ಸಂಡೂರು (ಬಳ್ಳಾರಿ ಜಿಲ್ಲೆ): ಮಾಜಿ ಸಚಿವ ಜನಾರ್ದನ ರೆಡ್ಡಿ ಒಡೆತನದ ಅಸೋಸಿಯೇಟೆಡ್ಮೈನಿಂಗ್ (ಎಎಂಸಿ) ಗಣಿ ಪ್ರದೇಶದಲ್ಲಿ ಸಿಬಿಐ ತಂಡ ಭಾನುವಾರ ಸರ್ವೆ ಕಾರ್ಯ ನಡೆಸಿತು.

ರಾಮಘಡ ಅರಣ್ಯ ಪ್ರದೇಶದಲ್ಲಿರುವ ಎಎಂಸಿ ಗಣಿ ಪ್ರದೇಶದಲ್ಲಿ ಶನಿವಾರದಿಂದಲೇ ಕಾರ್ಯ ಆರಂಭಿಸಿರುವ ಸಿಬಿಐ ಡಿ.ಐ.ಜಿ. ಹಿತೇಂದ್ರ , ಎಸ್.ಪಿ.ಸುಬ್ರಹ್ಮಣ್ಯೇಶ್ವರ ರಾವ್ ನೇತೃತ್ವದ ತಂಡವು ಅದಿರು ಬಗೆದ ಪ್ರಮಾಣವನ್ನು ಅಳತೆ ಮಾಡಲು ಮುಂದಾಗಿದೆ.

ನಿಗದಿತ ಕಾರ್ಯಕ್ರಮದಂತೆ ಸಿಬಿಐ ತಂಡ ಭಾನುವಾರ ತ್ರೀ-ಡಿ ಲೇಸರ್ ಕಾರ್ಯಾಚರಣೆ ನಡೆಸಬೇಕಿತ್ತು. ಆದರೆ ಅಧಿಕಾರಿಗಳು ಬಿಸಿಲಿನಿಂದ ಬಸವಳಿದ ಕಾರಣ ಹಾಗೂ ಗಡಿ ಗುರುತು ಮತ್ತು ಆಳವಾದ ಅದಿರು ತೆಗೆದ ತೆಗ್ಗುಗಳ ಅಳತೆಗೆ ಹೆಚ್ಚು ಸಮಯ ಹಿಡಿಯುತ್ತಿರುವ ಕಾರಣ ತ್ರೀ-ಡಿ ಲೇಸರ್ ಯಂತ್ರ ಸೋಮವಾರ ಬಳಕೆಯಾಗುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.