ಶುಕ್ರವಾರ, ಜೂನ್ 25, 2021
24 °C

ಎಚ್ಚೆತ್ತುಕೊಂಡ ಬಿಬಿಎಂಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್ಚೆತ್ತುಕೊಂಡ ಬಿಬಿಎಂಪಿ

ಬೆಂಗಳೂರಿನ ಬಹಳ ಮುಖ್ಯವೆನಿಸುವ ಸ್ಥಳಗಳಲ್ಲೇ ಸೈನ್ ಬೋರ್ಡ್ ಇಲ್ಲದ ಅವ್ಯವಸ್ಥೆ ಕುರಿತು ಲೇಖಕ ಎಸ್.ಆರ್.ರಾಮಕೃಷ್ಣ ಅವರು ಬರೆದಿದ್ದ `ಫಲಕಗಳಿಲ್ಲದ ನಗರ~ (ಫೆ.20) ಲೇಖನಕ್ಕೆ ಬಿಬಿಎಂಪಿ ಎಚ್ಚೆತ್ತುಕೊಂಡಿದೆ.

 

ಸರಿಯಾದ ರಸ್ತೆ ಫಲಕಗಳಿಲ್ಲದೇ ಪ್ರಯಾಣಿಕರು ಅನುಭವಿಸುತ್ತಿದ್ದ ಪಜೀತಿಗೆ ಕಡಿವಾಣ ಹಾಕುವ ಸಲುವಾಗಿ ನಗರದೆಲ್ಲೆಡೆ ಈಗ ರಸ್ತೆ ಸೂಚಕ ಫಲಕಗಳನ್ನು ಹಾಕಲು ತೀರ್ಮಾನಿಸಿದೆ. ಇದು `ಸ್ವಪ್ನ ನಗರಿ~ ಫಲಶ್ರುತಿ.ನಗರದಾದ್ಯಂತ ರಸ್ತೆ ಕವಲೊಡೆದ ಹಲವು ಜಾಗಗಳಿವೆ. ಅಲ್ಲೆಲ್ಲಾ ಯಾವ ರಸ್ತೆ ಎಲ್ಲಿಗೆ ಹೋಗುತ್ತದೆ ಎಂದು ಸೂಚಿಸುವ ಒಂದು ಫಲಕವೂ ಇರಲಿಲ್ಲ. ಇದರಿಂದಾಗುವ ತೊಂದರೆಗಳನ್ನು ಕುರಿತು ಲೇಖಕರು ತಮ್ಮ ಲೇಖನದಲ್ಲಿ ವಿವಿಧ ಮಜಲುಗಳಲ್ಲಿ ಬಿಚ್ಚಿಟ್ಟಿದ್ದರು.ದೇವನಹಳ್ಳಿ ವಿಮಾನ ನಿಲ್ದಾಣದಿಂದ ಬರುವಾಗ ಸಿಗುವ ವಿಂಡ್ಸರ್ ಮ್ಯೋನರ್ ಹತ್ತಿರ ಇರುವ ಸೇತುವೆ ಏರಿದರೆ ಎಲ್ಲಿ ಹೋಗುತ್ತದೆ, ಏರದಿದ್ದರೆ ಎಲ್ಲಿ ಹೋಗುತ್ತದೆ ಎಂದು ಹೇಳುವ ಯಾವ ಫಲಕವೂ ಇರಲಿಲ್ಲ. ಇಲ್ಲಿ ದಾರಿ ತಪ್ಪಿ ಪರದಾಡಿದವರ ಸಂಖ್ಯೆ ಅಧಿಕ.ವಿಂಡ್ಸರ್ ಮ್ಯಾನರ್ ಸೇತುವೆ ಪ್ರಯಾಣಿಕರ ದಾರಿ ತಪ್ಪಿಸುವ ಪ್ರಮುಖ ಸ್ಥಳಗಳಲ್ಲಿ ಒಂದು ಎಂಬ ಕುಖ್ಯಾತಿಗೆ ಕೂಡ ಪಾತ್ರವಾಗಿದೆ. ಬಿಬಿಎಂಪಿ ತನ್ನ ತಪ್ಪನ್ನು ನಿವಾರಿಸಿ ಪ್ರಯಾಣಿಕರಿಗೆ ಸರಿ ದಾರಿ ತೋರುವ ನಿಟ್ಟಿನಲ್ಲಿ ಈಗ ನಗರದಾದ್ಯಂತ ಫಲಕಗಳನ್ನು ಹಾಕಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.ಹಂತ ಹಂತವಾಗಿ ನಡೆಯುವ ಈ ಕಾರ್ಯದ ಪ್ರಥಮದಲ್ಲಿ ವಿಂಡ್ಸರ್ ಮ್ಯಾನರ್, ಕಾಮರಾಜ ರಸ್ತೆ ಹಾಗೂ ಡಿಕಿನ್‌ಸನ್ ರಸ್ತೆಯಲ್ಲಿ ಸೈನ್‌ಬೋರ್ಡ್‌ಗಳನ್ನು ಹಾಕಿಸಿದೆ.ಯಾವ ರಸ್ತೆಗಳು ಎಲ್ಲೆಲ್ಲಿಗೆ ಹೋಗುತ್ತವೆ ಎಂಬುದನ್ನು ಇಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಮುಂದಿನ 45ರಿಂದ 60 ದಿನದಲ್ಲಿ ಸಂಚಾರದ ಪ್ರತಿ ನಿಮಿಷವೂ ಮುಖ್ಯ ಎನ್ನುವಂಥ ಸ್ಥಳಗಳ್ಲ್ಲಲೆಲ್ಲಾ ಸರಿಯಾದ ರಸ್ತೆ ಸೂಚಕ ಫಲಕಗಳು ತಲೆ ಎತ್ತಲಿವೆ. ಬಿಬಿಎಂಪಿ ಕೊನೆಗೂ ಎಚ್ಚೆತ್ತುಕೊಂಡಿದೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.