ಪುಣೆ: ಎಚ್ಎಎಲ್ ತಂಡದವರು 33ನೇ ಫೆಡರೇಷನ್ ಕಪ್ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಮತ್ತೊಂದು ಸೋಲು ಅನುಭವಿಸಿದರು.

ಇಲ್ಲಿನ ಬಾಳೇವಾಡಿಯಲ್ಲಿರುವ ಕ್ರೀಡಾ ಸಂಕೀರ್ಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸಲಗಾಂವ್ಕರ್ ತಂಡ 4-0 ರಲ್ಲಿ ಬೆಂಗಳೂರಿನ ಎಚ್ಎಎಲ್ ವಿರುದ್ಧ ಜಯ ಸಾಧಿಸಿತು.

ಸೊಗಸಾದ ಪ್ರದರ್ಶನ ನೀಡಿದ ಸಲಗಾಂವ್ಕರ್ ಪರ ರ್ಯುಜಿ ಸುಯೇಕಾ (26ನೇ ನಿಮಿಷ), ರೋಕಸ್ ಲಮಾರೆ (29), ಚಿದಿ ಎದೇ (32) ಹಾಗೂ ಲೂಸಿಯಾನೊ ಸಬ್ರೋಸಾ (52) ಗೋಲು ತಂದಿತ್ತರು. ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಎಚ್ಎಎಲ್ ಪಾಯಿಂಟ್ ಖಾತೆ ತೆರೆದಿಲ್ಲ.

ಸಲಗಾಂವ್ಕರ್ಗೆ ಇದು ಟೂರ್ನಿಯಲ್ಲಿ ಲಭಿಸಿದ ಮೊದಲ ಗೆಲುವು. ಈ ತಂಡ ಒಟ್ಟು ನಾಲ್ಕು ಪಾಯಿಂಟ್ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.