ಅವರು ಮೂಲತಃ ಸಿವಿಲ್ ಎಂಜಿನಿಯರ್. ಕಟ್ಟಡಗಳ ರೇಖಾಚಿತ್ರಕ್ಕಿಂತ ಅವರಿಗೆ ಮೆಚ್ಚುಗೆಯಾಗಿದ್ದು ಬಣ್ಣಗಳ ಭಾವ ಲೋಕ. ಎಂಜಿನಿಯರಿಂಗ್ ಪದವಿ ಪಡೆಯುವಾಗಲೇ ಕಲಾವಿದೆ ಶಕಾಲ್ ಸ್ಟಾರ್ ಅವರನ್ನು ತೀವ್ರವಾಗಿ ಸೆಳೆದ ಕಲಾ ಲೋಕದ ಮೇಲೂ ಒಂದು ಕಾಲಿಟ್ಟು ಪ್ರಯಾಣಿಸುವ ಸಾಹಸಕ್ಕೆ ಕೈಹಾಕಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ವಿನ್ಯಾಸ ಶಾಲೆಯಲ್ಲಿ ಕಲಾಕೃತಿ ರಚನೆಯ ಪಾಠವನ್ನೂ ಕಲಿತರು. ಕಳೆದ ಐದು ವರ್ಷಗಳಿಂದ ಕಲಾಕೃತಿ ರಚನೆ ಮೂಲಕ ತಮ್ಮಳಗಿನ ನೈಜ ಕಲಾವಿದೆಯನ್ನು ಹುಡುಕುವ ಪ್ರಯತ್ನಕ್ಕೆ ಅವರು ರಚಿಸಿದ ಹಲವಾರು ಮೂರ್ತ ಹಾಗೂ ಅಮೂರ್ತ ಕಲಾಕೃತಿಗಳಿಗೆ ಸಿಕ್ಕ ಪ್ರಶಂಸೆಗಳೇ ಸಾಕ್ಷಿ.

ಸಾಮಾಜಿಕ ಸಮಸ್ಯೆಗಳನ್ನೇ ವಿಷಯವನ್ನಾಗಿ ಆರಿಸಿಕೊಂಡ ಶಕಾಲ್ ಸ್ಟಾರ್, ಲಿಂಗ ತಾರತಮ್ಯ, ಬಡತನ, ದುಶ್ಚಟ, ಪರಿಸರ ಹಾಗೂ ಆಧ್ಯಾತ್ಮವನ್ನು ಅತ್ಯಂತ ಸೂಕ್ಷ್ಮವಾಗಿ ಗ್ರಹಿಸಿ ಬಣ್ಣಗಳಲ್ಲಿ ಮೂಡಿಸಿದ್ದಾರೆ. ತಮ್ಮ ಸುತ್ತಮುತ್ತ ನಡೆಯುತ್ತಿದ್ದ ಘಟನೆಗಳಿಂದಲೇ ಪ್ರೇರಿತರಾದ ಅವರು ಶೋಷಣೆಗೊಂದು ತಾರ್ಕಿಕ ಅಂತ್ಯ ನೀಡುವ ಹಾಗೂ ಭರವಸೆಯನ್ನು ಬಣ್ಣಗಳಲ್ಲಿ ಕಟ್ಟಿಕೊಡುವ ಪ್ರಯತ್ನ ನಡೆಸಿರುವುದು ಅವರ ಕಲಾಕೃತಿಯಲ್ಲಿ ಎದ್ದು ಕಾಣುತ್ತದೆ.

ರಿನೈಸ್ಸೆನ್ಸ್ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್ ಸೇರಿದಂತೆ ಹಲವರು ಕಲಾ ಗ್ಯಾಲರಿಗಳಲ್ಲಿ ಶಕಾಲ್ ಅವರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಇವರು ರಚಿಸಿರುವ `ಡಿಸೈರ್' ಎಂಬ ಕಲಾಕೃತಿಯನ್ನು ವಾಷಿಂಗ್ಟನ್ನ ಮಿಡ್ ಅಟ್ಲಾಂಟಿಕ್ ಗ್ರೂಪ್ ಸೈಕೋಥೆರಪಿ ಸೊಸೈಟಿಯು ಬಳಸಿಕೊಂಡಿರುವುದು ಇವರ ರಚನೆಗೆ ಹಿಡಿದ ಕನ್ನಡಿ. ನಂಬಿಕೆಯ ಆಧಾರದ ಮೇಲೆ ಮೂಡುವ ರೇಖೆಗಳಿಗೆ ಜವಾಬ್ದಾರಿ ಹಾಗೂ ಬದ್ಧತೆಯ ಸಂವೇದನೆ ಅಗತ್ಯ. ಅವುಗಳನ್ನು ಹುಡುಕುವ ಪ್ರಯತ್ನವನ್ನು ಶಕಾಲ್ ಸ್ಟಾರ್ ಅವರ ಕಲಾಕೃತಿಗಳಲ್ಲಿ ಕಾಣಬಹುದಾಗಿದೆ.

ಉದಯೋನ್ಮುಖ ಹಾಗೂ ಪ್ರಸಿದ್ಧ ಕಲಾವಿದರ ಕಲಾಕೃತಿಗಳಿಗೆ ವೇದಿಕೆಯಾಗಿರುವ ವೈಟ್ಫೀಲ್ಡ್ನಲ್ಲಿರುವ ಇನ್ಆರ್ಬಿಟ್ ಮಾಲ್ ಶಕಾಲ್ ಸ್ಟಾರ್ ಅವರ ಕಲಾಕೃತಿ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಳಿಸಿದೆ. ಜೂನ್ 7ರಿಂದ ಆರಂಭವಾಗುವ ಈ ಕಲಾಪ್ರದರ್ಶನ 23ರವರೆಗೂ ಮುಂದುವರೆಯಲಿದೆ. ಸಮಯ: ಸೋಮವಾರದಿಂದ ಗುರುವಾರದವರೆಗೂ ಬೆಳಿಗ್ಗೆ 11ರಿಂದ ರಾತ್ರಿ 9. ಶುಕ್ರವಾರ ಸೇರಿದಂತೆ ವಾರಾಂತ್ಯದಲ್ಲಿ ಬೆಳಿಗ್ಗೆ 10.30ರಿಂದ ರಾತ್ರಿ 10ರವರೆಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.