ಮಂಗಳವಾರ, ಜೂನ್ 15, 2021
27 °C

ಉದ್ಯೋಗಸ್ಥ ಮಹಿಳೆಯರಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದಲ್ಲಿ ನಾಲ್ಕು ಮಂದಿ ಉದ್ಯೋಗಸ್ಥ ಮಹಿಳೆಯರಲ್ಲಿ ಮೂವರು ತೀವ್ರ ಆರೋಗ್ಯ ಸಮಸ್ಯೆ­ಯಿಂದ ಬಳಲುತ್ತಿದ್ದಾರೆ ಎಂದು ಅಸೋ­­ಸಿ­ಯೇಟೆಡ್‌ ಚೇಂಬರ್ ಆಫ್‌ ಕಾಮರ್ಸ್ ಅಂಡ್‌ ಇಂಡಸ್ಟ್ರಿ (ಅಸೋಚಾಮ್‌) ನಡೆಸಿದ  ಸಮೀಕ್ಷೆ ಬಹಿರಂಗಪಡಿಸಿದೆ.



ಕಾರ್ಪೋರೇಟ್‌ ವಲಯದಲ್ಲಿ ಕಾರ್ಯ­­­ನಿರ್ವಹಿಸುವ ಶೇ 78ಮಂದಿ ಮಹಿಳೆ­ಯರು ಆರೋಗ್ಯ ಸಮಸ್ಯೆ­ಗಳಿಂದ ನರಳುತ್ತಿದ್ದು, ಇವರಲ್ಲಿ 32 ರಿಂದ 58ರ ವಯೋ­ಮಿತಿಯಲ್ಲಿರುವ ಮಹಿಳೆಯರೇ ಹೆಚ್ಚಿದ್ದಾರೆ. ಸುಮಾರು 120 ಕಾರ್ಪೋ­ರೇಟ್‌ ಕಂಪೆನಿಗಳಲ್ಲಿ ಸುಮಾರು 2, 800 ಮಹಿಳೆಯರನ್ನು ಸಂದರ್ಶನ ಮಾಡಲಾಗಿದೆ. ಆಧುನಿಕ ಜೀವನ ಶೈಲಿಯಿಂದಾಗಿ ಶೇ 42 ಮಂದಿ ಬೆನ್ನುನೋವು, ಸ್ಥೂಲ­ಕಾಯ, ಖಿನ್ನತೆ, ಮಧುಮೇಹ, ರಕ್ತದ ಒತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ನರಳುತ್ತಿದ್ದಾರೆ. ಇವರಲ್ಲಿ ಹಲವು ಮಂದಿ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ.



ಸಮೀಕ್ಷೆಯನ್ನು ಅಹಮದಾಬಾದ್‌, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾ­ಬಾದ್‌, ಜೈಪುರ, ಕೋಲ್ಕತ್ತಾ, ಲಖನೌ, ಮುಂಬೈ, ಪುಣೆ ಸೇರಿದಂತೆ 10 ಮಹಾನಗರಗಳಲ್ಲಿ ಕೈಗೊಳ್ಳ­ಲಾ­ಗಿದೆ. ಐಟಿ, ಬಿಟಿ ವಲಯ (ಶೇ 17), ಹಣಕಾಸು ಸೇವಾ ವಿಭಾಗ (ಶೇ 11), ಎಂಜಿನಿಯರ್‌ ವೃತ್ತಿ (ಶೇ 9), ಮಾಹಿತಿ ತಂತ್ರಜ್ಞಾನ ಕ್ಷೇತ್ರ (ಶೇ 8), ಬಿಪಿಓ, ಕೆಪಿಓ ಹಾಗೂ ಮಾಧ್ಯಮ(ಶೇ 6) ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು ಸಮೀಕ್ಷೆಯಲ್ಲಿ ಭಾಗವ­ಹಿ­ಸಿ­ದ್ದಾರೆ ಎಂದು ಅಸೋಚಾಮ್‌ನ ಹೆಚ್ಚುವರಿ ನಿರ್ದೇಶಕಿ ಮಂಜು ನೇಗಿ ಹೇಳಿದರು.



ಸಮೀಕ್ಷೆಯಲ್ಲಿ ಪಾಲ್ಗೊಂಡ ಮಹಿಳೆ­ಯರು ಉದ್ಯೋಗ ಅಭದ್ರತೆ, ವೈದ್ಯ­ಕೀಯ ಭತ್ಯೆ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.