ಸೋಮವಾರ, ಏಪ್ರಿಲ್ 12, 2021
24 °C

ಎಂಎಫ್‌ಐ: ಸಾಲ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಕಿರು ಹಣಕಾಸು ವಲಯಕ್ಕೆ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ್ಙ100 ಕೋಟಿಗಳ ನಿಧಿ ಸ್ಥಾಪನೆಯನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ, ಕಿರು ಹಣಕಾಸು ಸಂಸ್ಥೆಗಳು (ಎಂಎಫ್‌ಐ) ಮತ್ತು ವಾಣಿಜ್ಯ ಬ್ಯಾಂಕ್‌ಗಳು ವಿತರಿಸುವ ಸಾಲದ ಪ್ರಮಾಣವು ಮುಂಬರುವ ದಿನಗಳಲ್ಲಿ ಹೆಚ್ಚುವ ನಿರೀಕ್ಷೆ ಇದೆ.ಸದ್ಯಕ್ಕೆ ಬ್ಯಾಂಕ್‌ಗಳು ಹೊಸದಾಗಿ ಸಾಲ ನೀಡುವ ಪ್ರಮಾಣ ತಗ್ಗಿಸಿವೆ. ಆದರೆ, ಪ್ರಣವ್ ಮುಖರ್ಜಿ ಅವರ ಬಜೆಟ್ ಭಾಷಣವು ಸಾಲದ ಪ್ರಮಾಣ ಹೆಚ್ಚುವ ಭರವಸೆ ಮೂಡಿಸಿದೆ. ಮುಂಬರುವ ದಿನಗಳಲ್ಲಿ ಸಾಲ ನೀಡಿಕೆಯು ಹೆಚ್ಚಲಿದ್ದು ಸರಿಯಾದ ದಿಸೆಯಲ್ಲಿ ಸಾಗುವ ಸಾಧ್ಯತೆಗಳಿವೆ ಎಂದು ‘ಎಂಎಫ್‌ಐಎನ್’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಲೋಕ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.ಕಿರು ಹಣಕಾಸು ವಲಯದ ಸ್ವಯಂ ನಿಯಂತ್ರಣಾ ಸಂಸ್ಥೆಯಾಗಿರುವ ‘ಕಿರು ಹಣಕಾಸು ಸಂಸ್ಥೆಗಳ ಜಾಲವು (ಎಂಎಫ್‌ಐಎನ್) ರಿಸರ್ವ್ ಬ್ಯಾಂಕ್‌ನಲ್ಲಿ ನೋಂದಾಯಿತಗೊಂಡಿರುವ 46 ಸಂಸ್ಥೆಗಳ ಸದಸ್ಯತ್ವ ಹೊಂದಿದೆ.ಕಿರು ಹಣಕಾಸು ಸಂಸ್ಥೆಗಳ ಸದಸ್ಯರ ಹಣಕಾಸು ಪರಿಸ್ಥಿತಿ, ಸಾಲ ಮರುಪಾವತಿ ಸಾಮರ್ಥ್ಯ ಮತ್ತಿತರ ವಿವರಗಳನ್ನು ದಾಖಲಿಸುವ ‘ಸಾಲ ಮಾಹಿತಿ ಜಾಲ’ (ಕ್ರೆಡಿಟ್ ಬ್ಯೂರೊ)  ಸ್ಥಾಪಿಸಲಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.