ಉಪ್ಪಿನಂಗಡಿ: ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 5 ವರ್ಷಗಳ ಹಿಂದೆ ಸಮುದಾಯ ಆರೋಗ್ಯ ಕೇಂದ್ರ ಎಂದು ಮೇಲ್ದರ್ಜೆಗೆ ಏರಿಸಲಾಗಿದೆ. ಇಂದಿಗೂ ಅದು ದಾಖಲೆಯಲ್ಲಿ, ಕಟ್ಟಡದ ಮೇಲಿನ ಬೋರ್ಡಿಗಷ್ಟೆ ಸೀಮಿತವಾಗಿದೆ. ಇಲ್ಲಿ ವೈದ್ಯಾಧಿಕಾರಿಗಳ ಸಹಿತ ಹತ್ತಾರು ಹುದ್ದೆಗಳು ಖಾಲಿ ಇದ್ದು, ಜನರ ಉಪಯೋಗಕ್ಕೆ ಸಮರ್ಪಕವಾಗಿ ದೊರಕುತ್ತಿಲ್ಲ.

2008ರಲ್ಲಿ ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಯಿತು. ಸಮುದಾಯ ಆರೋಗ್ಯ ಕೇಂದ್ರದ ವ್ಯವಸ್ಥೆಗಳು ಬರಲೇ ಇಲ್ಲ. ಮಂಜೂರಾದ ಎಲ್ಲಾ ಹುದ್ದೆಗಳು ಕಡತಗಳಿಗಷ್ಟೇ ಸೀಮಿತವಾಯಿತು.

ಈ ಕೇಂದ್ರವು ಉಪ್ಪಿನಂಗಡಿ, 34-ನೆಕ್ಕಿಲಾಡಿ, ಬೆಳ್ಳಿಪ್ಪಾಡಿ, ಕೋಡಿಂಬಾಡಿ, ಚಿಕ್ಕಮುಡ್ನೂರು, ಬನ್ನೂರು, ಪಡ್ನೂರು ಸೇರಿದಂತೆ 7 ಗ್ರಾಮ ವ್ಯಾಪ್ತಿಯ ಸುಮಾರು 40 ಸಾವಿರ ಜನಸಂಖ್ಯೆ ವ್ಯಾಪ್ತಿಯನ್ನು ಹೊಂದಿದೆ. ರಾಷ್ಟ್ರೀಯ ಹೆದ್ದಾರಿಯೂ ಹಾದು ಹೋಗುತ್ತದೆ.

ಹೀಗಾಗಿ ನಿರಂತರ ಅಪಘಾತ ಪ್ರಕರಣಗಳ ರೋಗಿಗಳೂ ಇಲ್ಲಿಗೆ ಬರುತ್ತಾರೆ. ಈ ಕೇಂದ್ರದಿಂದ ಕೂಗಳತೆ ದೂರದಲ್ಲಿ ಬೆಳ್ತಂಗಡಿ ತಾಲ್ಲೂಕು ಗಡಿ ಗ್ರಾಮಗಳಾದ ಇಳಂತಿಲ, ತೆಕ್ಕಾರು, ತಣ್ಣೀರುಪಂಥ, ಬಾರ್ಯ, ಬಂಟ್ವಾಳ ತಾಲ್ಲೂಕಿನ ಬಿಳಿಯೂರು, ಪೆರ್ನೆ ಮೊದಲಾದವು ಇವೆ. ಇವೆಲ್ಲಾ ಗ್ರಾಮಗಳ ಜನತೆ ಇದೇ ಕೇಂದ್ರವನ್ನು ಅವಲಂಬಿಸಿದ್ದಾರೆ.

ಮಂಜೂರಾಗಿರುವ ಹುದ್ದೆಗಳು: ಸರ್ಕಾರದ ನಿಯಮಾವಳಿ ಪ್ರಕಾರ ಇಲ್ಲಿ 6 ವೈದ್ಯಾಧಿಕಾರಿಗಳು, 1 ದಂತ ವೈದ್ಯಾಧಿಕಾರಿ, ಶುಶ್ರೂಷಕಿ-6, ಪ್ರಯೋಗ ಶಾಲಾ ತಂತ್ರಜ್ಞ-1, ಕ್ಷ-ಕಿರಣ ತಂತ್ರಜ್ಞ-1, ಫಾರ್ಮಸಿಸ್ಟ್-2, ನೇತ್ರ ಸಹಾಯಕರು-1, ಕಚೇರಿ ಅಧೀಕ್ಷಕ-1, ಪ್ರಥಮ ದರ್ಜೆ ಸಹಾಯಕರು-1, ದ್ವಿತೀಯ ದರ್ಜೆ ಸಹಾಯಕ-1, ಕ್ಲರ್ಕ್ ಕಂ ಟೈಪಿಸ್ಟ್-1, ವಾಹನ ಚಾಲಕರು-2, ಗ್ರೂಪ್ ಡಿ'-12, ಹಿರಿಯ ಆರೋಗ್ಯ ಸಹಾಯಕರು-1, ಹಿರಿಯ ಆರೋಗ್ಯ ಸಹಾಯಕಿ-1, ಕಿರಿಯ ಆರೋಗ್ಯ ಸಹಾಯಕರು-4, ಕಿರಿಯ ಆರೋಗ್ಯ ಸಹಾಯಕಿಯರು-8 ಹೀಗೆ ಒಟ್ಟು 48 ಹುದ್ದೆಗಳು ಮಂಜೂರಾಗಿವೆ. ಪ್ರಸಕ್ತ ಇಲ್ಲಿ ಕೇವಲ ಒಬ್ಬರು ವೈದ್ಯರಿದ್ದಾರೆ. ದಂತ ವೈದ್ಯಾಧಿಕಾರಿ ಹುದ್ದೆ ಖಾಲಿ ಇದೆ. ಉಳಿದಂತೆ ಶುಶ್ರೂಶಕಿ-5, ಫಾರ್ಮಸಿಸ್ಟ್-2, ನೇತ್ರ ಸಹಾಯಕರು-1, ಕಚೇರಿ ಅಧೀಕ್ಷಕ-1, ಪ್ರಥಮ ದರ್ಜೆ ಸಹಾಯಕರು-1, ಕ್ಲರ್ಕ್ ಕಂ ಟೈಪಿಸ್ಟ್-1, ವಾಹನ ಚಾಲಕರು-1, ಗ್ರೂಪ್ ಡಿ'-11, ಕಿರಿಯ ಆರೋಗ್ಯ ಸಹಾಯಕರು-3 ಹೀಗೆ ಒಟ್ಟು 31 ಹುದ್ದೆಗಳು ಖಾಲಿ ಇರುತ್ತದೆ.

ಸೌಲಭ್ಯಗಳ ಕೊರತೆ: ಎಕ್ಸ್ರೇ ಯಂತ್ರ ಸೇರಿದಂತೆ ಹತ್ತಾರು ಸೌಲಭ್ಯಗಳ ಕೊರತೆಗಳಿವೆ. ಇಲ್ಲಿ 30 ಹಾಸಿಗೆ ಇರಬೇಕಿದ್ದರೂ ಕೇವಲ 6 ಹಾಸಿಗೆಗಳಿವೆ. ಅಗತ್ಯ ಕಟ್ಟಡ, ಸಿಬ್ಬಂದಿಗೆ ವಸತಿ ವ್ಯವಸ್ಥೆಗಳ ಕೊರತೆಯೂ ಇದೆ. ಸಾಂಕ್ರಾಮಿಕ ರೋಗ, ಜ್ವರ ಭಾದೆ, ಗರ್ಭಿಣಿಯರು ಸೇರಿದಂತೆ ಇಲ್ಲಿಗೆ ದಿನನಿತ್ಯ ಸುಮಾರು 200ಕ್ಕೂ ಅಧಿಕ ಮಂದಿ ಹೊಸದಾಗಿ ಚಿಕಿತ್ಸೆಗಾಗಿ ನೋಂದಣಿ ಮಾಡಿಕೊಳ್ಳುತ್ತಾರೆ.

`ಆಸ್ಪತ್ರೆಯಲ್ಲಿ ಒಬ್ಬರೇ ವೈದ್ಯರಿದ್ದಾರೆ. ಬೆಳಿಗ್ಗೆ ಬಂದು ಚೀಟಿ ಪಡೆದು ಸಾಲು ನಿಲ್ಲಬೇಕಾಗುತ್ತದೆ. ವೈದ್ಯರು ಕೆಲವೊಮ್ಮೆ ಅಂಗನವಾಡಿ ಭೇಟಿ, ಮಕ್ಕಳ ತಪಾಸಣೆ ಮೊದಲಾದ ಕಾರ್ಯಕ್ರಮಗಳಿಗೆ ಹೋಗುತ್ತಾರೆ. ಹಾಗಾಗಿ ಸಾಲಿನಲ್ಲಿ ನಿಂತು ಕಾದು ಸಂಜೆ, ರಾತ್ರಿಯೂ ಆಗುತ್ತದೆ. ಔಷಧಿ ಪಡೆಯದೆ ಮರಳಿ ಹೋಗುವಂತಾಗುತ್ತದೆ' ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಪರಸ್ಪರ ಹೊಂದಾಣಿಕೆ ಸೇವೆ-ವೈದ್ಯಾಧಿಕಾರಿ: ಕೇಂದ್ರಕ್ಕೆ ಗ್ರಾಮಗಳಿಂದ ಬರುವ ರೋಗಿಗಳಲ್ಲದೆ ಕೇಂದ್ರದ ವ್ಯಾಪ್ತಿಯಲ್ಲಿ 44 ಅಂಗನವಾಡಿ ಕೇಂದ್ರಗಳಿವೆ. ಅಲ್ಲಿನ ಮಕ್ಕಳ ತಪಾಸಣೆ ನಡೆಸಬೇಕು. ಸಿಬ್ಬಂದಿ ಸಹಿತ ಹತ್ತಾರು ಸಮಸ್ಯೆಗಳಿವೆ. ನಾವು ಪರಸ್ಪರ ಅನ್ಯೋನ್ಯತೆ, ಹೊಂದಾಣಿಕೆಯಿಂದ ಸೇವೆಯನ್ನು ನೀಡುತ್ತಿದ್ದೇವೆ. ಜನಪ್ರತಿನಿಧಿಗಳು, ಮೇಲಾಧಿಕಾರಿಗಳಿಗೆ ಸಮಸ್ಯೆಗಳನ್ನು ತಿಳಿಸಲಾಗಿದೆ ಎಂದು ವೈದ್ಯಾಧಿಕಾರಿ ಡಾ. ಶಶಿಕಲಾ ತಿಳಿಸಿದ್ದಾರೆ.

ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಸೌಲಭ್ಯ ದೊರಕುವಂತೆ ಮಾಡಬೇಕು ಎನ್ನುವುದು ಎಲ್ಲರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.