ಪೈನಾಪಲ್ ಕೇಕ್

ಬೇಕಾಗುವ ಸಾಮಗ್ರಿಗಳು: ಮೈದಾ 250 ಗ್ರಾಂ, ಪುಡಿ ಸಕ್ಕರೆ 250 ಗ್ರಾಂ, ಬೇಕಿಂಗ್ ಪೌಡರ್ 5 ಗ್ರಾಂ, ನೀರು 250 ಎಂಎಲ್, ಸೋಡಾ 3 ಗ್ರಾಂ, ಎಣ್ಣೆ 30 ಎಂಎಲ್, ಹಾಲಿನ ಪುಡಿ 30 ಗ್ರಾಂ, ಪೈನಾಪಲ್ ಎಸೆನ್ಸ್ 2 ಚಮಚ, ಚೆರ್ರಿ 5-6, ಲೆಮೆನ್ ಹಳದಿ ಬಣ್ಣ 1 ಚಿಟಿಕೆ.

ಮಾಡುವ ವಿಧಾನ: ಮೊದಲು ಮೈದಾ, ಬೇಕಿಂಗ್ ಪೌಡರ್, ಅಡಿಗೆ ಸೋಡಾ, ಹಾಲಿನ ಪುಡಿ ಎಲ್ಲಾ ಒಟ್ಟಿಗೆ ಜರಡಿ ಹಿಡಿದುಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಸಕ್ಕರೆ ಪುಡಿ ಮತ್ತು ನೀರು ಹಾಕಿ 5 ನಿಮಿಷ ಕೈಯಾಡಿಸಿ, ಮೇಲೆ ಜರಡಿ ಹಿಡಿದ ಹಿಟ್ಟನ್ನು ಈ ಸಕ್ಕರೆ ನೀರಿಗೆ ಹಾಕಿ 1 ನಿಮಿಷ ಕೈಯಾಡಿಸಿ, ಇದಕ್ಕೆ ಪೈನಾಪಲ್ ಎಸೆನ್ಸ್ ಮತ್ತು ಎಣ್ಣೆ ಹಾಕಿ 2 ನಿಮಿಷ ಕೈಯಾಡಿಸಿ (ಬ್ಲೆಂಡ್ ಮಾಡಿ). ಆನಂತರ ಲೆಮೆನ್ ಎಲ್ಲೊ ಕಲರ್ ಹಾಕಿ 1 ನಿಮಿಷ ಕೈಯಾಡಿಸಿ. ಒಂದು ಅಲ್ಯುಮಿನಿಯಂ ಪಾತ್ರೆಗೆ ತುಪ್ಪ ಸವರಿ ಸ್ವಲ್ಪ ಮೈದಾ ಹಿಟ್ಟನ್ನು ಉದರಿಸಿಕೊಳ್ಳಿ. ನಂತರ ರೆಡಿ ಮಾಡಿರುವ ಹಿಟ್ಟನ್ನು ಪಾತ್ರೆಗೆ ಹಾಕಿಕೊಳ್ಳಿ. ನಂತರ ಹಿಟ್ಟು ಹಾಕಿದ ಪಾತ್ರೆಯನ್ನು ಕುಕ್ಕರ್ನಲ್ಲಿ ಇಟ್ಟು ಕುಕ್ಕರ್ ಮುಚ್ಚಿಡಿ (ವಿಸಿಲ್ ಹಾಕದೆ). ಮೊದಲು 20 ನಿಮಿಷ ಮೀಡಿಯಂ ಫ್ಲೆಮ್ನಲ್ಲಿ ಇಟ್ಟು ಬೇಯಿಸಿ. ನಂತರ 10 ನಿಮಿಷ ಕಡಿಮೆ ಉರಿಯಲ್ಲಿ ಇಟ್ಟು ಬೇಯಿಸಿ. ಆರಿದ ನಂತರ ಸರ್ವಿಂಗ್ ಪ್ಲೇಟ್ನಲ್ಲಿ ಚೆರ್ರಿಯಿಂದ ಅಲಂಕರಿಸಿಕೊಳ್ಳಿ.

ಪ್ರೂಟ್ ಬಾಲ್ ಕೇಕ್

ಬೇಕಾಗುವ ಸಾಮಗ್ರಿಗಳು: ಮೈದಾ 2 ಬಟ್ಟಲು, ಬೇಕಿಂಗ್ ಪೌಡರ್ 1 ಚಮಚ, ಅಡಿಗೆ ಸೋಡಾ ಕಾಲು ಚಮಚ, ಉಪ್ಪು ರುಚಿಗೆ, ಪುಡಿ ಸಕ್ಕರೆ, 1 ಬಟ್ಟಲು, ಹಾಲಿನ ಪುಡಿ 1 ಬಟ್ಟಲು, ಬೆಣ್ಣೆ 1 ಬಟ್ಟಲು, ಹಾಲು ಒಂದೂವರೆ ಬಟ್ಟಲು, ಹಳದಿ ಬಣ್ಣ, ಪೈನಾಪಲ್ ಎಸೆನ್ಸ್, ಹಸಿರು ಬಣ್ಣ, ಪಿಸ್ತಾ ಎಸೆನ್ಸ್, ಕೆಂಪು ಬಣ್ಣ, ಸ್ಟ್ರಾಬೇರಿ ಎಸೆನ್ಸ್ ಎಲ್ಲವೂ ಅರ್ಧ ಚಮಚ, ಚೆರ್ರಿ 1 ಚಮಚ.

ಮಾಡುವ ವಿಧಾನ: ಮೈದಾ, ಉಪ್ಪು, ಬೇಕಿಂಗ್ ಪೌಡರ್, ಅಡಿಗೆ ಸೋಡಾ ಎಲ್ಲಾ ಜರಡಿ ಹಿಡಿದುಕೊಳ್ಳಿ. ಹಾಲನ್ನು ಕುದಿ ಬರುವವರೆಗೆ ಕುದಿಸಿ, ಇದಕ್ಕೆ ಹಾಲಿನ ಪುಡಿ ಹಾಕಿ. ಬೆಣ್ಣೆ ಹಾಗೂ ಸಕ್ಕರೆ ಪುಡಿ ಹಾಕಿ ಚನ್ನಾಗಿ ಕಲಸಿ. ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪ ಮೈದಾ ಮಿಶ್ರಣ ಹಾಕಿ ಹಾಲಿನ ಜೊತೆ ಚನ್ನಾಗಿ ಒಂದೇ ರೀತಿಯಲ್ಲಿ ಕೈಯಾಡಿಸಿ. ಈ ಮೇಲಿನ ಹಿಟ್ಟನ್ನು ಮೂರು ಭಾಗ ಮಾಡಿಕೊಳ್ಳಿ, ಒಂದಕ್ಕೆ ಹಳದಿ ಬಣ್ಣ, ಪೈನಾಪಲ್ ಎಸೆನ್ಸ್ ಹಾಕಿ ಇನ್ನೊಂದಕ್ಕೆ ಹಸಿರು ಬಣ್ಣ, ಪಿಸ್ತಾ ಎಸೆನ್ಸ್ ಹಾಕಿ. ಮತ್ತೊಂದಕ್ಕೆ ಕೆಂಪು ಬಣ್ಣ, ಸ್ಟ್ರಾಬೇರಿ ಎಸೆನ್ಸ್ ಹಾಕಿ, ಒಂದು ಅಲ್ಯುಮಿನಿಯಂ ಪಾತ್ರೆಗೆ ಸುತ್ತಲು ಉದುರಿಸಿ. ಮೇಲೆ ತಯಾರಿಸಿದ ಹಿಟ್ಟಿನ ಮಿಶ್ರಣವನ್ನು ಒಂದರ ಮೇಲೆ ಒಂದನ್ನು ಹಾಕಿ ಕುಕ್ಕರಿನಲ್ಲಿ 35-45 ನಿಮಿಷ ಸಣ್ಣನೆ ಉರಿಯಲ್ಲಿ ಬೇಯಿಸಿ. ಆರಿದ ನಂತರ ಸರ್ವಿಂಗ್ ಪ್ಲೇಟ್ನಲ್ಲಿ ಚೆರ್ರಿಯಿಂದ ಅಲಂಕರಿಸಿಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.