ಸಾಗರ: ನಗರದ ನೆಹರೂ ಮೈದಾನದಲ್ಲಿ ಬುಧವಾರ ನಡೆದ ₨.60ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಶಂಕುಸ್ಥಾಪನೆ ಸಮಾರಂಭಕ್ಕೆ ಹೆಜ್ಜೆ ಹೆಜ್ಜೆಗೂ ಲೋಕಸಭಾ ಚುನಾವಣೆಯ ನೀತಿ ಸಂಹಿತೆಯ ಬಿಸಿ ತಟ್ಟಿತ್ತು.

ಆಹ್ವಾನ ಪತ್ರಿಕೆಯಲ್ಲಿ ಸಮಾರಂಭ ಬೆಳಿಗ್ಗೆ 11ಕ್ಕೆ ಎಂದು ಪ್ರಕಟಿಸಲಾಗಿತ್ತು. ಆದರೆ ಬೆಳಿಗ್ಗೆ 10ಕ್ಕೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ನೂತನವಾಗಿ ನಿರ್ಮಾಣಗೊಂಡಿರುವ ಪ್ರವಾಸಿ ಮಂದಿರದ ಉದ್ಘಾಟನೆ ನೆರವೇರಿಸಿ ತಕ್ಷಣ ಸಭಾ ಕಾರ್ಯಕ್ರಮದ ಸ್ಥಳಕ್ಕೆ ಬಂದರು.

ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರು ಆಗಮಿಸುವ ಮುನ್ನವೇ ಕಾರ್ಯಕ್ರಮ ಆರಂಭವಾಗಿ ವಿವಿಧ ಸರ್ಕಾರಿ ಸವಲತ್ತುಗಳನ್ನು ಕಾಗೋಡು ತಿಮ್ಮಪ್ಪ ಅವರು ವಿತರಿಸಿ ಭಾಷಣವನ್ನು ಪೂರೈಸಿದರು.

ಬೆಳಿಗ್ಗೆ 10.45ರ ಸುಮಾರಿಗೆ ಡಾ.ಎಚ್.ಸಿ.ಮಹಾದೇವಪ್ಪ ಸಭೆಗೆ ಆಗಮಿಸಿ ಶಿಲಾನ್ಯಾಸ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಅವರು ವೇದಿಕೆಯಲ್ಲಿ ಭಾಷಣ ಮಾಡುತ್ತಿರುವ ಹೊತ್ತಿಗೆ ಅಲ್ಲಿಗೆ ಆಗಮಿಸಿದ ತಹಶೀಲ್ದಾರ್ ಎಚ್.ಭಾಗ್ಯಲಕ್ಷ್ಮೀ ಅವರು, ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ವಿಷಯವನ್ನು ಕಾಗೋಡು ತಿಮ್ಮಪ್ಪನವರ ಗಮನಕ್ಕೆ ತಂದರು. ಕೆಲ ನಿಮಿಷದಲ್ಲೇ ಲೋಕೋಪಯೋಗಿ ಸಚಿವರು ತರಾತುರಿಯಲ್ಲಿ ತಮ್ಮ ಭಾಷಣ ಮುಗಿಸಿದಾಗ ಕಾರ್ಯಕ್ರಮ ಮುಕ್ತಾಯಗೊಂಡಿತು.

ಕಾರ್ಯಕ್ರಮಕ್ಕೆ ತಾಲ್ಲೂಕಿನ ವಿವಿಧ ಭಾಗಗಳಿಂದ ಜನರು ಇನ್ನೂ ಆಗಮಿಸುತ್ತಿರುವ ಹೊತ್ತಿಗೆ ಸಭೆ ಕೊನೆಯಾಗಿತ್ತು. ಸುಮಾರು ಎರಡು ಸಾವಿರ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ನೀತಿ ಸಂಹಿತೆಯಿಂದ ತಪ್ಪಿಸಿಕೊಳ್ಳಲು ಊಟದ ವ್ಯವಸ್ಥೆ ಮಾಡಿದ್ದ ಶಾಮಿಯಾನಕ್ಕೆ ಮಾರಿಕಾಂಬಾ ಜಾತ್ರೆಗೆಂದು ಆಗಮಿಸಿರುವ ಕುಮಾರೇಶ್ವರ ನಾಟಕ ಕಂಪೆನಿಯ ಬ್ಯಾನರ್ ಅಳವಡಿಸಿ ನಾಟಕ ಕಂಪೆನಿಯವರು ಊಟ ವಿತರಿಸುತ್ತಿದ್ದಾರೆ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿತ್ತು.

ಈ ವಿಷಯ ತಿಳಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಾದ ಪರಮೇಶ್ವರ ದೂಗೂರು, ಎನ್.ಡಿ.ವಸಂತ್ಕುಮಾರ್, ಅಮೃತ್ರಾಸ್ ಸ್ಥಳಕ್ಕೆ ಆಗಮಿಸಿ ನೀತಿ ಸಂಹಿತೆ ಉಲ್ಲಂಘಿಸಿ ಊಟ ವಿತರಿಸುವುದಕ್ಕೆ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.

ನಂತರ ಊಟದ ಸಾಮಗ್ರಿಗಳನ್ನು ಹತ್ತಿರದಲ್ಲೆ ಇದ್ದ ವಿದ್ಯಾರ್ಥಿ ನಿಲಯವೊಂದಕ್ಕೆ ಸಾಗಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಅಲ್ಲಿ ಊಟ ವಿತರಿಸುವ ಕೆಲಸ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.