ಬುಧವಾರ, ಜನವರಿ 22, 2020
20 °C

ಉಪವಾಸ ಕೈಬಿಟ್ಟ ಯತಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಸೋದೆ ಮಠದ ಪರ್ಯಾಯ ಮಹೋತ್ಸವಕ್ಕೆ ಪುತ್ತಿಗೆ ಮಠಕ್ಕೆ ಆಹ್ವಾನ ನೀಡದ ಹಿನ್ನೆಲೆಯಲ್ಲಿ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಪ್ರತಿಯಾಗಿ ಪೇಜಾವರ ಸ್ವಾಮೀಜಿ ಆರಂಭಿಸಿದ್ದ ಉಪವಾಸವನ್ನು ಕೊನೆಗೊಳಿಸಿದ್ದಾರೆ.ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಸಂದಾನದ ಫಲವಾಗಿ ಇಬ್ಬರೂ ಸ್ವಾಮೀಜಿಗಳು ಉಪವಾಸ ಕೈಬಿಡಲು ಮಂಗಳವಾರ ರಾತ್ರಿ ಒಪ್ಪಿದರು. ಮುಖ್ಯಮಂತ್ರಿ ಮಧ್ಯ ಪ್ರವೇಶದಿಂದ ಸದ್ಯಕ್ಕೆ ಉಪವಾಸದ ವಿಚಾರ ಬಗೆಹರಿದಿದೆ.

ಪ್ರತಿಕ್ರಿಯಿಸಿ (+)