ಶನಿವಾರ, ಜೂನ್ 19, 2021
28 °C

ಎತ್ತರಿಸಿದ ರೈಲು ವ್ಯವಸ್ಥೆ ಮುಂದಿನ ವರ್ಷ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಚೆನ್ನೈ (ಐಎಎಸ್‌ಎಸ್): ಚೆನ್ನೈನಲ್ಲಿ ಆರಂಭವಾಗಿರುವ ಎತ್ತರಿಸಿದ ರೈಲು ಸಂಚಾರ ವ್ಯವಸ್ಥೆಯ ವಿಸ್ತರಣಾ ಕಾಮಗಾರಿಯಾದ ಕ್ಷಿಪ್ರ ಸಮೂಹ ಸಂಚಾರ ವ್ಯವಸ್ಥೆ (ಎಂಆರ್‌ಟಿಎಸ್) 2013ಕ್ಕೆ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಹೇಳಿದ್ದಾರೆ.ವೇಲಚೇರಿ- ಸಂತ ಥಾಮಸ್ ಮೌಂಟ್ ನಡುವಿನ ಎಂಆರ್‌ಟಿಎಸ್ ಕಾಮಗಾರಿಯೂ ಮುಂದಿನ ಆರ್ಥಿಕ ವರ್ಷದಲ್ಲಿ ಮುಗಿಯಲಿದೆ. ಸದ್ಯ ಚೆನ್ನೈ ಬೀಚ್- ವೇಲಚೇರಿ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ.156 ವರ್ಷಗಳಷ್ಟು ಹಳೆಯದಾದ ರಾಯಪುರಂ ರೈಲು ನಿಲ್ದಾಣವನ್ನು ಬೃಹತ್ ನಿಲ್ದಾಣವನ್ನಾಗಿ (ಟರ್ಮಿನಲ್) ಪರಿವರ್ತಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ದಕ್ಷಿಣ ಭಾರತದ ಮೊದಲ ರೈಲು ನಿಲ್ದಾಣ ಎಂಬ ಅಭಿದಾನಕ್ಕೆ ಪಾತ್ರವಾದ ಇದು 1856ರಲ್ಲಿ ಉದ್ಘಾಟನೆಗೊಂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.