ಶುಕ್ರವಾರ, ಜನವರಿ 24, 2020
17 °C

ಎಚ್‌ಎಎಲ್‌ಗೆ ಮತ್ತೊಂದು ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಗಾಂವ್: ಸತತ ಸೋಲಿನಿಂದ ಸಂಕಷ್ಟಕ್ಕೆ ಸಿಲುಕಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್ (ಎಚ್‌ಎಎಲ್) ತಂಡಕ್ಕೆ ಮತ್ತೊಂದು ಸೋಲು ಅಪ್ಪಳಿಸಿದೆ.ಬುಧವಾರ ನಡೆದ 15ನೇ ಸುತ್ತಿನ ಪಂದ್ಯದಲ್ಲಿ ಎಚ್‌ಎಎಲ್ 0-4ರಲ್ಲಿ ಗೋಲುಗಳಿಂದ ಸಲಗಾಂವ್ಕರ್ ಎದುರು ಸೋಲು ಕಂಡಿತು. ಈ ಮೂಲಕ ಆತಿಥೇಯ ತಂಡ ಸತತ ಐದನೇ ಗೆಲುವು ಪಡೆಯಿತು.ಸಲಗಾಂವ್ಕರ್ ತಂಡ ಒಟ್ಟು 15 ಪಂದ್ಯಗಳಿಂದ 25 ಪಾಯಿಂಟ್ ಗಳಿಸಿದೆ. ಆದರೆ, ಎಚ್‌ಎಎಲ್ ಈ ಹಿಂದೆ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದು ಮೂರು ಪಾಯಿಂಟ್ ಮಾತ್ರ ಕಲೆ ಹಾಕಿದೆ.

ಎಚ್‌ಎಎಲ್‌ಗೆ ಈ ಋತುವಿನಲ್ಲಿ ಒಂದೂ ಪಂದ್ಯದಲ್ಲಿ ಗೆಲುವು ಪಡೆಯಲು ಸಾಧ್ಯವಾಗಿಲ್ಲ.

ಪ್ರತಿಕ್ರಿಯಿಸಿ (+)