ಬುಧವಾರ, ಜೂನ್ 23, 2021
30 °C

ಎಎಪಿ ಮೂರನೇ ಪಟ್ಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌): ಮುಂಬ­ರುವ ಲೋಕಸಭಾ ಚುನಾವಣೆ­ಗೆ ಆಮ್‌ ಆದ್ಮಿ ಪಕ್ಷವು (ಎಎಪಿ) 20 ಅಭ್ಯರ್ಥಿ­ಗಳನ್ನೊಳಗೊಂಡ ಮೂರನೇ ಪಟ್ಟಿ­ಯನ್ನು ಶನಿವಾರ ಬಿಡುಗಡೆ ಮಾಡಿದೆ.



ಕಿರುತೆರೆ ನಟ ದಿವಂಗತ ಜಸ್ಪಾಲ್‌ ಭಟ್ಟಿ ಅವರ ಪತ್ನಿ ಸವಿತಾ ಭಟ್ಟಿ ಅವರು ಚಂಡೀಗಡದಿಂದ ಸ್ಪರ್ಧಿಸಲಿದ್ದಾರೆ. ದೆಹಲಿ ವಿಶ್ವವಿದ್ಯಾಲಯ ಪ್ರೊಫೆ­ಸರ್‌, ಸಮಾಜಶಾಸ್ತ್ರಜ್ಞ ಆನಂದ್‌ ಕುಮಾರ್‌  ಈಶಾನ್ಯ ದೆಹಲಿ ಕ್ಷೇತ್ರದಲ್ಲಿ ಕಣಕ್ಕಿಳಿಯ­ಲಿ­ದ್ದಾರೆ.



ಇವರ ಜೊತೆಗೆ, ಮಧ್ಯಪ್ರದೇಶ ಹಾಗೂ ಒಡಿಶಾದ ತಲಾ ಏಳು ಕ್ಷೇತ್ರ­ಗಳಿಗೆ, ಕೇರಳದ ಎರಡು ಮತ್ತು ಬಿಹಾ­ರದ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಎಎಪಿ ಘೋಷಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.