ಇದು ವೇಗದ ಜಗತ್ತು. ಎಲ್ಲದಕ್ಕೂ ಆತುರ. ಯಾವ ಕೆಲಸವನ್ನೂ ನಿಧಾನವಾಗಿ ಮಾಡಲು ಸಮಯವಿಲ್ಲ. ಊಟ ಮಾಡಲು ಸಹ ವ್ಯವಧಾನವಿಲ್ಲದಷ್ಟು ಧಾವಂತ.

ಬಸ್ಸು ಹಿಡಿಯುವ ಆತುರದಲ್ಲಿ ಗಬಗಬನೆ ಒಂದಿಷ್ಟು ತಿಂದು ಓಡುವ ತವಕ. ಇಲ್ಲದಿದ್ದರೆ ಬಸ್ಸಿನಲ್ಲಿ ಕುಳಿತೇ ತಿಂಡಿಯ ಶಾಸ್ತ್ರ ಮುಗಿಸಿದರಾಯಿತು. ಸ್ವಂತ ವಾಹನವಿದ್ದವರಂತೂ ದಾರಿಯಲ್ಲಿ ಹೋಗುವಾಗ ತಿನ್ನುವುದೂ ಉಂಟು. ಒಟ್ಟಾರೆ ಹೊಟ್ಟೆಗೆ ಒಂದಷ್ಟು ತುಂಬಿಕೊಳ್ಳಬೇಕು, ಅದಷ್ಟೇ ಉದ್ದೇಶ.

ಬದುಕಲು ಕೆಲಸ ಬೇಕು. ಅದನ್ನು ಮಾಡಲು ಆರೋಗ್ಯ ಬೇಕು. ಉತ್ತಮ ಆರೋಗ್ಯಕ್ಕೆ ಒಳ್ಳೆಯ ಊಟ ಬೇಕು. ಅದನ್ನು ಸಾವಕಾಶವಾಗಿ ಮಾಡಬೇಕು. ಜೊತೆಗೆ ಇನ್ನೂ ಸ್ವಲ್ಪ ಬೇಕು ಎನಿಸುವಾಗಲೇ ನಿಲ್ಲಿಸಿಬಿಡಬೇಕು. ಅದು ಬಿಟ್ಟು ವೇಗವಾಗಿ ಹಾಗೂ ಹೊಟ್ಟೆ ಭರ್ತಿಯಾಗುವ ತನಕ ತಿನ್ನುತ್ತಲೇ ಇದ್ದರೆ ತೂಕ ಹೆಚ್ಚುವ ಹಾಗೂ ಬೊಜ್ಜಿನ ಅಪಾಯ ಕಟ್ಟಿಟ್ಟ ಬುತ್ತಿ. ಬೊಜ್ಜು ಒಂದು ರೀತಿ ಸಂಚಾರ ದೀಪ ಇದ್ದಂತೆ. ನಾವು ಮಾಡುವ ಎಲ್ಲ ಕೆಲಸಗಳಿಗೂ ಅದು ತಡೆಯಾಜ್ಞೆ ನೀಡುತ್ತಲೇ ಇರುತ್ತದೆ.

ಜಪಾನಿನಲ್ಲಿ 30 ರಿಂದ 69ರ ವಯೋಮಾನದ 1122 ಪುರುಷರು ಹಾಗೂ 2165 ಮಹಿಳೆಯರು ಊಟ ಮಾಡುವ ವಿಧಾನವನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಇದರಿಂದ ಶೇ 50.9ರಷ್ಟು ಪುರುಷರು ಹಾಗೂ ಮಹಿಳೆಯರು ವೇಗವಾಗಿ ಆಹಾರ ತಿನ್ನುವ ಅಭ್ಯಾಸ ರೂಢಿಸಿಕೊಂಡಿದ್ದುದು ತಿಳಿದುಬಂತು. ಇವರೆಲ್ಲರೂ ದಢೂತಿ ದೇಹಿಗಳಾಗಿದ್ದರು ಅಥವಾ ಅಗತ್ಯಕ್ಕಿಂತ ಹೆಚ್ಚು ತೂಕ ಹೊಂದಿದ್ದರು. ಆದರೆ ಶಕ್ತಿವಂತರಾಗಿರಲಿಲ್ಲ. ಈ ಸಂಶೋಧನೆಯ ವಿವರ ಬ್ರಿಟಿಷ್ ಮೆಡಿಕಲ್ ಜರ್ನಲ್ನಲ್ಲಿ ಪ್ರಕಟವಾಗಿದೆ.

ಸಹಭೋಜನ ಗೊಡ್ಡು ಆಚರಣೆಯಲ್ಲ
ಸಹ ಕುಟುಂಬ, ಸಹ ಭೋಜನ ಎಂಬುದೆಲ್ಲ ಹಿಂದಿನವರ ಗೊಡ್ಡು ನಂಬಿಕೆ ಅಥವಾ ಆಚರಣೆಯಲ್ಲ. ಇಂತಹ ಪದ್ಧತಿಯಲ್ಲಿ ವಿಶಿಷ್ಟ ಅರ್ಥಗಳಿವೆ ಎಂಬುದು ಜನರಿಗೆ ಈಗ ಮನವರಿಕೆಯಾಗುತ್ತಿದೆ. ಅದೂ ಸಂಶೋಧನೆಗಳ ಮೂಲಕ ಕಂಡುಕೊಂಡ ಬಳಿಕ. ಆಹಾರ ತಿನ್ನುವ ಕ್ರಮ ಹಾಗೂ ಸಮಯಗಳನ್ನು ಹಿರಿಯರು ನಿಗದಿ ಮಾಡಿದ್ದರು. ಈಗೆಲ್ಲ ಅದನ್ನು ಪಾಲಿಸಲು ಪುರುಸೊತ್ತಿಲ್ಲ.

ಬೇಕೆನಿಸಿದಾಗ, ಬೇಕಾದಷ್ಟು ತಿನ್ನಲು ಮನೆಯೇ ಆಗಬೇಕೆಂದಿಲ್ಲ. ದುಡ್ಡಿದ್ದರೆ ಸಾಕು ದಿನದ 24 ಗಂಟೆಯೂ ಬೇಕೆನಿಸಿದ ಆಹಾರ ಹೊಟೇಲ್ಗಳಲ್ಲಿ ಸಿದ್ಧ. ಮುಂಜಾನೆ, ಮುಸ್ಸಂಜೆ, ಹೊತ್ತು ಮೀರಿದ ರಾತ್ರಿ ಆಹಾರ ಸೇವನೆಗೆ ನಿಷಿದ್ಧ ಸಮಯ ಎಂದು ಹಿರಿಯರು ಹೇಳುತ್ತಾರೆ. ಆದರೆ ಅವರ ಉಪದೇಶಗಳನ್ನು ಗಾಳಿಗೆ ತೂರುವ ಮೂಲಕ ಯುವಜನರು ಹೊಸ ಸಮಸ್ಯೆಗಳನ್ನು ತಂದುಕೊಳ್ಳುತ್ತಿರುವುದು ಸುಳ್ಳಲ್ಲ. ನಾಲಿಗೆ ಬಯಸಿದ್ದನ್ನೆಲ್ಲ ತಿನ್ನುವ ಧಾವಂತದಲ್ಲಿ ಶರೀರ ಹಾಳಾಗುತ್ತಿದೆ.

ನಿತ್ಯ ಕಾರ್ಯಗಳು ಯಾವುದೇ ಇರಲಿ ಅದಕ್ಕೆ ಶ್ರದ್ಧೆ ಹೇಗೆ ಬೇಕೇ ಬೇಕಾಗಿರುತ್ತದೋ ಊಟದಲ್ಲೂ ಶ್ರದ್ಧೆ ಬೇಕಾಗುತ್ತದೆ. ಆಹಾರವನ್ನು ದೇವರ ಪ್ರಸಾದ ಎಂದು ಸ್ವೀಕರಿಸುವ ಪರಿಪಾಠ ಈಗಲೂ ಕೆಲವರಲ್ಲಿ ಇದೆ. ಕುಟುಂಬದವರೆಲ್ಲರೂ ಒಟ್ಟಿಗೆ ಕುಳಿತು, ಊಟದತ್ತ ಸಂಪೂರ್ಣ ಗಮನವಿತ್ತು,

ಆಹಾರದ ಸ್ವಾದವನ್ನು ಅನುಭವಿಸಿ ತಿನ್ನುವುದರಿಂದ ತಿಂದ ಆಹಾರ ಆರೋಗ್ಯಪೂರ್ಣವಾಗುತ್ತದೆ ಎನ್ನುತ್ತಾರೆ ವೈದ್ಯರು. ಆದರೆ ಈಗೆಲ್ಲ ಅಂತಹ ಸಹ ಭೋಜನವೇ ಕಡಿಮೆಯಾಗುತ್ತಿದೆ. ಎಲ್ಲರಿಗೂ ಅವರವರದೇ ಒಂದೊಂದು ಪಂಕ್ತಿ, ಒಂದೊಂದು ಸಮಯ, ಊಟಕ್ಕೆ ಇಂತಹುದೇ ಎಂಬ ಜಾಗವಿಲ್ಲ. ಮಲಗುವ ಕೋಣೆ, ಮಂಚ ಎಲ್ಲವೂ ಊಟದ ಜಾಗವೇ ಆಗಬಹುದು. ಕಂಪ್ಯೂಟರ್, ಟಿ.ವಿ ಮುಂದೆ ಆಹಾರ ಸೇವನೆ ಅನಾರೋಗ್ಯಕರ ಹಾಗೂ ಕೊಬ್ಬು ಶೇಖರಣೆಗೆ ದಾರಿ ಮಾಡಿಕೊಡುತ್ತದೆ ಎನ್ನುವುದು ಸಮೀಕ್ಷೆಗಳಿಂದ ದೃಢಪಟ್ಟಿದೆ.

ಕೊಬ್ಬು ಶೇಖರಣೆಯಾಗುತ್ತದೆಂಬ ಕಾರಣಕ್ಕೆ ಕ್ಯಾಲೊರಿಗಳ ಲೆಕ್ಕ ಹಾಕಿ ತಿನ್ನುವ ಕ್ರಮವನ್ನು ಕೆಲವರು ಅನುಸರಿಸುತ್ತಾರೆ. ಆದರೆ ತಿನ್ನುವ ಶೈಲಿಯಲ್ಲೇ ಬದಲಾವಣೆ ಆಗಿರುವುದರಿಂದ, ಫಾಸ್ಟ್ಫುಡ್ ಸಂಸ್ಕೃತಿಗೆ ಒಗ್ಗಿ ಹೋಗುತ್ತಿರುವುದರಿಂದ ಹಲವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಒಟ್ಟಾರೆ ಆಹಾರ ತಿನ್ನುವ ಕ್ರಮ, ಶೈಲಿ ಎಲ್ಲವೂ ಕೊಬ್ಬು ಶೇಖರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಎಲ್ಲರೂ ಒಟ್ಟಿಗೆ ಕುಳಿತು ನಿಧಾನವಾಗಿ ಅಗತ್ಯವಿದ್ದಷ್ಟನ್ನೇ ತಿನ್ನುವುದು ಸರಿಯಾದ ಊಟದ ಕ್ರಮ. ಹೀಗಾಗಿ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸರಿಯಾದ ರೀತಿಯಲ್ಲಿ ತಿನ್ನುವ ಅಭ್ಯಾಸ ಮಾಡಿಸುವುದು, ಸಹ ಭೋಜನದ ಮಹತ್ವವನ್ನು ತಿಳಿಸಿಕೊಡುವುದು ಒಳ್ಳೆಯದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.