್ 2006ರಲ್ಲಿ ಪ್ರತಿಷ್ಠಿತ ರಾಜೀವ್ ಗಾಂಧಿ ಶಿರೋಮಣಿ ರಾಷ್ಟ್ರೀಯ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಹೆಗ್ಗಳಿಕೆ
ಜಿಂಬಾಬ್ವೆಯಲ್ಲಿ ಕಲ್ಲಿದ್ದಲು ಮತ್ತು ಕಬ್ಬಿಣ ಅದಿರು ಗಣಿಗಾರಿಕೆ ನಡೆಸಲು ಕರ್ನಾಟಕದಿಂದ ಆಯ್ಕೆಯಾಗಿರುವ ಮೊಟ್ಟ ಮೊದಲ ಸಂಸ್ಥೆಯಾಗಿದೆ ಎನ್ನುವುದೂ `ಪನಾಮಾ ಮೈನಿಂಗ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್~ನ ಹೆಗ್ಗಳಿಕೆಯಾಗಿದೆ. ಸಂಸ್ಥೆಯ ಗಣಿಗಾರಿಕೆ ಚಟುವಟಿಕೆಗಳು, ತಂತ್ರಜ್ಞಾನ, ಹಣಕಾಸು ಸಂಪನ್ಮೂಲಗಳೇ ಆಯ್ಕೆಯ ಮಾನದಂಡಗಳಾಗಿವೆ ಎಂದು ಜಿಂಬಾಬ್ವೆ ಸರ್ಕಾರ ತಿಳಿಸಿದೆ.

ವಿಶ್ವದ ಒಟ್ಟು ಪ್ರಾಟಿನಂ ನಿಕ್ಷೇಪದಲ್ಲಿ ಶೇ 90ರಷ್ಟು ಜಿಂಬಾಬ್ವೆಯಲ್ಲಿ ಇದೆ. ಶೇ 80ರಷ್ಟು ಚಿನ್ನದ ಗಣಿಗಾರಿಕೆಗೆ ಅವಕಾಶ ಇದೆ. ಅಲ್ಲಿ ಕಲ್ಲಿದ್ದಲು ಮತ್ತು ಕಬ್ಬಿಣದ ಅದಿರಿನ ನಿಕ್ಷೇಪದ ಪ್ರಮಾಣವೂ ಗರಿಷ್ಠ ಮಟ್ಟದಲ್ಲಿ ಇದೆ. ಗರಿಷ್ಠ ಪ್ರಮಾಣದ ಕಲ್ಲಿದ್ದಲು ನಿಕ್ಷೇಪ ಹೊಂದಿರುವ ಜಿಂಬಾಬ್ವೆಯಲ್ಲಿ ಗಣಿಗಾರಿಕೆ ನಡೆಸುವ 90 ವರ್ಷಗಳ ಗುತ್ತಿಗೆ ಪಡೆದುಕೊಂಡಿದೆ.

ಈ ಗಣಿಗಾರಿಕೆ ಒಪ್ಪಂದವು ಸಂಸ್ಥೆಯ ಮುಖ್ಯ ವಹಿವಾಟು ಆಗಿರುವ ಟ್ರೇಡಿಂಗ್ಗೆ ಪೂರಕವಾಗಿರುತ್ತದೆ. ದೇಶದಲ್ಲಿ 855 ದಶಲಕ್ಷ ಟನ್ಗಳಷ್ಟು ಕಲ್ಲಿದ್ದಲು ಕೊರತೆ ಸಮಸ್ಯೆ ನಿವಾರಿಸಲು ಸಾಧ್ಯವಾಗಲಿದೆ. ದೇಶದ ಪ್ರಮುಖ ಉಕ್ಕು ಮತ್ತು ವಿದ್ಯುತ್ ಉತ್ಪಾದನಾ ಸ್ಥಾವರಗಳಿಗೆ ನಿರಂತರವಾಗಿ ಕಲ್ಲಿದ್ದಲು ಪೂರೈಸಲು ಸಾಧ್ಯವಾಗಲಿದೆ ಎಂದು ವಿವೇಕ್ ಹೇಳುತ್ತಾರೆ.

ಪನಾಮಾ ಕಾರ್ಪೊರೇಷನ್ ಈಗ ವಿಶ್ವದಾದ್ಯಂತ ತನ್ನ ವಹಿವಾಟು ವಿಸ್ತರಿಸಿದೆ. ಖನಿಜಗಳು, ಕಬ್ಬಿಣ ಅದಿರು, ಬಾಕ್ಸೈಟ್, ನೌಕೆಗಳ ಮೂಲಕ ಸರಕು ಸಾಗಣೆ ವಹಿವಾಟು (ಶಿಪ್ಪಿಂಗ್), ಇದಕ್ಕೆ ಗಣಿಗಾರಿಕಗೆ ಗುತ್ತಿಗೆ ವಹಿವಾಟು ಇನ್ನಷ್ಟು ನೆರವಾಗುತ್ತಿದೆ.

2000ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಂಸ್ಥೆಯು ಕಳೆದ ಒಂದು ದಶಕದ ಅವಧಿಯಲ್ಲಿ ಪುನರ್ಬಳಕೆ ಇಂಧನ, ವ್ಯಾಪಾರ, ಗಣಿಗಾರಿಕೆ ಉದ್ಯಮ ವಹಿವಾಟಿನಿಂದ ವ್ಯಾಪಕವಾಗಿ ಬೆಳೆದಿದೆ. 17 ಬಗೆಯ ಖನಿಜಗಳೂ ಸೇರಿದಂತೆ ವಾರ್ಷಿಕ 35 ದಶಲಕ್ಷ ಟನ್ಗಳಷ್ಟು ಟ್ರೇಡಿಂಗ್ ವಹಿವಾಟು ನಡೆಸುತ್ತಿದೆ.

ಶುದ್ಧ ಇಂಧನ, ಟ್ರೇಡಿಂಗ್ ಮತ್ತು ಗಣಿಗಾರಿಕೆಯಲ್ಲಿ ಪನಾಮಾ ಸಮೂಹವನ್ನು ಜಾಗತಿಕ ಮಟ್ಟದ ಸಂಸ್ಥೆಯಾಗಿ ಬೆಳೆಸುವ ಮಹತ್ವಾಕಾಂಕ್ಷೆಯನ್ನು ವಿವೇಕ್ ಹೊಂದಿದ್ದಾರೆ.

ಕಾರ್ಮಿಕರ ಜೀವಕ್ಕೆ ಆದ್ಯತೆ ನೀಡುವ ವಿವೇಕ್, ಅತ್ಯಾಧುನಿಕ ಯಂತ್ರೋಪಕರಣಗಳಿಂದ ಗಣಿಗಾರಿಕೆ ನಡೆಸಲು ಆದ್ಯತೆ ನೀಡುತ್ತಾರೆ. ಗಣಿಗಾರಿಕೆ ಗುತ್ತಿಗೆ ನಡೆಸಲು ವಿದೇಶಿ ಹೂಡಿಕೆದಾರರಿಂದ ಹಣ ಸಂಗ್ರಹಿಸಲು ಉದ್ದೇಶಿಸಿರುವ ವಿವೇಕ್, 10 ವರ್ಷಗಳ ನಂತರ ಷೇರು ಮರು ಖರೀದಿಸುವ ಆಯ್ಕೆ ಮುಕ್ತವಾಗಿಟ್ಟುಕೊಂಡಿದ್ದಾರೆ.

ಭಾರತಕ್ಕೆ ಕಲ್ಲಿದ್ದಲು ಪೂರೈಕೆಗೆ ಆರಂಭದಲ್ಲಿ ನೌಕೆಗಳನ್ನು ಬಾಡಿಗೆ ಪಡೆಯಲಿರುವ ಪನಾಮಾ ಸಂಸ್ಥೆ, ಕ್ರಮೇಣ ದಕ್ಷಿಣ ಕೊರಿಯಾದಿಂದ 7 ರಿಂದ 9 ನೌಕೆಗಳನ್ನು ಖರೀದಿಸಲಿದೆ. ಜಿಂಬಾಬ್ವೆಯಲ್ಲಿ ಗಣಿಗಾರಿಕೆ ಗುತ್ತಿಗೆ ಪಡೆಯುವ ಮೂಲಕ ಸಂಸ್ಥೆಯು ಗಣಿಗಾರಿಕೆ ಉದ್ದಿಮೆಯಲ್ಲಿ ಜಾಗತಿಕ ಪ್ರಮುಖ ಉದ್ದಿಮೆ ಸಂಸ್ಥೆಯಾಗಿ ಬೆಳೆಯುವ ನಿಟ್ಟಿನಲ್ಲಿ ಇನ್ನೊಂದು ದಾಪುಗಾಲು ಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.